‘ಕಾಂತಾರ’ ಮಸ್ತ್ ಕಲೆಕ್ಷನ್; ‘ವಿಕ್ರಾಂತ್ ರೋಣ’ ಕಲೆಕ್ಷನ್ ಹಿಂದಿಕ್ಕಲು ಕೆಲವೇ ಕೋಟಿ ಬಾಕಿ
ಹಿಂದಿಯಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಪಡೆಯುತ್ತಿಲ್ಲ.ಆದರೆ, ಹಿಂದಿಗೆ ಡಬ್ ಆಗಿ ತೆರೆಕಂಡ ‘ಕಾಂತಾರ’ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುತ್ತಿದೆ.
ರಿಷಬ್ ಶೆಟ್ಟಿ (Rishab Shetty) ನಟನೆಯ ‘ಕಾಂತಾರ’ ಸಿನಿಮಾದ ಕಲೆಕ್ಷನ್ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಪರಭಾಷೆಗಳಿಂದಲೂ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೀಗಾಗಿ, ಎಲ್ಲರೂ ಚಿತ್ರವನ್ನು ಮುಗಿಬಿದ್ದು ವೀಕ್ಷಿಸುತ್ತಿದ್ದಾರೆ. ಒಮ್ಮೆ ಸಿನಿಮಾ ನೋಡಿದವರು ಮರಳಿ ಮರಳಿ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಇದರಿಂದ ಸದ್ಯಕ್ಕಂತೂ ‘ಕಾಂತಾರ’ (Kantara Movie) ಕಲೆಕ್ಷನ್ ಕುಗ್ಗುವ ಸೂಚನೆ ಸಿಗುತ್ತಿಲ್ಲ. ಶೀಘ್ರದಲ್ಲೇ ದೀಪಾವಳಿ ಹಬ್ಬ ಆರಂಭ ಆಗಲಿದೆ. ಆ ಸಂದರ್ಭದಲ್ಲಿ ‘ಕಾಂತಾರ’ ಕಲೆಕ್ಷನ್ ಮತ್ತಷ್ಟು ಹೆಚ್ಚಲಿದೆ. ಹೀಗಾಗಿ, ಸಿನಿಮಾ ಅನಾಯಾಸವಾಗಿ 200 ಕೋಟಿ ರೂಪಾಯಿ ಕ್ಲಬ್ ಸೇರಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ.
ಹಿಂದಿಯಲ್ಲಿ ಹಲವು ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಯಾವ ಚಿತ್ರಗಳೂ ಹೇಳಿಕೊಳ್ಳುವಂತಹ ಯಶಸ್ಸು ಪಡೆಯುತ್ತಿಲ್ಲ. ರಶ್ಮಿಕಾ ಮಂದಣ್ಣ ಹಾಗೂ ಅಮಿತಾಭ್ ಬಚ್ಚನ್ ನಟನೆಯ ‘ಗುಡ್ಬೈ’ ಸಿನಿಮಾ ರಿಲೀಸ್ ಆಗಿ ಫ್ಲಾಪ್ ಆಯಿತು. ಆಯುಷ್ಮಾನ್ ಖುರಾನ ನಟನೆಯ ‘ಡಾಕ್ಟರ್ ಜಿ’ ಸಿನಿಮಾ ಕೂಡ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿಲ್ಲ. ಆದರೆ, ಹಿಂದಿಗೆ ಡಬ್ ಆಗಿ ತೆರೆಕಂಡ ‘ಕಾಂತಾರ’ ಸಿನಿಮಾ ಒಳ್ಳೆಯ ರೀತಿಯಲ್ಲಿ ಕಮಾಯಿ ಮಾಡುತ್ತಿದೆ.
ಅಕ್ಟೋಬರ್ 19ರಂದು ‘ಕಾಂತಾರ’ 1.95ಕೋಟಿ ರೂಪಾಯಿ (ಹಿಂದಿ ವರ್ಷನ್) ಗಳಿಕೆ ಮಾಡಿದೆ. ವಾರದ ದಿನಗಳಲ್ಲಿ ಡಬ್ ಆಗಿ ತೆರೆಕಂಡ ಸಿನಿಮಾ ಇಷ್ಟು ದೊಡ್ಡ ಮೊತ್ತದ ಕಲೆಕ್ಷನ್ ಮಾಡಿದೆ ಅನ್ನೋದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಮೂಲಕ ಚಿತ್ರದ ಹಿಂದಿಕಲೆಕ್ಷನ್ 13.10 ಕೋಟಿ ರೂಪಾಯಿ ಆಗಿದೆ.
ತೆಲುಗಿನಲ್ಲೂ ‘ಕಾಂತಾರ’ ಚಿತ್ರಕ್ಕೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ. ಸಿನಿಮಾ ಹಂಚಿಕೆ ಜವಾಬ್ದಾರಿ ತೆಗೆದುಕೊಂಡು ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ ಅವರು ಒಳ್ಳೆಯ ಲಾಭ ಕಂಡಿದ್ದಾರೆ. ತೆಲುಗಿನಲ್ಲಿ ಈಗಾಗಲೇ ಚಿತ್ರದ ಕಲೆಕ್ಷನ್ ಎರಡಂಕಿ ಮುಟ್ಟಿದೆ. ಅವರು ಮೂರು ಕೋಟಿ ರೂಪಾಯಿಗೆ ಸಿನಿಮಾ ಹಂಚಿಕೆ ಜವಾಬ್ದಾರಿ ಪಡೆದುಕೊಂಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Kantara Movie: ‘ಕಾಂತಾರ’ ಸಿನಿಮಾ ನೋಡಿ ಮೂಕವಿಸ್ಮಿತನಾದೆ’; ರಿಷಬ್ ಶೆಟ್ಟಿ ಕೆಲಸಕ್ಕೆ ಕಿಚ್ಚನ ಚಪ್ಪಾಳೆ
ಸದ್ಯ ಸಿನಿಮಾದ ಕಲೆಕ್ಷನ್ 150 ಕೋಟಿ ಸಮೀಪಿಸಿದೆ. ಈ ಮೂಲಕ ಶೀಘ್ರವೇ ಪುನೀತ್ ನಟನೆಯ ‘ಜೇಮ್ಸ್’ (151 ಕೋಟಿ ರೂಪಾಯಿ), ‘ವಿಕ್ರಾಂತ್ ರೋಣ’ (156 ಕೋಟಿ ರೂಪಾಯಿ) ಚಿತ್ರವನ್ನು ರಿಷಬ್ ಶೆಟ್ಟಿ ಚಿತ್ರ ಹಿಂದಿಕ್ಕುವ ಸಾಧ್ಯತೆ ಇದೆ.
Published On - 10:32 am, Thu, 20 October 22