‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಎರಡನೇ ವಾರ ಯಾವುದೇ ಎಲಿಮಿನೇಷನ್ ಆಗಿಲ್ಲ. ಈ ರೀತಿಯ ಘಟನೆ ನಡೆದಾಗ ಬಿಗ್ ಬಾಸ್ ಟ್ವಿಸ್ಟ್ ಕೊಡೋದು ವಾಡಿಕೆ. ಇದೇ ರೀತಿಯ ಎಚ್ಚರಿಕೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಈ ವಾರ ಯಾರು ಯಾವಾಗ ಬೇಕಿದ್ದರೂ ಮನೆಯಿಂದ ಹೊರಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಶಾಕ್ಗೆ ಒಳಗಾಗಿದ್ದಾರೆ.
ನವರಾತ್ರಿಯ ಸಮಯದಲ್ಲಿ ಬಿಗ್ ಬಾಸ್ನಲ್ಲಿ ಕಳೆದ ವರ್ಷ ಯಾರನ್ನೂ ಹೊರಕ್ಕೆ ಕಳುಹಿಸಿರಲಿಲ್ಲ. ಈ ವರ್ಷವೂ ಹಾಗೆಯೇ ಆಗಬಹುದು ಎಂದು ಅನೇಕರು ಊಹಿಸಿದ್ದರು. ಹಾಗೆಯೇ ಆಗಿದೆ. ಈ ಬಾರಿಯೂ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಈ ವಾರ ಎರಡು ಎಲಿಮಿನೇಷನ್ ನಡೆಯೋದು ಪಕ್ಕಾ ಎಂದು ಹೇಳಲಾಗುತ್ತಿದೆ. ಈ ವಿಚಾರದಿಂದ ಮನೆ ಮಂದಿಗೆ ಚಿಂತೆ ಶುರುವಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಎರಡನೇ ಕ್ಯಾಪ್ಟನ್ ಆಗಿ ಶಿಶಿರ್ ಆಯ್ಕೆಗೊಂಡಿದ್ದಾರೆ. ಅವರು ಪ್ರತಿ ನಿರ್ಧಾರವನ್ನು ಸಾಕಷ್ಟು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಿದೆ. ಅದೇ ರೀತಿ ನೇರ ನಾಮಿನೇಷನ್ಗೆ ಅವರಿಗೆ ಅಧಿಕಾರ ನೀಡಲಾಗಿದೆ. ಈ ಅಧಿಕಾರವನ್ನು ಅವರು ಬಳಕೆ ಮಾಡಿಕೊಂಡು ಮೊದಲು ಅನುಷಾ ಅವರನ್ನು ನಾಮಿನೇಟ್ ಮಾಡಿದರು. ಆ ಬಳಿಕ ಧನರಾಜ್, ಜಗದೀಶ್ ಹಾಗೂ ಹಂಸ ಅವರನ್ನು ನಾಮಿನೇಟ್ ಮಾಡಿದರು.
ಧನರಾಜ್, ಹಂಸ, ಜಗದೀಶ್ ಅವರನ್ನು ನಾಮಿನೇಟ್ ಮಾಡಿದ ಬಳಿಕ, ‘ಇದು ನೇರ ನಾಮಿನೇಷನ್ ಅಲ್ಲ. ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ’ ಎಂದು ಬಿಗ್ ಬಾಸ್ ಹೇಳಿರೋದಾಗಿ ಶಿಶಿರ್ ಎಲ್ಲರ ಎದುರು ವಿವರಣೆ ನೀಡಿದರು. ಈ ವಿವರಣೆಯ ಬಳಿಕ ಬಿಗ್ ಬಾಸ್, ಶಿಶಿರ್ ಅವರನ್ನು ಕರೆಸಿ, ‘ನಾನೆಲ್ಲಿ ಗೇಮ್ ಆಡಿ ಗೆಲ್ಲೋಕೆ ಎರಡನೇ ಅವಕಾಶ ಇರುತ್ತದೆ ಎಂದು ಹೇಳಿದೆ’ ಎಂದು ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಅಶ್ಲೀಲವಾಗಿ ಬಿಗ್ ಬಾಸ್ ಶೋ ಬಗ್ಗೆ ಮಾತಾಡಿದ ಜಗದೀಶ್; ಮಿತಿ ಮೀರಿತು ವರ್ತನೆ
‘ಕಳೆದ ವಾರ ಯಾವುದೇ ಎಲಿಮಿನೇಷನ್ ನಡೆದಿಲ್ಲ. ಹೀಗಾಗಿ, ಈ ವಾರ ಯಾರು ಯಾವಾಗ ಹೊರಕ್ಕೆ ಹೋಗುತ್ತಾರೆ ಎಂದು ಹೇಳೋಕಾಗಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಈ ಹೇಳಿಕೆಯಿಂದ ಅವರು ಸಿಟ್ಟಾದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:24 am, Wed, 16 October 24