‘ಆರ್ಯವರ್ಧನ್ ಇತಿಹಾಸ ಸಂಪೂರ್ಣವಾಗಿ ಗೊತ್ತು’; ಮೋಸದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಅನು ಸಿರಿಮನೆ
ಸಂಜು ಕಚೇರಿಯಲ್ಲಿರುವ ಫೈಲ್ಗಳನ್ನು ಪರಿಶೀಲಿಸುತ್ತಿದ್ದಾನೆ. 22 ವರ್ಷದ ಅಕೌಂಟ್ ಅನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದಾನೆ ಸಂಜು. ಇದು ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖರಿಗೆ ಅಚ್ಚರಿ ಮೂಡಿಸಿದೆ.
‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್ಗೆ ನೆನಪೆಲ್ಲವೂ ಸಂಪೂರ್ಣವಾಗಿ ಮರೆತು ಹೋಗಿದೆ. ತನಿಖೆ ದೃಷ್ಟಿಯಿಂದ ಆತ ಯಾರು ಎಂಬ ವಿಚಾರವನ್ನು ಮುಚ್ಚಿಡಲಾಗಿದೆ. ಸಂಜು ತಾಯಿ, ಪೊಲೀಸರು ಹಾಗೂ ವೈದ್ಯರಿಗೆ ಬಿಟ್ಟು ಮತ್ಯಾರಿಗೂ ಸಂಜುನೇ ಆರ್ಯವರ್ಧನ್ ಎಂಬ ವಿಚಾರ ಗೊತ್ತಿಲ್ಲ. ಆದರೆ, ಸಂಜು ನಡೆದುಕೊಳ್ಳುತ್ತಿರುವ ರೀತಿ ಅನೇಕರಿಗೆ ಅನುಮಾನ ಮೂಡಿಸುತ್ತಿದೆ. ಆರ್ಯವರ್ಧನ್ (Aryavardhan) ರೀತಿಯಲ್ಲೇ ಸಂಜು ನಡೆದುಕೊಳ್ಳುತ್ತಿದ್ದಾನೆ. ಈ ವಿಚಾರದಲ್ಲಿ ಅನೇಕರಿಗೆ ಡೌಟ್ ಶುರುವಾಗಿದೆ. ರಾಜ ನಂದಿನಿ ವಿಲಾಸಕ್ಕೆ ಸಂಜು ಬಂದಿದ್ದೇಕೆ ಎಂಬ ಬಗ್ಗೆಯೂ ಕೆಲವರಲ್ಲಿ ಪ್ರಶ್ನೆ ಮೂಡಿದೆ.
ಸಂಜು ಕಚೇರಿಗೆ ಕೆಲಸಕ್ಕೆ ತೆರಳುತ್ತಿದ್ದಾನೆ. ಅದೂ ಆರ್ಯವರ್ಧನ್ ಬಾಸ್ ಆಗಿದ್ದ ಕಚೇರಿಗೆ. ಈ ಕಾರಣಕ್ಕೆ ಒಂದಷ್ಟು ನೆನಪುಗಳು ಆತನಿಗೆ ಬಿಟ್ಟೂ ಬಿಡದೇ ಕಾಡುತ್ತಿವೆ. ಈ ಕಂಪನಿಯಲ್ಲಿ ಈ ಮೊದಲೇ ಕೆಲಸ ಮಾಡಿದಂತೆ, ಅಲ್ಲಿರುವ ಎಲ್ಲರೂ ಪರಿಚಯವಿದ್ದಂತೆ ಸಂಜುಗೆ ಭಾಸವಾಗುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಜುಗೆ ಅನುನ ಕಂಡರೆ ಸಾಕಷ್ಟು ಅಕ್ಕರೆ ಹಾಗೂ ಪ್ರೀತಿ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೂ ತಿಳಿಯುತ್ತಿಲ್ಲ.
ಅನುನ ಭೇಟಿ ಮಾಡಿದಾಗೆಲ್ಲ ಸಂಜುಗೆ ಮೈಯಲ್ಲಿ ಪುಳಕವಾಗುತ್ತಿದೆ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೂ ತಿಳಿದಿಲ್ಲ. ಇತ್ತೀಚೆಗೆ ಅನುಗೆ ಉಡಿ ತುಂಬುವ ಕಾರ್ಯ ನಡೆದಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಸಂಜು ಆಗಮಿಸಿ ಅನುಗೆ ಅಕ್ಷತೆ ಹಾಕಿ ಹಾರೈಸಿದ್ದಾನೆ. ಮತ್ತೊಂದು ಅಚ್ಚರಿ ಕೂಡ ನಡೆದಿದೆ.
ಸಂಜು ಕಚೇರಿಯಲ್ಲಿರುವ ಫೈಲ್ಗಳನ್ನು ಪರಿಶೀಲಿಸುತ್ತಿದ್ದಾನೆ. 22 ವರ್ಷದ ಅಕೌಂಟ್ ಅನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದಾನೆ ಸಂಜು. ಇದು ಕಚೇರಿಯಲ್ಲಿ ಕೆಲಸ ಮಾಡುವ ಪ್ರಮುಖರಿಗೆ ಅಚ್ಚರಿ ಮೂಡಿಸಿದೆ. ಸಂಜು ಬಳಿಯಿಂದ ಇದೆಲ್ಲ ಹೇಗೆ ಸಾಧ್ಯವಾಯಿತು ಎಂಬುದನ್ನು ಕೆಲವರು ಪ್ರಶ್ನೆ ಮಾಡಿದ್ದಾರೆ. ಇದಾದ ಬಳಿಕ ಸಂಜು ಕೆಲ ಫೈಲ್ ಹಿಡಿದು ಅನು ಇರುವ ಕಮಲಮ್ಮನ ವಠಾರಕ್ಕೆ ಬಂದಿದ್ದಾನೆ. ಆಗ ಅನುಗೆ ಲೇಡಿ ಆರ್ಯವರ್ಧನ್ ಎಂದು ಕರೆದಿದ್ದಾನೆ. ಆರ್ಯವರ್ಧನ್ ಕೂಡ ಅನುಗೆ ಲೇಡಿ ಆರ್ಯವರ್ಧನ್ ಎಂದೇ ಕರೆಯುತ್ತಿದ್ದ.
ಆ ಬಳಿಕ ಸಂಜು ಕಂಪನಿಯಲ್ಲಾದ ಮೋಸಗಳ ಬಗ್ಗೆ ಹೇಳಿದ್ದಾನೆ. ‘ಕಳೆದ 22 ವರ್ಷಗಳಿಂದ ಕಂಪನಿಯಲ್ಲಿ ಸಾಕಷ್ಟು ಮೋಸಗಳು ನಡೆದಿವೆ. ಲೆಕ್ಕದಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಇದು ಗೊತ್ತಿದ್ದೂ ಎಲ್ಲರೂ ಸುಮ್ಮನಿದ್ದಿದ್ದು ಏಕೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಸಂಜು ಹೇಳುತ್ತಿದ್ದಂತೆ ಅನು ಸಿಟ್ಟಾಗಿದ್ದಾಳೆ. ಇನ್ಮುಂದೆ ಈ ವಿಚಾರ ಹೇಳದಂತೆ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾಳೆ.
ಆತ ಹೊರ ಹೋಗುತ್ತಿದ್ದಂತೆ ಅನುಗೆ ಪುಷ್ಪಾ ಈ ಬಗ್ಗೆ ಪ್ರಶ್ನೆ ಮಾಡಿದ್ದಾಳೆ. ‘ಅದೇ ಸತ್ಯ ಅಮ್ಮ. ಆರ್ಯ ಸರ್ ಇದೆಲ್ಲವನ್ನೂ ಮಾಡಿದ್ದರು. ಅವರ ಇತಿಹಾಸ ನನಗೆ ಮಾತ್ರ ಗೊತ್ತು. ಅವರ ಒಳ್ಳೆಯ ಹಾಗೂ ಕೆಟ್ಟ ಮುಖ ಎರಡೂ ನನಗೆ ಗೊತ್ತು. ಇದನ್ನು ನಾನೇ ಹ್ಯಾಂಡಲ್ ಮಾಡಬೇಕಿದೆ’ ಎಂದು ಅನು ಹೇಳಿದ್ದಾಳೆ.
ಇದನ್ನೂ ಓದಿ: ‘ಜೊತೆ ಜೊತೆಯಲಿ’ ಧಾರಾವಾಹಿ: ಭಾರೀ ಅಪಾಯದ ಮುನ್ಸೂಚನೆ ನೀಡಿದ ಆರ್ಯವರ್ಧನ್
ಅನುಗೆ ಪ್ರತೀ ಹಂತದಲ್ಲೂ ಸಂಜುನ ನೋಡಿದಾಗ ಆರ್ಯವರ್ಧನ್ನ ನೆನಪಾಗುತ್ತಿದೆ. ಇತ್ತೀಚೆಗೆ ಸಂಜುನ ಸಂದರ್ಶನ ಮಾಡುವಾಗ ಬಿಸ್ನೆಸ್ ಮಾಡೋಕೆ ಮುಖ್ಯವಾಗಿ ಬೇಕಾಗಿದ್ದು ಏನು ಎಂದು ಕೇಳಲಾಗಿತ್ತು. ಇದಕ್ಕೆ ಆತನ ಬಾಯಿಂದ ‘ನಂಬಿಕೆ’ ಎಂಬ ಉತ್ತರ ಬಂತು. ಆರ್ಯವರ್ಧನ್ ಕೂಡ ಇದೇ ಮಾತನ್ನು ಹೇಳುತ್ತಿದ್ದ. ಸಂಜು ಹಾಗೂ ಆರ್ಯವರ್ಧನ್ಗೆ ಹೋಲಿಕೆ ಹಾಗೂ ಸಾಮ್ಯತೆ ಕಾಣುತ್ತಿರುವುದರಿಂದ ಅನುಗೆ ಶಾಕ್ ಆಗಿದೆ. ಸಂಜು ಕನಸಿನಲ್ಲೂ ಬಂದು ಕಾಡುತ್ತಿದ್ದಾನೆ.
ಶ್ರೀಲಕ್ಷ್ಮಿ ಎಚ್.
Published On - 7:30 am, Thu, 20 October 22