ಸಿನಿಮಾ ಶೂಟಿಂಗ್ ವಿಚಾರದಲ್ಲಿ ಎಷ್ಟೇ ಮುನ್ನೆಚ್ಚರಿಕೆ ತೆಗೆದುಕೊಂಡರೂ ಅವಘಡಗಳು ಸಂಭವಿಸಿ ಬಿಡುತ್ತವೆ. ಈಗ ಹಿಂದಿ ಧಾರಾವಾಹಿ ‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ (Ghum Hai Kisi Ke Pyaar Mein) ಧಾರಾವಾಹಿ ಸೆಟ್ನಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದೆ. ಇದರಿಂದ ಇಡೀ ಧಾರಾವಾಹಿ ಸೆಟ್ ಬೆಂಕಿಗೆ ಆಹುತಿ ಆಗಿದೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಈ ಸೆಟ್ ಇತ್ತು. ಮಾರ್ಚ್ 10ರಂದು ಸಂಜೆ ನಾಲ್ಕು ಗಂಟೆ ವೇಳೆಗೆ ಈ ಅಗ್ನಿಅವಘಡ ಸಂಭವಿಸಿದೆ. ಸದ್ಯ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದು ವರದಿ ಆಗಿದೆ. ಈ ಬಗ್ಗೆ ಇನ್ನಷ್ಟೇ ಹೆಚ್ಚಿನ ಅಪ್ಡೇಟ್ ಸಿಗಬೇಕಿದೆ.
ಸೆಟ್ನಲ್ಲಿ ಸಿಲಿಂಡರ್ ಇತ್ತು. ಅದು ಸ್ಫೋಟಗೊಂಡಿದೆ. ಇದರಿಂದ ಕ್ಷಣಮಾತ್ರದಲ್ಲಿ ಬೆಂಕಿ ಎಲ್ಲಾ ಕಡೆಗಳಲ್ಲಿ ಆವರಿಸಿದೆ. ಸೆಟ್ ಬಹುತೇಕ ಸುಟ್ಟು ಕರಕಲಾಗಿದೆ. ಸೆಟ್ನಲ್ಲಿ ಬೆಂಕಿ ನಂದಿಸಲು ಯಾವುದೇ ವಸ್ತುಗಳು ಇರಲಿಲ್ಲ. ಇದು ಬೆಂಕಿ ವೇಗವಾಗಿ ಹಬ್ಬಲು ಸಹಕಾರಿ ಆಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಫಿಲ್ಮ್ ಸಿಟಿ ನಿರ್ದೇಶಕರ ವಿರುದ್ಧವೂ ಕೇಸ್ ದಾಖಲಾಗಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.
I m hell scared thinking about that the whole Bomb Blaste sequence was focused on #Ayeshasingh & vinu only.Even Ayeshu would be one who is more close to the fire place. Thank god for saving our doll & whole team.Ayesha looking so stressed?#GhumHaiKisikeyPyaarMeiin pic.twitter.com/HRyun24Yf2
— hiya s (@hiya552000) March 10, 2023
ಸಿಲಿಂಡರ್ ಸ್ಫೋಟಗೊಳ್ಳುವ ಸಂದರ್ಭದಲ್ಲಿ ಮಕ್ಕಳ ದೃಶ್ಯವೊಂದನ್ನು ಶೂಟ್ ಮಾಡಲಾಗುತ್ತಿತ್ತು. ಬೆಂಕಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅವರನ್ನು ಸ್ಥಳಾಂತರ ಮಾಡಲಾಗಿದೆ. ಧಾರಾವಾಹಿಯ ಕೆಲ ವಸ್ತುಗಳು ಸುಟ್ಟು ಹೋಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Film City: ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕೆ ಸಿಎಂಗೆ ಮನವಿ; ಕನ್ನಡದ ಸೆಲೆಬ್ರಿಟಿಗಳ ಜತೆ ಬಾಲಿವುಡ್ ಮಂದಿ ಸಹಿ
‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿ ಸೆಟ್ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅಕ್ಕಪಕ್ಕದ ಸೆಟ್ಗೂ ಹಾನಿ ಆಗಿದೆ. ಶೂನ್ಯ ಸ್ಕ್ವೇರ್ ಪ್ರೊಡಕ್ಷನ್ಸ್ ಕಡೆಯಿಂದ ಸೆಟ್ ಒಂದು ನಿರ್ಮಾಣ ಆಗುತ್ತಿತ್ತು. ಬೆಂಕಿ ಬಿದ್ದ ಧಾರಾವಾಹಿ ಸೆಟ್ನ ಪಕ್ಕದಲ್ಲೇ ಅದೂ ಇತ್ತು. ಅದಕ್ಕೂ ಬೆಂಕಿ ತಗುಲಿದೆ. ಬೆಂಕಿ ಹರಡುವ ಭಯದಿಂದ ಈ ಸೆಟ್ನ ಸಮೀಪದಲ್ಲಿದ್ದ ಎರಡು ಸೆಟ್ನಿಂದ ಜನರನ್ನು ಸ್ಥಳಾಂತರ ಮಾಡಲಾಗಿತ್ತು.
‘ಗಮ್ ಹೈ ಕಿಸೀಕೆ ಪ್ಯಾರ್ ಮೈ’ ಧಾರಾವಾಹಿಯಲ್ಲಿ ಆಯೇಶಾ ಸಿಂಗ್, ನೀಲ್ ಭಟ್, ಐಶ್ವರ್ಯಾ ಶರ್ಮ ಭಟ್, ಕಿಶೋರಿ ಶಹಾನೆ, ಸ್ನೇಹಾ ಭವ್ಸಾರ್ ಮೊದಲಾದವರು ನಟಿಸುತ್ತಿದ್ದಾರೆ. 2020ರಿಂದ ಈ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಜಯ್ದೀಪ್ ಸೇನ್ ಸೇರಿ ಇಬ್ಬರು ನಿರ್ದೇಶಕರು ಈ ಧಾರಾವಾಹಿಗೆ ಕೆಲಸ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ