ಹೊಂಗನಸು: ವಸುಧರಾಳನ್ನು ಎತ್ತಿಕೊಂಡ ರಿಷಿ; ಏನ್ ನಡೀತಿದೆ ಎಂದು ಶಾಕ್ ಆದ ಗೌತಮ್

Honganasu Serial Update: ಬೆಳಗ್ಗೆ ಕಾಲೇಜಿಗೆ ಬಂದ ರಿಷಿ, ಜಗತಿ ಬಳಿ ಬಂದು ಚಿಕ್ಕ ಸಹಾಯ ಮಾಡಬೇಕು ಎಂದು ಕೇಳಿದ. ಏನಿರಬಹುದು ಎಂದು ಜಗತಿ ಗಾಬರಿ ಆದಳು.

ಹೊಂಗನಸು: ವಸುಧರಾಳನ್ನು ಎತ್ತಿಕೊಂಡ ರಿಷಿ; ಏನ್ ನಡೀತಿದೆ ಎಂದು ಶಾಕ್ ಆದ ಗೌತಮ್
ಹೊಂಗನಸು ಸೀರಿಯಲ್
Follow us
TV9 Web
| Updated By: ಮದನ್​ ಕುಮಾರ್​

Updated on:Oct 19, 2022 | 4:01 PM

ವಸುಧರಾ ಮತ್ತು ರಿಷಿ ಇಬ್ಬರೂ ಒಟ್ಟಿಗೆ ಬೈಕ್‌ನಲ್ಲಿ ಹೋಗಿರುವುದನ್ನು ಸಹಿಸದೇ ಗೌತಮ್ ರಿಷಿಗೆ ಫೋನ್ ಮಾಡಿದ. ಬಿಟ್ಟು ಬಂದ್ರು ಇವನ ಕಾಟ ತಪ್ಪಿಲ್ಲ ಎಂದು ಬೈಯ್ದುಕೊಳ್ಳುತ್ತಾ ಗೌತಮ್ ಕಾಲ್ ಕಟ್ ಮಾಡಿದ ರಿಷಿ. ಅಷ್ಟಕ್ಕೆ ಸುಮ್ಮನಾಗದ ಗೌತಮ್, ವಸುಗೆ ಕಾಲ್ ಮಾಡಿದ. ವಸು ಪಕ್ಕದಲ್ಲೇ ಇದ್ದ ರಿಷಿ ಬೇಡ ಎಂದರೂ ಕಾಲ್ ರಿಸೀವ್ ಮಾಡಿದಳು. ರಿಷಿ ಇದ್ದಾನಾ ಎಂದು ಗೌತಮ್ ಕೇಳಿದ. ಇಲ್ಲ ಅಂತ ಹೇಳು ಎಂದರೂ ಕೇಳದೇ ಪಕ್ಕದಲ್ಲೇ ಇದ್ದು ಹೀಗೆಲ್ಲ ಸುಳ್ಳು ಹೇಳಬಾರದು ಎಂದಳು. ನಂತರ ಮಾತನಾಡಿದ ರಿಷಿ ಏನೋ ನಿನ್ನ ಗೋಳು ಎಂದು ಗೌತಮ್‌ಗೆ ಬೈಯ್ದ. ರಿಷಿ ಬಳಿ ಬೈಯಿಸಿಕೊಂಡ ಗೌತಮ್ ಕೋಪದಿಂದ ಫೋನ್ ಕಟ್ ಮಾಡಿದ. ರಿಷಿ ಬೇಕು ಅಂತಾನೇ ಅವಾಯ್ಡ್ ಮಾಡುತ್ತಿದ್ದಾನೆ ಎಂದು ಮಹೆಂದ್ರ ಬಳಿ ತನ್ನ ಗೋಳು ಹೇಳಿಕೊಂಡ ಗೌತಮ್.

ಮನೆಗೆ ಬಂದ ಗೌತಮ್ ದೇವಯಾನಿ ಬಳಿ ತಾನು ಹೀರೋ ಆದೆ ಅಂತ ಹೆಮ್ಮೆಯಿಂದ ಬೀಗಿದ. ನೀನು ಹೀರೋ ಆದ್ಯಾ ಎಂದು ದೇವಯಾನಿ ವ್ಯಂಗ್ಯ ವಾಡಿದಳು. ಬಳಿಕ ದೇವಯಾನಿ ಮುಂದೆ ಜಗತಿ ಬಗ್ಗೆ ಹಾಡಿಹೊಗಳಿದ ಗೌತಮ್. ‘ಜಗತಿ ಮೇಡಮ್ ಕಾನ್ಸೆಪ್ಟ್ ಎಲ್ಲಾ ರಿಷಿಗೆ ತುಂಬಾ ಇಷ್ಟವಾಯಿತು, ಜಗತಿ ಮೇಡಮ್ ಸೂಪರ್’ ಎಂದು ಮತ್ತಷ್ಟು ಸೇರಿಸಿದ. ಗೌತಮ್ ಖುಷಿಯಿಂದ ಹೊಗಳುತ್ತಿದ್ದಂತೆ ದೇವಯಾನಿ ಕೋಪ ಮಾಡಿಕೊಂಡಳು. ‘ನಿನ್ನ ಮಾತು ನಿಲ್ಲಿಸು, ಹೇಳಿದ್ದನ್ನೇ ಎಷ್ಟು ಸರಿ ಹೇಳ್ತೀಯಾ’ ಎಂದು ರೇಗಿದಳು. ಆದರೆ ಜಗತಿ ಬಗ್ಗೆ ಮಹೇಂದ್ರ ಮತ್ತೊಂದು ಬಾಂಬ್ ಹಾಕಿದ. ಮಿನಿಸ್ಟರ್ ಭೇಟಿಯಾಗಲು ಜಗತಿ ಹೋಗುತ್ತಿದ್ದಾಳೆ, ಜೊತೆಯಲ್ಲಿ ರಿಷಿ ಕೂಡ ಹೋಗ್ತಾನೆ ಎಂದು ಹೇಳಿದ. ರಿಷಿ ಮತ್ತು ಜಗತಿ ಒಟ್ಟಿಗೆ ಹೋಗ್ತಾರೆ ಎನ್ನುವ ಮಾತು ಕೇಳಿ ದೇವಯಾನಿ ಕೋಪ ನೆತ್ತಿಗೇರಿತು. ರಿಷಿ ತನ್ನ ಕೈ ತಪ್ಪಿಹೋಗ್ತಿದ್ದಾನೆ ಎಂದು ಟೆನ್ಶನ್ ಮಾಡಿಕೊಂಡಳು ದೇವಯಾನಿ. ಹೇಗಾದರೂ ಮಾಡಿ ರಿಷಿ ಮತ್ತು ಜಗತಿಯನ್ನು ಮತ್ತೆ ದೂರ ಮಾಡಲೇ ಬೇಕೆಂದುಕೊಂಡಳು.

ಬೆಳಗ್ಗೆ ಕಾಲೇಜಿಗೆ ಬಂದ ರಿಷಿ ಜಗತಿ ಬಳಿ ಬಂದು ಚಿಕ್ಕ ಸಹಾಯ ಮಾಡಬೇಕು ಎಂದು ಕೇಳಿದ. ಜಗತಿ ಏನಿರಬಹುದು ಎಂದು ಗಾಬರಿ ಆದಳು. ಕಾಲೇಜಿನ ಕಾರ್ಯಕ್ರಮದಲ್ಲಿ ಮಹೇಂದ್ರನಿಂದ ದೂರ ಇರಿ ಎಂದು ಜಗತಿಗೆ ರಿಷಿ ಹೇಳಿದ. ಕಾರ್ಯಕ್ರಮ ಮಾತ್ರವಲ್ಲದೇ ಕಾಲೇಜಿನಲ್ಲೂ ಮಹೇಂದ್ರನಿಂದ ಅಂತರ ಕಾಪಾಡಿ ಎಂದು ಕೇಳಿಕೊಂಡ. ಇದನ್ನು ಮಹೇಂದ್ರ ಸರ್‌ಗೆ ಹೇಳಬಾರದು ಎನ್ನುವ ಕಂಡೀಷನ್ ಸಹ ಹಾಕಿದ. ರಿಷಿಯ ಮಾತು ಜಗತಿಗೆ ಆಘಾತ ನೀಡಿತು. ಮೊದಲೇ ಹೇಳಿದ್ದರೂ ಸಹ ಕಾಲೇಜು ಕಾರ್ಯಕ್ರಮದಲ್ಲಿ ಮಹೇಂದ್ರ ಮತ್ತು ಜಗತಿ ಇಬ್ಬರೂ ಕೈ ಕೈ ಹಿಡಿದು ಓಡಾಡುತ್ತಿರುವುದನ್ನು ನೋಡಿ ರಿಷಿ ಶಾಕ್ ಆದ. ಇಬ್ಬರನ್ನು ನೋಡಿ ರಿಷಿ ಕೆಂಡವಾದ.

ಇದನ್ನೂ ಓದಿ
Image
Honganasu: ಅಪ್ಪನ ಸಂತೋಷಕ್ಕಾಗಿ ಜಗತಿಯನ್ನು ಮನೆಗೆ ಕರೆಯಲು ನಿರ್ಧರಿಸಿದ ರಿಷಿ; ದೇವಯಾನಿ ಒಪ್ಪಿಕೊಳ್ತಾಳಾ?
Image
ಹೊಂಗನಸು: ಮಹೇಂದರ್‌‌ಗೆ ಹೃದಯಾಘಾತ; ಪತಿಯ ಸ್ಥಿತಿ ನೋಡಿ ಬಿಕ್ಕಿಬಿಕ್ಕಿ ಅಳುತ್ತಿರುವ ಜಗತಿ
Image
Honganasu: ಲವ್‌ಲೆಟರ್ ಬರೆದು ಪೇಚಿಗೆ ಸಿಲುಕಿದ ರಿಷಿ; ಯಾರೆಂದು ಗೊತ್ತಾಗೋವರೆಗೂ ಬಿಡಲ್ಲ ಅಂತ ಪಟ್ಟುಹಿಡಿದ ವಸು
Image
Honganasu; ಜಗತಿ ಕೈ ಸೇರಿದ ಮಗನ ಲವ್ ಲೆಟರ್; ರಿಷಿನೆ ಬರೆದಿದ್ದೆಂದು ವಸುಧರಗೆ ಗೊತ್ತಾಗೋಯ್ತಾ?

ವಸು ಸ್ಟೇಜ್ ಡೆಕೊರೇಷನ್ ಮಾಡುತ್ತಿದ್ದಳು. ಎತ್ತರದಲ್ಲಿದ್ದ ದಾರವನ್ನು ಕೆಳಗೆ ಎಳೆಯಲು ಪರದಾಡುತ್ತಿದ್ದಳು. ವಸು ನೋಡಿ ರಿಷಿ ತಾನೇ ಆಕೆಯನ್ನು ಮೇಲಕ್ಕೆ ಎತ್ತಿದ್ದ. ರಿಷಿ ತನ್ನನ್ನು ಎತ್ತಿಕೊಂಡಿದ್ದು ನೋಡಿ ವಸು ಶಾಕ್ ಆದಳು. ಇಬ್ಬರೂ ಒಬ್ಬರಿಗೊಬ್ಬರು ಹೇಳದೆ ಮನಸ್ಸಲ್ಲೇ ಪ್ರೀತಿಸುತ್ತಿದ್ದಾರೆ. ಅಷ್ಟೊತ್ತಿಗೆ ಎಂಟ್ರಿ ಕೊಟ್ಟ ಗೌತಮ್ ಇಬ್ಬರನ್ನೂ ನೋಡಿ ಸೈಲೆಂಟ್ ಆದ. ಇಬ್ಬರ ನಡುವೆ ಏನ್ ನಡೀತಿದೆ ಎನ್ನುವ ಗೊಂದಲದಲ್ಲಿ ನಿಂತು ಬಿಟ್ಟ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:59 pm, Wed, 19 October 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್