Lakshana Serial: ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ ಶಕುಂತಳಾದೇವಿ, ಭಾರ್ಗವಿ ಆಟಕ್ಕೆ ನಕ್ಷತ್ರ ಸಂಸಾರದಲ್ಲಿ ಬಿರುಗಾಳಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 20, 2022 | 2:06 PM

ಭಾರ್ಗವಿಯ ಕಾರಣದಿಂದ ಭೂಪತಿಯ ಮನೆಯ ನೆಮ್ಮದಿ ಕೆಟ್ಟು ಹೋಗಿದೆ, ಹಾಗೂ ಈಕೆಯಿಂದಾಗಿ ಇನ್ನೆಷ್ಟು ಅವಾಂತರಗಳು ಆಗುತ್ತದೋ ಎಂದು ಮುಂದೆ ನೋಡಬೇಕಾಗಿದೆ.

Lakshana Serial: ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ ಶಕುಂತಳಾದೇವಿ, ಭಾರ್ಗವಿ ಆಟಕ್ಕೆ ನಕ್ಷತ್ರ ಸಂಸಾರದಲ್ಲಿ ಬಿರುಗಾಳಿ
Lakshana Serial
Follow us on

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ (Lakshana) ಧಾರವಾಹಿಯು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪಟಾಕಿಯ ಸದ್ದಿಗೆ ಭಯಗೊಂಡಿದ್ದ ಚಂದ್ರಶೇಖರ್ ಅವರನ್ನು ನಕ್ಷತ್ರ ಮತ್ತು ಆರತಿ ಸಮಾಧಾನ ಮಾಡುತ್ತಿದ್ದರು. ಅಷ್ಟರಲ್ಲೇ ಭಾರ್ಗವಿ ಬೇರೊಂದು ಸಿಮ್ ಕಾರ್ಡ್ನಿಂದ ಫೋನ್ ಮಾಡಿ ಸಿ.ಎಸ್‌ಗೆ ಹೆದರಿಸುತ್ತಾಳೆ. ತಕ್ಷಣ ನಕ್ಷತ್ರ ಫೋನ್ ತೆಗೆದುಕೊಂಡು ನನ್ನ ಅಪ್ಪನ ಮೇಲೆ ನಿನಗೆ ಏನು ದ್ವೇಷ ಎಂದು ಕೇಳುತ್ತಾಳೆ. ನಿನ್ನ ತಂದೆ ಒಬ್ಬ ಪಾಪಿ, ಪರಮ ಪಾಪಿ ಎಂದು ಹೇಳುತ್ತಾಳೆ ಭಾರ್ಗವಿ.

ನಿನ್ನ ಪಾಪದ ಕೊಡ ತುಂಬಿರಬೇಕು ಅದಕ್ಕೆ ಇಷ್ಟೆಲ್ಲಾ ಪಾಪದ ಕೆಲಸ ಮಾಡಿದ್ದೀಯಾ, ನನ್ನ ತಂದೆಯನ್ನು ಹೇಗೆ ರಕ್ಷಣೆ ಮಾಡಬೇಕೆಂದು ನನಗೆ ಗೊತ್ತು ಎಂದು ನಕ್ಷತ್ರ ಚಾಲೆಂಜ್ ಮಾಡುತ್ತಾಳೆ. ಈಕೆಯ ಮಾತಿನ ಮಧ್ಯೆಯೇ ಭಾರ್ಗವಿ ಕಾಲ್ ಕಟ್ ಮಾಡಿ ಸಿಮ್ ಕಾರ್ಡ್ ಬಿಸಡುತ್ತಾಳೆ. ಇದನ್ನು ನೋಡಿದ ಭೂಪತಿ ನಿವ್ಯಾಕೆ ಸಿಮ್ ಕಾರ್ಡ್ ಎಸೆದದ್ದು ಎಂದು ಕೇಳಿದಾಗ ಅದು ತುಂಬಾ ಹಳೆಯದು ಅದಕ್ಕೆ ಎಸೆದೆ ಎಂದು ಹೇಳುತ್ತಾಳೆ. ಮನಸ್ಸಿನಲ್ಲೇ ಭೂಪತಿ ನೀನು ಪದೇ ಪದೇ ನಮ್ಮ ಮಧ್ಯೆ ಬರುತ್ತಿದ್ದಿಯಾ ಹೇಗೆ ಮಾಡಿದರೆ ನಿನಗೂ ಒಂದು ಗತಿ ಕಾಣಿಸುತ್ತೇನೆ ಎಂದು ಗೊಣಗಾಡುತ್ತಾಳೆ ಭಾರ್ಗವಿ.

ಇತ್ತ ಕಡೆ ಕೊರಿಯರ್‌ನಲ್ಲಿ ಬಂದ ಲೆಟರ್ ಕಂಡು ಗಾಬರಿಯಾಗಿ ಚಂದ್ರಶೇಖರ್ ಕಾರಣದಿಂದ ನನ್ನ ಮಗನ ಪ್ರಾಣಕ್ಕೆ ಅಪಾಯದಲ್ಲಿದೆ ಎಂದು ಶಕುಂತಳಾದೇವಿ ಚಿಂತೆಯಲ್ಲಿ ಕುಳಿತಿರುತ್ತಾರೆ. ಆಗಲೇ ಸಿ.ಎಸ್‌ಗೆ ಫೋನ್ ಮಾಡಿ ಭೂಪತಿಯ ಜೊತೆಗೆ ಮಾತಾಡುತ್ತಾರೆ. ಅಲ್ಲಿಂದ ಇನ್ನೂ ಹೊರಡಲಿಲ್ಲವ, ಬೇಗ ಮನೆಗೆ ಬಾ ಎಂದು ಗದರಿಸುತ್ತಾರೆ. ಅಮ್ಮನ ಮಾತಿಗೆ ಬೆಲೆ ಕೊಟ್ಟು ಭೂಪತಿ ಮತ್ತು ನಕ್ಷತ್ರ ತಕ್ಷಣ ಅಲ್ಲಿಂದ ಹೊರಡುತ್ತಾರೆ. ಮನೆಗೆ ಬಂದ ತಕ್ಷಣ ಶಕುಂತಳಾದೇವಿ ನೀನು ಏನು ನಡೆಸುತ್ತಿದ್ದೀಯಾ ಭೂಪತಿ ಎಂದು ಕೇಳುತ್ತಾರೆ. ಆಗ ನಡೆದ ಘಟನೆಯನ್ನೆಲ್ಲಾ ಭೂಪತಿ ಹೇಳುತ್ತಾನೆ.

ಇದನ್ನು ಓದಿLakshana Serial: ಕಥೆಯ ರಿಯಲ್ ವಿಲನ್ ಹುಡುಕಾಟದಲ್ಲಿ ಭೂಪತಿ – ನಕ್ಷತ್ರ, ಯಾರು ಈ ಹೊಸ ವಿಲನ್

ಭೂಪತಿಯ ಈ ಮಾತಿನಿಂದ ಕೋಪಗೊಂಡ ಶಕುಂತಳಾದೇವಿ ನಾನು ನಿನಗೆ ಎಷ್ಟು ಸಲ ಹೇಳಿದ್ದೇನೆ, ಆ ಮನುಷ್ಯನ ವಿಷಯಕ್ಕೆ ಹೊಗಬೇಡ ಎಂದು. ಅವನ ಕಾರಣದಿಂದ ನಿನ್ನನ್ನು ಕಳೆದುಕೊಳ್ಳಲು ನಾನು ತಯಾರಿಲ್ಲ. ನಿನ್ನ ಪ್ರಾಣಕ್ಕೆ ಅಪಾಯ ಇದೆ ಎಂದು ಹೇಳುತ್ತಾರೆ. ಇಲ್ಲ ಅಮ್ಮ ಆ ಹೆಂಗಸಿನ ಟಾರ್ಗೆಟ್ ಸಿ.ಎಸ್, ನಾನಲ್ಲ ಎಂದು ಭೂಪತಿ ಹೇಳಿದಾಗ, ನೀನೇ ಆ ಹೆಂಗಸಿನ ಟಾರ್ಗೆಟ್ ನೋಡು ಈ ಲೆಟರ್ ಎಂದು ಶಕುಂತಳಾದೇವಿ ತೋರಿಸುತ್ತಾಳೆ. ಆ ಲೆಟರ್ ಓದಿದಾಗ ಭೂಪತಿ ಮತ್ತು ನಕ್ಷತ್ರ ಒಂದು ಕ್ಷಣ ಗಾಬರಿ ಆಗುತ್ತಾರೆ.

ಸಂಕಷ್ಟದಲ್ಲಿರುವವರನ್ನು ಅರ್ಧದಲ್ಲೇ ಬಿಟ್ಟು ಬರುವುದು ಮಾನವೀಯತೆ ಅಲ್ಲ ಅಮ್ಮ ಎಂದು ಭೂಪತಿ ಶಕುಂತಳಾದೇವಿಗೆ ಹೇಳಿದಾಗ ಸಿಟ್ಟುಗೊಂಡ ಆಕೆ, ನೋಡು ಭೂಪತಿ ಅವನ್ಯಾರೋ ಚಂದ್ರಶೇಖರ್ ಕಾರಣಕ್ಕೆ ನಿನ್ನನ್ನು ಬಲಿಪಶು ಮಾಡಲು ನಾನು ತಯಾರಿಲ್ಲ. ನೆನ್ನೆ ಮೊನ್ನೆ ಬಂದ ಮಗಳಿಗೊಸ್ಕರ ಆ ಮನುಷ್ಯ ಅಷ್ಟೆಲ್ಲಾ ಮಾಡಿರಬೇಕಾದರೆ, ಇನ್ನು ನಾನು ನಿನ್ನನ್ನು ಒಂಭತ್ತು ತಿಂಗಳು ಹೊತ್ತು, ಇಪ್ಪತ್ತೊಂಭತ್ತು ವರ್ಷ ಸಾಕಿದ್ದೇನೆ. ನನಗೆ ಎಷ್ಟು ಕಾಳಜಿ ಇರಬೇಡಾ, ಮಕ್ಕಳ ವಿಷಯದಲ್ಲಿ ಪ್ರತಿಯೊಬ್ಬ ತಾಯಿಯೂ ಸ್ವಾರ್ಥಿಯಾಗಿರುತ್ತಾಳೆ. ಹಾಗೆ ನಾನು ಕೂಡಾ ನನ್ನ ಮಗನ ವಿಷಯದಲ್ಲಿ ಸ್ವಾರ್ಥಿ.

ಆ ಸಿ.ಎಸ್ ವಿಷಯಕ್ಕೆ ಇನ್ನು ಮುಂದೆ ನೀನು ತಲೆ ಹಾಕಬಾರದು, ಆ ಮನುಷ್ಯ ನಮ್ಮ ಮನೆಯ ಪಾಲಿಗೆ ಸತ್ತು ಹೋಗಿದ್ದಾನೆ ಎಂದು ಹೇಳುತ್ತಾರೆ. ಶಕುಂತಳಾದೇವಿಯ ಈ ಮಾತಿನಿಂದ ಬೇಸರಗೊಂಡ ನಕ್ಷತ್ರ, ಅತ್ತೆ ನಮ್ಮ ಅಪ್ಪನಿಗೆ ಯಾಕೆ ಹೀಗೆ ಹೇಳುತ್ತೀರಾ ಬಿಡ್ತು ಅನ್ನಿ ಎಂದು ಹೇಳುತ್ತಾಳೆ. ನೀನು ತೆಪ್ಪಗೆ ಈ ಮನೆಯಲ್ಲಿ ಇರುವುದಾದರೆ ಇರು, ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಶಕುಂತಳಾದೇವಿ ನಕ್ಷತ್ರಳಿಗೆ ಹೇಳುತ್ತಾರೆ. ಭಾರ್ಗವಿಯ ಕಾರಣದಿಂದ ಭೂಪತಿಯ ಮನೆಯ ನೆಮ್ಮದಿ ಕೆಟ್ಟು ಹೋಗಿದೆ, ಹಾಗೂ ಈಕೆಯಿಂದಾಗಿ ಇನ್ನೆಷ್ಟು ಅವಾಂತರಗಳು ಆಗುತ್ತದೋ ಎಂದು ಮುಂದೆ ನೋಡಬೇಕಾಗಿದೆ.

ಮಧುಶ್ರೀ

Published On - 12:29 pm, Wed, 19 October 22