ಕಂಪನಿಯ ಪ್ರತಿಭಟನೆಯನ್ನು ಒಂದೇ ಮಾತಿನಿಂದ ಸೈಲೆಂಟ್ ಮಾಡಿದ ಸಂಜು; ಅನುಗೆ ಶಾಕ್

ಅನುಗೆ ಪದೇಪದೇ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಸಂಜು ಆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ. ಸಂಜುನೇ ಆರ್ಯವರ್ಧನ್ ಎಂದು ಗೊತ್ತಾದರೆ ಅನು ಶಾಕ್ ಆಗೋದು ಗ್ಯಾರಂಟಿ.

ಕಂಪನಿಯ ಪ್ರತಿಭಟನೆಯನ್ನು ಒಂದೇ ಮಾತಿನಿಂದ ಸೈಲೆಂಟ್ ಮಾಡಿದ ಸಂಜು; ಅನುಗೆ ಶಾಕ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Oct 21, 2022 | 8:52 AM

‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿಯಲ್ಲಿ ಆರ್ಯವರ್ಧನ್​, ಸಂಜು ಆಗಿ ಎಂಟ್ರಿ ಕೊಟ್ಟಿದ್ದಾನೆ. ಆತನೇ ಆರ್ಯವರ್ಧನ್ ಎಂಬುದು ಯಾರಿಗೂ ತಿಳಿದಿಲ್ಲ. ಎಲ್ಲರ ಪಾಲಿಗೆ ಆರ್ಯವರ್ಧನ್ ನಿಧನ ಹೊಂದಿದ್ದಾನೆ. ಆದರೆ, ಆತ ಬದುಕಿದ್ದಾನೆ. ಆತನ ಮುಖಚರ್ಯೆ ಬದಲಾಗಿದೆ. ನೆನಪು ಮಾಸಿದೆ. ಹೀಗಾಗಿ ಆತನೇ ಆರ್ಯವರ್ಧನ್​ ಎಂದು ಗುರುತಿಸೋಕೆ ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಸಂಜು ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ. ಅನುಗೆ ಪದೇಪದೇ ಆರ್ಯವರ್ಧನ್ ನೆನಪಾಗುತ್ತಿದ್ದಾನೆ. ಸಂಜು ಆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾನೆ. ಸಂಜುನೇ ಆರ್ಯವರ್ಧನ್ ಎಂದು ಗೊತ್ತಾದರೆ ಅನು ಶಾಕ್ ಆಗೋದು ಗ್ಯಾರಂಟಿ.

ಅನುನಿಂದ ಸಂಜುಗೆ ಪಾಠ

ಕೆಲ ದಾಖಲೆಗಳನ್ನು​ ನೀಡೋಕೆ ಅನು ಮನೆಗೆ ಸಂಜು ಹೋಗಿದ್ದ. ಅಷ್ಟೇ ಅಲ್ಲ, ಕಂಪನಿಯಲ್ಲಿ ದೊಡ್ಡ ಮಟ್ಟದಲ್ಲಿ ಫ್ರಾಡ್​ಗಳು ಆಗಿವೆ ಎಂಬುದನ್ನು ಆತ ಪತ್ತೆ ಹಚ್ಚಿದ್ದ. ತಾನು ಕಂಡು ಹಿಡಿದ ವಿಚಾರವನ್ನು ಅನು ಎದುರು ಹೇಳಿದ್ದಾನೆ ಸಂಜು. ಇದಕ್ಕೆ ಅನು ಸಿಟ್ಟಾಗಿದ್ದಾಳೆ. ಸಂಜುಗೆ ಬೈದು ಕಚೇರಿಗೆ ಕಳುಹಿಸಿದ್ದಾಳೆ. ಅಷ್ಟೇ ಅಲ್ಲ, ಈ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಬಾರದು, ಮರಳಿ ಇಲ್ಲಿಗೆ ಬರಬಾರದು ಎಂಬ ಆದೇಶ ನೀಡಿದ್ದಾಳೆ ಅನು. ಇದರಿಂದ ಸಂಜುಗೆ ಬೇಸರ ಆಗಿದೆ. ಅದೇ ಬೇಸರದಲ್ಲಿ ಕಚೇರಿಗೆ ತೆರಳಿದ್ದಾನೆ.

ಸಿಬ್ಬಂದಿ ಪ್ರತಿಭಟನೆ

ಆರ್ಯವರ್ಧನ್ ಸಹೋದರ ಹರ್ಷ ಈಗ ಕಂಪನಿ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದಾನೆ. ಆತನ ಪತ್ನಿ ಮಾನ್ಸಿಗೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ. ಕಂಪನಿಗೆ ಬಂದ ಸಂಜು ಯಾರು? ಆತನಿಗೂ ರಾಜ ನಂದಿನಿ ವಿಲಾಸಕ್ಕೂ ಏನು ಸಂಬಂಧ ಎಂಬಿತ್ಯಾದಿ ಪ್ರಶ್ನೆಗಳು ಆಕೆಗೆ ಮೂಡಿವೆ. ಇದೇ ಟೆನ್ಷನ್​ನಲ್ಲಿ ಆಕೆ ದಿನ ದೂಡುತ್ತಿದ್ದಾಳೆ. ಈ ಮಧ್ಯೆ ಒಂದು ಘಟನೆಯಿಂದ ಇಡೀ ಸಿಬ್ಬಂದಿ ವರ್ಗ ಪ್ರತಿಭಟನೆ ಆರಂಭಿಸಿತ್ತು.

ಸಿಬ್ಬಂದಿ ಚಹ ಹಿಡಿದು ಚೇಂಬರ್ ಒಳಗೆ ಬಂದಿದ್ದ. ಈ ಟೀ ಅನ್ನು ತೆಗೆದುಕೊಳ್ಳೋಕೆ ಮುಂದಾದಳು ಮಾನ್ಸಿ. ‘ಇದು ನಿಮಗಲ್ಲ, ಆರ್ಯವರ್ಧನ್ ಸರ್​​ಗೆ ತಂದಿರೋ ಟೀ’ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಾದ ಮಾನ್ಸಿ ಸಿಬ್ಬಂದಿ ಕೆನ್ನೆಗೆ ಬಾರಿಸಿದ್ದಾಳೆ. ಇದು ಆತನಿಗೆ ಸಾಕಷ್ಟು ಸಿಟ್ಟು ತರಿಸಿದೆ. ಎಲ್ಲಾ ಸಿಬ್ಬಂದಿ ಸೇರಿ ಪ್ರತಿ ಭಟನೆ ಆರಂಭಿಸಿದ್ದಾರೆ.

ಎಲ್ಲರನ್ನೂ ಸೈಲೆಂಟ್ ಮಾಡಿದ ಸಂಜು

ಅನು ಮನೆಯಿಂದ ಹೊರಟ ಸಂಜು ನೇರವಾಗಿ ಕಚೇರಿಗೆ ಬಂದಿದ್ದಾನೆ. ಆತ ಇಲ್ಲಿಗೆ ಬರುವುದಕ್ಕೂ ಪ್ರತಿಭಟನೆ ಆರಂಭ ಆಗುವುದಕ್ಕೂ ಸರಿಯಾಗಿದೆ. ಪ್ರತಿಭಟನೆ ಗಂಭೀರ ಸ್ವರೂಪ ಪಡೆದುಕೊಂಡರೆ ಕೆಲಸ ನಿಲ್ಲೋ ಆತಂಕ ಎಲ್ಲರಲ್ಲೂ ಶುರುವಾಗಿತ್ತು. ಆ ಸಂದರ್ಭಕ್ಕೆ ಸರಿಯಾಗಿ ಆಗಮಿಸಿದ್ದಾನೆ ಸಂಜು. ಕಚೇರಿ ಒಳಗೆ ತೆರಳಿ ವಿಶೇಷ ಟೀ ಮಾಡಿಕೊಂಡು ಬಂದಿದ್ದಾನೆ. ‘ಇದು ಮಾನ್ಸಿ ಮೇಡಂ ಮಾಡಿಕೊಟ್ಟ ಟೀ. ಅವರು ಈ ರೀತಿಯಲ್ಲಿ ನಿಮ್ಮ ಬಳಿ ಕ್ಷಮೆ ಕೇಳಿದ್ದಾಳೆ. ದಯವಿಟ್ಟು ಟೀ ಸ್ವೀಕರಿಸಿ ಪ್ರತಿಭಟನೆ ನಿಲ್ಲಿಸಿ’ ಎಂದು ಕೋರಿದ್ದಾನೆ ಸಂಜು.

ಮಾನ್ಸಿ ಟೀ ಮಾಡಿಕೊಟ್ಟಿದ್ದಾಳೆ ಎಂಬ ಖುಷಿಯಲ್ಲಿ ಟೀ ಸ್ವೀಕರಿಸಿ ಪ್ರತಿಭಟನೆ ನಿಲ್ಲಿಸಲಾಗಿದೆ. ಇದೇ ಸಂದರ್ಭಕ್ಕೆ ಕಚೇರಿಗೆ ಅನುನ ಎಂಟ್ರಿ ಆಗಿದೆ. ಸಂಜುನ ಬುದ್ಧಿವಂತಿಕೆ ನೋಡಿ ಆಕೆಗೆ ಶಾಕ್​ ಆಗಿದೆ. ಅಲ್ಲೇ ಇದ್ದ ಹರ್ಷ ಹಾಗೂ ಇತರರಿಗೂ ಸಂಜುನ ಬುದ್ಧಿವಂತಿಕೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಶ್ರೀಲಕ್ಷ್ಮಿ ಎಚ್.

Published On - 8:31 am, Fri, 21 October 22

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಕುಡಿದ ನಶೆಯಲ್ಲಿ ಏನೇನೋ ಮಾತನಾಡಿದ ಎನ್ನುವ ಕಾರಣಕ್ಕೆ ಹೊಡೆದು ಕೊಂದರು!
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ಶ್ರೀರಾಮುಲು-ಜನಾರ್ಧನ ರೆಡ್ಡಿ ಜಗಳದ ಹಿನ್ನೆಲೆಯಲ್ಲಿ ಹಿರಿಯರ ಸಭೆ?
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!