‘ಬಿಗ್ ಬಾಸ್ ಕನ್ನಡ ಸಿಸನ್ 11’ರಲ್ಲಿ ಜಗದೀಶ್ ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದರು. ಬಿಗ್ ಬಾಸ್ನ ಎಕ್ಸ್ಪೋಸ್ ಮಾಡ್ತೀನಿ ಎಂದು ಸವಾಲನ್ನು ಕೂಡ ಹಾಕಿದ್ದರು. ಆದರೆ, ಈಗ ಅವರು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ‘ಬಿಗ್ ಬಾಸ್’ ಬಗ್ಗೆ ಅವರು ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್ ಎಕ್ಸ್ಪೋಸ್ ಮಾಡ್ತೀನಿ ಎಂದು ಹೋದವರಿಗೆ ಈ ರೀತಿ ಆಗಬಾರದಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
‘ಬಿಗ್ ಬಾಸ್’ನ ಎಕ್ಸ್ಪೋಸ್ ಮಾಡ್ತೀನಿ, ಬಿಗ್ ಬಾಸ್ ಅನ್ನೇ ಕೊಂಡುಕೊಳ್ಳುತ್ತೇನೆ ಎಂದೆಲ್ಲ ಬಿಲ್ಡಪ್ ಕೊಟ್ಟಿದ್ದರು ಜಗದೀಶ್. ಮೊದಲ ವಾರ ಸುದೀಪ್ ಅವರಿಂದ ಜಗದೀಶ್ಗೆ ಕಿವಿಮಾತು ಸಿಕ್ಕಿತ್ತು. ಈ ಕಿವಿಮಾತಿನಿಂದ ಅವರು ಬದಲಾದಂತೆ ಇದೆ. ಎಲ್ಲರಿಗೂ ಕಿರಿಕಿರಿ ಮಾಡಿದ್ದನ್ನು ಅವರು ಮುಂದುವರಿಸಿದ್ದಾರೆ ನಿಜ. ಆದರೆ, ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಅವರು ಕೊಂಚ ಬದಲಾಗಿದ್ದಾರೆ. ಅವರ ಆಲೋಚನೆಗಳು ಕೂಡ ಬದಲಾಗಿವೆ.
ಈ ಬಗ್ಗೆ ಜಗದೀಶ್ ಅವರು ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ‘ಬಿಗ್ ಬಾಸ್ನ ನಾನು ಇಷ್ಟಪಡುತ್ತಿದ್ದೇನೆ. ಇದೊಂದು ಸ್ಕ್ರಿಪ್ಟೆಡ್ ಶೋ ಎಂದುಕೊಂಡಿದ್ದೆ. ಅದು ಸುಳ್ಳಾಯಿತು. ಎಲ್ಲಾ ಸೆಟಪ್ ಇರುತ್ತದೆ ಎಂದುಕೊಂಡಿದ್ದೆ. ಅದು ಕೂಡ ಸುಳ್ಳಾಗಿದೆ. ಒಟ್ಟಾರೆ ಎಲ್ಲವೂ ಸುಳ್ಳಾಯಿತು’ ಎಂದು ಜಗದೀಶ್ ಅವರು ಕ್ಯಾಮೆರಾ ಎದುರು ಬಂದು ಹೇಳಿಕೊಂಡಿದ್ದಾರೆ.
ಜಗದೀಶ್ ಅವರು ಈ ಮೊದಲು ವಕೀಲರಾಗಿದ್ದರು. ಆದರೆ, ಈಗ ಅವರು ವಕೀಲ ವೃತ್ತಿ ನಡೆಸುವಂತಿಲ್ಲ ಎನ್ನುವ ಆದೇಶ ಬಂದಿದೆ. ಈ ಕಾರಣಕ್ಕೆ ಅವರನ್ನು ವಕೀಲರು ಎಂದು ಕರೆಯಬಾರದು ಎಂದು ಬೆಂಗಳೂರು ವಕೀಲರ ಸಂಘ ಕಲರ್ಸ್ ಕನ್ನಡಕ್ಕೆ ಮನವಿ ಮಾಡಿತ್ತು.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಈ ವಾರ ಇರಲ್ಲ ಯಾವುದೇ ಎಲಿಮಿನೇಷನ್; ಕಾರಣ ಏನು?
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎರಡು ವಾರ ಪೂರ್ಣಗೊಳ್ಳುತ್ತಾ ಬಂದಿದೆ. ಈ ವಾರ ಯಾವುದೇ ಎಲಿಮಿನೇಷನ್ ಪ್ರಕ್ರಿಯೆ ಇರೋದಿಲ್ಲ ಎಂದು ಹೇಳಲಾಗುತ್ತಿದೆ. ಭವ್ಯಾ ಗೌಡ, ಧನರಾಜ್, ಧರ್ಮ, ರಂಜಿತ್, ತ್ರಿವಿಕ್ರಂ, ಮಾನಸಾ, ಐಶ್ವರ್ಯಾ, ಗೋಲ್ಡ್ ಸುರೇಶ್, ಹಂಸ, ಜಗದೀಶ್, ಅನುಷಾ ರೈ ನಾಮಿನೇಟ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.