
ಮಾಳು (Malu Nipanal) ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರಿಂದ ಎಲಿಮಿನೇಟ್ ಆಗಿದ್ದಾರೆ. ಬರೋಬ್ಬರಿ 90 ದಿನಗಳ ಕಾಲ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದರು. ಆದರೆ, ಫಿನಾಲೆ ತಲುಪಲು ಅವರ ಬಳಿ ಸಾಧ್ಯವಾಗಿಲ್ಲ. ಫಿನಾಲೆಗೆ ಕೆಲವೇ ವಾರ ಇರುವಾಗ ಅವರು ಎಡವಿದ್ದಾರೆ. ಬಿಗ್ ಬಾಸ್ನಿಂದ ಹೊರ ಬಂದ ಅವರು ಹೇಳಿರೋ ಮಾತು ವೈರಲ್ ಆಗಿದೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬಂತೆ ಅವರ ಮಾತಿಗೆ ಖಡಕ್ ಉತ್ತರ ಬಂದಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 12’ಕ್ಕೆ ಮಾಳು ಅವರ ಕೊಡುಗೆ ಹೆಚ್ಚೇನು ಇಲ್ಲ. ಅವರು ಎಪಿಸೋಡ್ಗಳಲ್ಲಿ ಕಾಣಿಸಿಕೊಂಡಿದ್ದು ತುಂಬಾನೇ ಕಡಿಮೆ. ಅವರು ಮಾತನ್ನು ಆಡುತ್ತಲೇ ಇರಲಿಲ್ಲ. ವೀಕೆಂಡ್ನಲ್ಲೂ ಅವರು ಹೆಚ್ಚು ಚರ್ಚೆಗೆ ಬರುತ್ತಿರಲಿಲ್ಲ. ಆದರೂ ಅವರು 90 ದಿನ ಬಿಗ್ ಬಾಸ್ ಮನೆಯಲ್ಲಿ ಉಳಿದರು. ಉತ್ತರ ಕರ್ನಾಟಕ ಮಂದಿಯ ಬೆಂಬಲ ಅವರಿಗೆ ಸಿಗುತ್ತಿತ್ತು. ಆದರೆ, ಇದನ್ನು ಅವರು ತಪ್ಪಾಗಿ ಭಾವಿಸಿದಂತೆ ಇದೆ.
ಇದನ್ನೂ ಓದಿ: ‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಟಿವಿ9 ಕನ್ನಡದ ಜೊತೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮಾಳು, ತಮ್ಮ ಸೋಲನ್ನು ಒಪ್ಪಿಕೊಂಡಿಲ್ಲ. ‘ನಾನು ಎಲಿಮಿನೇಟ್ ಆಗಿದ್ದಕ್ಕೆ ಇಡೀ ಉತ್ತರ ಕರ್ನಾಟಕ ಅಳುತ್ತಿದೆ ಎಂದು ನನಗೆ ಅನಿಸುತ್ತಿದೆ. ಯಾರೇ ವಿನ್ ಆದರೂ ಇದನ್ನು ನಾನು ಒಪ್ಪಿಕೊಳ್ಳಲ್ಲ’ ಎಂದೆಲ್ಲ ಹೇಳಿದ್ದರು. ಅವರು ಆಡಿದ ಈ ಮಾತುಗಳು ಟ್ರೋಲ್ ಆಗುತ್ತಿವೆ.
#BBK12 ಮನೆಯಲ್ಲಿ ಇವ್ನನ್ನ ನೋಡ್ದಾಗ ಈತ ಒಬ್ಬ ಪ್ರಭುದ್ದ ಅನ್ಕೊಂಡಿದ್ದೆ… But 👎
ತಾನು ಬಿಟ್ರೆ #BBKSeason12 🏆 ಗೆಲ್ಲೊ ಯೋಗ್ಯತೆ ಯಾರಿಗೂ ಆ ಮನೇಲಿಲ್ಲ.. ಅನ್ನೋ ಮಾತು 🤦♂️ಮೂರ್ಖತನದ ಪರಮಾವಧಿ!
ಒಳಗಡೆ ಗಳಿಸಿದ್ದು ಹೊರಗಡೆ ಬಂದು ಕಳ್ಕೊಳೋದು ಅಂತಾರಲ್ಲ.. ಅದು ಇದೆ ಇರ್ಬೇಕು 😌
— Deepak Singh (@Deepak_Smg) December 29, 2025
ಅಲ್ಲ ಲೇ ಮಾಳ್ಯ ಉತ್ತರಕರ್ನಾಟಕದಾಗ ಎಲ್ಲರೂ ಅಳಕುಂತರ ಅಂದಿ ಅಲ್ಲ ನಿಂಗ್ ನಿನ್ನ ತಾಲೂಕ ಬಿಟ್ಟ ಯಾರು ಮುಸು ನೋಡ್ಲಿಲ್ಲ ನೀನು ಆಟ ಆಡಿದ್ದಿ ಅಂದ್ರ ಸಪೋರ್ಟ್ ಮಾಡ್ತಿದ್ರು ಏನು ಮಾಡ್ಲಾರ್ದ ಇಲ್ಲಿ ಬಂದ್ ಅಳ ಕುಂತ್ರ ಏನು ಆಗಲ್ಲ 🥲#BBK12 #BBK pic.twitter.com/gecGzjIxj9
— BISICHAA (@bisichaa) December 29, 2025
‘ಅಲ್ಲ ಲೇ ಮಾಳ್ಯ ಉತ್ತರಕರ್ನಾಟಕದಾಗ ಎಲ್ಲರೂ ಅಳಕುಂತರ ಅಂದಿ ಅಲ್ಲ.. ನೀನ್ ನಿನ್ನ ತಾಲೂಕ ಬಿಟ್ಟ ಯಾರಿಗೂ ಗೊತ್ತಿಲ್ಲ. ನೀನು ಆಟ ಆಡಿದ್ದಿ ಅಂದ್ರ ಸಪೋರ್ಟ್ ಮಾಡ್ತಿದ್ರು. ಏನು ಮಾಡ್ಲಾರ್ದ ಇಲ್ಲಿ ಬಂದ್ ಅಳ ಕುಂತ್ರ ಏನು ಆಗಲ್ಲ’ ಎಂದು ಟ್ವಿಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು, ‘ಬಿಗ್ ಬಾಸ್ ಮನೆಯಲ್ಲಿ ಇವ್ನನ್ನ ನೋಡ್ದಾಗ ಈತ ಒಬ್ಬ ಪ್ರಭುದ್ದ ಅನ್ಕೊಂಡಿದ್ದೆ ಆದರೆ, ತನ್ನ ಬಿಟ್ರೆ ಬಿಗ್ ಬಾಸ್ ಗೆಲ್ಲೋ ಯೋಗ್ಯತೆ ಯಾರಿಗೂ ಆ ಮನೇಲಿಲ್ಲ ಅನ್ನೋ ಮಾತು. ಮೂರ್ಖತನದ ಪರಮಾವಧಿ. ಒಳಗಡೆ ಗಳಿಸಿದ್ದು ಹೊರಗಡೆ ಬಂದು ಕಳ್ಕೊಳೋದು ಅಂತಾರಲ್ಲ. ಅದು ಇದೇ ಇರ್ಬೇಕು’ ಎಂದು ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.