AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್​ ವೀಕೆಂಡ್ ಎಪಿಸೋಡ್​ಗೆ ಸುದೀಪ್ ಮತ್ತೆ ಗೈರು? ಇಲ್ಲಿದೆ ಕಾರಣ

ಅವರು ಕೊವಿಡ್​ಗೆ ತುತ್ತಾದ ಕಾರಣ ಕೆಲ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್​ಗೆ ಬಂದಿರಲಿಲ್ಲ. ಸೀಸನ್ 9ರ ನಾಲ್ಕನೇ ವಾರದ ಎಲಿಮಿನೇಷನ್​ಗೆ ಸುದೀಪ್ ಇರಲ್ಲ ಎನ್ನಲಾಗುತ್ತಿದೆ.

ಬಿಗ್ ಬಾಸ್​ ವೀಕೆಂಡ್ ಎಪಿಸೋಡ್​ಗೆ ಸುದೀಪ್ ಮತ್ತೆ ಗೈರು? ಇಲ್ಲಿದೆ ಕಾರಣ
ಸುದೀಪ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 19, 2022 | 8:14 PM

ಕಿಚ್ಚ ಸುದೀಪ್ (Kichcha Sudeep) ಅವರು ಕಳೆದ ಎಂಟು ಸೀಸನ್​ಗಳಿಂದ ಬಿಗ್ ಬಾಸ್ ಅನ್ನು ಯಶಸ್ವಿ ಆಗಿ ನಡೆಸಿಕೊಡುತ್ತಿದ್ದಾರೆ. ಹೊಸ ಸೀಸನ್​ ಕೂಡ ಸುದೀಪ್ ನೇತೃತ್ವದಲ್ಲೇ ಉತ್ತಮವಾಗಿ ಸಾಗುತ್ತಿದೆ. ಸುದೀಪ್ ಅವರ ನಿರೂಪಣೆ, ಅವರು ಸ್ಪರ್ಧಿಗಳಿಗೆ ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳೋದು, ಅವರ ಉಡುಗೆ, ಸ್ಪರ್ಧಿಗಳ ಕಾಲೆಳೆಯೋದು ಎಲ್ಲರಿಗೂ ಇಷ್ಟವಾಗುತ್ತದೆ. ಸುದೀಪ್ ಅವರು ವೀಕೆಂಡ್ ಎಪಿಸೋಡ್ ತಪ್ಪಿಸೋದು ತುಂಬಾನೇ ಕಡಿಮೆ. ಈ ವೀಕೆಂಡ್ ಸುದೀಪ್ ಅವರು ‘ಬಿಗ್ ಬಾಸ್​’ (Bigg Boss) ನಿರೂಪಣೆಗೆ ಗೈರಾಗಲಿದ್ದಾರೆ ಎಂದು ವರದಿ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 8ಕ್ಕೆ ಕೊವಿಡ್ ಕಾಟ ಕೊಟ್ಟಿತ್ತು. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್​ಗೆ ಅನಾರೋಗ್ಯ ಕಾಡಿತ್ತು. ಅವರು ಕೊವಿಡ್​ಗೆ ತುತ್ತಾದ ಕಾರಣ ಕೆಲ ವಾರ ಬಿಗ್ ಬಾಸ್ ವೀಕೆಂಡ್ ಎಪಿಸೋಡ್​ಗೆ ಬಂದಿರಲಿಲ್ಲ. ಸೀಸನ್ 9ರ ನಾಲ್ಕನೇ ವಾರದ ಎಲಿಮಿನೇಷನ್​ಗೆ ಸುದೀಪ್ ಇರಲ್ಲ ಎನ್ನಲಾಗುತ್ತಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿವೆ. ಸೋಶಿಯಲ್ ಮೀಡಿಯಾದಲ್ಲೂ ಈ ಕುರಿತು ಚರ್ಚೆ ಆಗುತ್ತಿದೆ.

ಸುದೀಪ್ ಹಾಗೂ ಪ್ರಿಯಾ ಅವರು ಅಕ್ಟೋಬರ್ 18ರಂದು ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಇದಕ್ಕಾಗಿ ಈ ದಂಪತಿ ವಿದೇಶಕ್ಕೆ ಹಾರಿದ್ದಾರೆ. ಅಲ್ಲಿಯೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ. ಈ ಶುಕ್ರವಾರ (ಸೆಪ್ಟೆಂಬರ್ 21) ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಪ್ರೀ-ರಿಲೀಸ್ ಇವೆಂಟ್ ನಡೆಯಲಿದೆ. ಅದಕ್ಕೂ ಸುದೀಪ್ ಭಾಗವಹಿಸುವ ಸಾಧ್ಯತೆ ಇದೆ. ಈ ಎಲ್ಲಾ ಕಾರಣಕ್ಕೆ ವೀಕೆಂಡ್​ ಎಪಿಸೋಡ್​ನಲ್ಲಿ ಅವರು ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ವಾಹಿನಿಯವರಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ.

ಇದನ್ನೂ ಓದಿ
Image
Prashanth Sambargi: ನಿಜವಾದ ಹೆಸರು ಮುಚ್ಚಿಟ್ಟಿದ್ದಾರಾ ಗುರೂಜಿ? ‘ಸತ್ಯ ಬಯಲು ಮಾಡ್ತೀನಿ’ ಎಂದ ಪ್ರಶಾಂತ್​ ಸಂಬರಗಿ
Image
Aryavardhan Guruji: ಕನ್ನಡ ಓದಲು ಕಷ್ಟಪಟ್ಟ ಗುರೂಜಿ; ಸಹಾಯ ಮಾಡಿದ ರಾಕೇಶ್​: ಇಲ್ಲಿದೆ ವಿಡಿಯೋ
Image
ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಸದ್ಯ ಬಿಗ್ ಬಾಸ್ ಮನೆಯಲ್ಲಿ 15 ಸ್ಪರ್ಧಿಗಳಿದ್ದಾರೆ. ಈ ವಾರ ಒಬ್ಬರು ಎಲಿಮಿನೇಟ್ ಆಗಲಿದ್ದಾರೆ. ಅದು ಯಾರು ಎಂಬ ಕುತೂಹಲ ಮೂಡಿದೆ. ಕಳೆದ ಬಾರಿ ಸುದೀಪ್ ಬರದೇ ಇದ್ದಾಗ ಕಣ್ಮಣಿ (ಕ್ಯಾಮೆರಾ) ಬಳಿ ಸ್ಪರ್ಧಿಗಳ ಜತೆ ಮಾತನಾಡಿಸಿದ್ದರು. ಈ ಬಾರಿಯೂ ಅದೇ ತಂತ್ರ ಮುಂದುವರಿಯುವ ಸಾಧ್ಯತೆ ಇದೆ.

ಈ ವಾರ ನಾಮಿನೇಟ್ ಆದ ಸ್ಪರ್ಧಿಗಳು :

ಮಯೂರಿ, ಆರ್ಯವರ್ಧನ್ ಗುರೂಜಿ, ಪ್ರಶಾಂತ್ ಸಂಬರ್ಗಿ, ಕಾವ್ಯಶ್ರೀ ಗೌಡ, ನೇಹಾ ಗೌಡ, ಸಾನ್ಯಾ ಐಯ್ಯರ್, ರೂಪೇಶ್ ಶೆಟ್ಟಿ ಹಾಗೂ ದಿವ್ಯಾ ಉರುಡುಗ.

Published On - 8:02 pm, Wed, 19 October 22

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್