Lakshana Serial: ಶ್ವೇತಾಳ ಮುಖಾಂತರ ನಕ್ಷತ್ರಳ ಸಂಸಾರ ನಾಶ ಮಾಡಲು ಹೊರಟಿದ್ದಾಳೆ ಭಾರ್ಗವಿ

ಬೆಳಗ್ಗೆ ಬೆಳಗ್ಗೆನೇ ನಕ್ಷತ್ರ ಭಾರ್ಗವಿಗೆ ಫೋನ್ ಕಾಲ್ ಮಾಡಿ ತಂದೆ ತಾಯಿ ಹೇಗಿದ್ದಾರೆ ಎಂದು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾಳೆ. ಹಾಗೇನೆ ಅತ್ತೆ ನಿಮಗೆ ಆ ಡೆವಿಲ್ ಬಗ್ಗೆ ಒಂದು ಸಣ್ಣ ಕ್ಲೂ ಸಿಕ್ಕಿದರೂ ನನಗೆ ತಿಳಿಸಿ ಅವಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

Lakshana Serial: ಶ್ವೇತಾಳ ಮುಖಾಂತರ ನಕ್ಷತ್ರಳ ಸಂಸಾರ ನಾಶ ಮಾಡಲು ಹೊರಟಿದ್ದಾಳೆ ಭಾರ್ಗವಿ
Lakshana Serial
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 20, 2022 | 1:24 PM

ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಂದ್ರಶೇಖರ್ ವಿಷಯಕ್ಕೆ ನಕ್ಷತ್ರ ತಲೆ ಹಾಕಬಾರದೆಂದು ಭಾರ್ಗವಿಯು ಹೊಸ ಪ್ಲಾನ್ ಒಂದನ್ನು ರೂಪಿಸಿದ್ದಾಳೆ. ಬೆಳಗ್ಗೆ ಬೆಳಗ್ಗೆನೇ ನಕ್ಷತ್ರ ಭಾರ್ಗವಿಗೆ ಫೋನ್ ಕಾಲ್ ಮಾಡಿ ತಂದೆ ತಾಯಿ ಹೇಗಿದ್ದಾರೆ ಎಂದು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಾಳೆ. ಹಾಗೇನೆ ಅತ್ತೆ ನಿಮಗೆ ಆ ಡೆವಿಲ್ ಬಗ್ಗೆ ಒಂದು ಸಣ್ಣ ಕ್ಲೂ ಸಿಕ್ಕಿದರೂ ನನಗೆ ತಿಳಿಸಿ ಅವಳನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ನಕ್ಷತ್ರಳ ಮಾತಿಗೆ ಆಯ್ತು ನಾನು ಕಣ್ಣಿಡುತ್ತೇನೆ, ಅದು ಯಾರು ಏನು ಮಾಡುತ್ತಾರೆ ಎಂದು ಹೇಳಿ ಫೋನ್ ಕಟ್ ಮಾಡುತ್ತಾಳೆ. ನಕ್ಷತ್ರ ನೀನು ನನ್ನ ದಾರಿಗೆ ಅಡ್ಡ ಬರುತ್ತಿದ್ದೀಯಾ, ಗಂಡನ ಮನೆಯಲ್ಲಿ ನೆಮ್ಮದಿ ಇದೆ ಎಂದು ತಾನೆ ನೀನು ನಿನ್ನ ತಂದೆಯ ಮನೆಯ ವಿಚಾರಕ್ಕೆ ಬಂದಿರೋದು, ನಿನ್ನ ಜೀವನವನ್ನು ಹೇಗೆ ನರಕ ಮಾಡುತ್ತೇನೆ ನೋಡು ಕೂಸೇ. ನಿನ್ನ ಜೀವನವನ್ನು ಸರಿ ಮಾಡುವುದರಲ್ಲೇ ಕಾಲ ಕಳೆಯಬೇಕು, ನಿನ್ನ ತಂದೆಯ ನೆನಪೇ ಆಗಬಾರದು ಎಂದು ನಕ್ಷತ್ರಳ ವಿರುದ್ಧ ಭಾರ್ಗವಿ ಒಂದು ದೊಡ್ಡ ಸಂಚನ್ನೇ ರೂಪಿಸುತ್ತಾಳೆ.

ಭಾರ್ಗವಿ ಮಿಲ್ಲಿಗೆ ಕಾಲ್ ಮಾಡಿ ಹೊಸ ಪ್ಲಾನ್ ಬಗ್ಗೆ ಹೇಳುತ್ತಾಳೆ. ಪಾಪ ಆ ಶ್ವೇತಾ ಎಷ್ಟು ಅಂತಾ ನೋವು ತಿನ್ನೋದು, ಆಕೆಗೂ ಏನಾದ್ರೂ ಒಳ್ಳೆಯದಾಗಬೇಕಲ್ವಾ. ಇನ್ನು ನೋವು ಏನಿದ್ರೂ ಆ ನಕ್ಷತ್ರ ಮತ್ತು ಚಂದ್ರಶೇಖರ್‌ಗೆ ಮಾತ್ರ ಎಂದು ಹೇಳಿ ಶ್ವೇತಾಳನ್ನು ಹೇಗಾದರೂ ಶಕುಂತಳಾದೇವಿ ಮನೆಗೆ ಕಳುಹಿಸಬೇಕು ನಾನು ಪ್ಲಾನ್ ಹೇಳುತ್ತೇನೆ, ನೀನು ವಠಾರದಲ್ಲೇ ಇದ್ದುಕೊಂಡು ಆ ಕೆಲಸ ಮಾಡು ಎಂದು ಮಿಲ್ಲಿಗೆ ಭಾರ್ಗವಿ ಹೇಳುತ್ತಾಳೆ.

ಮೊದಲೇ ಶ್ವೇತಾ ಶಕುಂತಳಾದೇವಿ ಮನೆಗೆ ಬರಲು ಮತ್ತು ಅಲ್ಲಿನ ಭೋಗ ಜೀವನಕ್ಕೆ ಆಸೆ ಪಡುತ್ತಿದ್ದಳು. ಅದಕ್ಕೆ ತಕ್ಕಂತೆ ಒಂದು ಪ್ಲಾನ್ ಮಾಡಿ ಶಕುಂತಳಾದೇವಿಗೆ ಕಾಲ್ ಮಾಡುತ್ತಾಳೆ. ಅವರು ಮನೆಯ ನೆಮ್ಮದಿಗೆ ಹಾಗೂ ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಕ್ಕೆ ಹೋಗಲು ತಯಾರಾಗಿ ನಿಂತಿದ್ದರು. ಶ್ವೇತಾಳ ಫೋನ್ ಕರೆ ನೋಡಿ ತುಂಬಾ ಖುಷಿಯಾಗಿ ಮಾತನಾಡುತ್ತಾರೆ.

ಇದನ್ನು ಓದಿ: Lakshana Serial: ಮಗನನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾಳೆ ಶಕುಂತಳಾದೇವಿ, ಭಾರ್ಗವಿ ಆಟಕ್ಕೆ ನಕ್ಷತ್ರ ಸಂಸಾರದಲ್ಲಿ ಬಿರುಗಾಳಿ

ಅತ್ತೆ ನೀವು ಏನು ತಲೆ ಕೆಡಿಸಿಕೊಳ್ಳಬೇಡಿ, ಟೆನ್ಷನ್‌ನಿಂದ ಆಚೆ ಬರಲು ಏನಾದರೂ ಆಕ್ಟಿವಿಟಿ ಮಾಡಿ ಎಂದು ಹೇಳುತ್ತಾಳೆ ಶ್ವೇತಾ. ಆಗ ಶಕುಂತಳಾದೇವಿ ನನ್ನ ಮನಸ್ಸಿಗೆ ನೆಮ್ಮದಿ ಬೇಕೆಂದು ದೇವಸ್ಥಾನಕ್ಕೆ ಹೋಗಲು ಹೊರಟು ನಿಂತಿದ್ದೇನೆ ಎಂದು ಹೇಳುತ್ತಾರೆ. ಅತ್ತೆ ಎಂತಹ ಕಾಕತಾಳಿಯಾ, ನಾನು ಕೂಡಾ ದೇವಸ್ಥಾನಕ್ಕೆ ಹೋಗಬೇಕೆಂದು ತಯಾರಾಗಿ ಕುಳಿತಿದ್ದೆ. ಅಮ್ಮ ಹುಷರಾದರೇ ಹರಕೆ ತೀರಿಸುತ್ತೇನೆ ಎಂದು ಹೇಳಿದ್ದೆ. ನಿಮಗೆ ತೊಂದರೆ ಇಲ್ಲ ಎಂದರೆ ನಾನು ನಿಮ್ಮ ಜೊತೆ ದೇವಸ್ಥಾನಕ್ಕೆ ಬರಬಹುದಾ ಎಂದು ಶ್ವೇತಾ ನಾಟಕವಾಡುತ್ತಾಳೆ.

ಶ್ವೇತಾಳ ಕುತಂತ್ರ ಅರಿಯದ ಶಕುಂತಳಾದೇವಿ ಅವಳ ಈ ಮಾತಿನಿಂದ ಖುಷಿಯಾಗಿ ಖಂಡಿತವಾಗಿಯೂ ಬಾ, ನನಗೂ ಕಂಪೆನಿ ಸಿಕ್ಕ ಹಾಗೆ ಆಗುತ್ತದೆ ಎಂದು ಹೇಳಿ ಫೋನ್ ಕಾಲ್ ಕಟ್ ಮಾಡುತ್ತಾರೆ. ಪ್ಲಾನ್ ಒನ್ ಕಂಪ್ಲೀಟ್ ಆಯಿತೆಂದು ಹೇಳಿ ಶ್ವೇತಾ, ಸೃಷ್ಠಿಯನ್ನು ದೇವಸ್ಥಾನಕ್ಕೆ ಬರಲು ಹೇಳುತ್ತಾಳೆ. ಮೊದಲು ಆಕೆ ಒಪ್ಪಲಿಲ್ಲವಾದರೂ ನಂತರ ಆಕೆ ಒಪ್ಪುತ್ತಾಳೆ.

ಈ ಮಧ್ಯೆ ಮಿಲ್ಲಿ ಬಂದು ಏನು ಪ್ಲಾನ್ ಮಾಡಿದ್ದೀಯಾ ಹೇಳು ಎಂದು ಕೇಳುತ್ತಾಳೆ. ಕರೆಕ್ಟ್ ಆಗಿ ಕೇಳು ಶಕುಂತಳಾದೇವಿಯನ್ನು ಮುಂದೆ ಇಟ್ಟುಕೊಂಡು ಹೇಗೆ ಭೂಪತಿ ಮನೆಗೆ ಕಾಲಿಡುತ್ತೇನೆ ನೋಡು, ಬೇಕಾದ್ರೇ ಆ ನಕ್ಷತ್ರಳಿಗೂ ಚಾಡಿ ಹೇಳು, ನೀನು ಕೂಡಾ ಬರಬಹುದು ಅಲ್ಲಿ ನಡೆಯುವ ಡ್ರಾಮ ನೋಡೋಕೆ ಎಂದು ಶ್ವೇತಾ ಹೇಳುತ್ತಾಳೆ. ಶ್ವೇತಾಳ ಈ ಮಾತಿನಿಂದ ಖುಷಿ ಪಟ್ಟ ಮಿಲ್ಲಿ ನನಗೂ ಇದೇ ಬೇಕಾಗಿದ್ದು ಎಂದು ಮನದಲ್ಲೇ ಮಾತನಾಡುತ್ತಾಳೆ. ನಕ್ಷತ್ರಳಿಗೆ ಚಾಡಿ ಹೇಳಿ ಬನಶಂಕರಿ ದೇವಸ್ಥಾನಕ್ಕೆ ಬರಲು ಹೇಳುತ್ತಾಳೆ. ದೇವಸ್ಥಾನದಲ್ಲಿ ಶ್ವೇತಾ ಏನು ಹೊಸ ಡ್ರಾಮ ಮಾಡಿ ಶಕುಂತಳಾದೇವಿ ಮನೆ ಸೇರುತ್ತಾಳೆ ಎಂದು ಮುಂದೆ ನೋಡಬೇಕಾಗಿದೆ.

ಮಧುಶ್ರೀ

Published On - 1:24 pm, Thu, 20 October 22

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್