ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್

|

Updated on: Feb 13, 2025 | 2:47 PM

ಈ ವಾರದ ಕನ್ನಡ ಟಿವಿ ಟಿಆರ್​ಪಿ ವರದಿಯ ಪ್ರಕಾರ, ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿದೆ. 'ಲಕ್ಷ್ಮೀ ನಿವಾಸ' ಮತ್ತು 'ಅಣ್ಣಯ್ಯ' ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನಗಳಲ್ಲಿದೆ. ಹೊಸ ಧಾರಾವಾಹಿ 'ನಾನಿನ್ನ ಬಿಡಲಾರೆ' ಉತ್ತಮ ಪ್ರದರ್ಶನ ನೀಡಿದೆ. 'ಸರಿಗಮಪ' ಶೋ ಕೂಡ ಉತ್ತಮ ಟಿಆರ್​ಪಿ ಪಡೆದಿದೆ.

ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್
ಟಿಆರ್​ಪಿ ಲೆಕ್ಕ: ಹೊಸ ಧಾರಾವಾಹಿಗಳ ಜೊತೆ ಹಳೆ ಸೀರಿಯಲ್​ಗಳ ಕಾಂಪಿಟೇಷನ್
Follow us on

ಒಂದೇ ಚಾನೆಲ್​ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್​ಪಿ ಸ್ಪರ್ಧೆ ಇದ್ದೇ ಇರುತ್ತದೆ. ಎಲ್ಲಾ ಧಾರಾವಾಹಿಗಳು ಮೊದಲ ಸ್ಥಾನ ಪಡೆಯಬೇಕು ಎಂದು ಎಲ್ಲಾ ಧಾರಾವಾಹಿಗಳು ಪ್ರಯತ್ನಿಸುತ್ತಾ ಇರುತ್ತವೆ. ಈಗ ಟಿಆರ್​ಪಿ ಲೆಕ್ಕಾಚಾರ ಸಿಕ್ಕಿದೆ. ಈ ವರ್ಷದ ಐದನೇ ವಾರದ ಟಿಆರ್​ಪಿ ಲೆಕ್ಕ ಹೊರ ಬಿದ್ದಿದೆ. ಇದರಲ್ಲಿ ಯಾವ ಧಾರಾವಾಹಿ ಮೊದಲಿದೆ? ಹೊಸ ಧಾರಾವಾಹಿಗಳ ಟಿಆರ್​ಪಿ ಹೇಗಿದೆ ಎಂಬುದರ ವಿವರ ಇದೆ.

ನಗರ ಹಾಗೂ ಗ್ರಾಮಗಳ ಟಿಆರ್​ಪಿಯನ್ನು ಪರಿಗಣಿಸಿದರೆ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಸ್ಥಾನ ಪಡೆದುಕೊಂಡಿದೆ. ಮೂರನೇ ಸ್ಥಾನದಲ್ಲಿ ‘ಅಣ್ಣಯ್ಯ’ ಧಾರಾವಾಹಿ ಇದೆ.  ಈ ಧಾರಾವಾಹಿ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯಿತ್ತಿದೆ.

ಈ ಮೂರು ಧಾರಾವಾಹಿಗಳು ಈ ಮೊದಲೇ ಪ್ರಸಾರ ಆರಂಭಿಸಿದ್ದವು. ಹೀಗಾಗಿ, ಈಗ ಹೊಸದಾಗಿ ಪ್ರಸಾರ ಕಾಣುತ್ತಿರುವ ಧಾರಾವಾಹಿಗಳು ಈ ಧಾರಾವಾಹಿಗಳ ಜೊತೆ ಸ್ಪರ್ಧೆಗೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ.

ನಾಲ್ಕನೇ ಸ್ಥಾನದಲ್ಲಿ ‘ನಾನಿನ್ನ ಬಿಡಲಾರೆ’ ಧಾರಾವಾಹಿ ಇದೆ. ಇತ್ತೀಚಿನ ದಿನಗಳಲ್ಲಿ ಆರಂಭ ಆದ ಈ ಧಾರಾವಾಹಿ ಒಳ್ಳೆಯ ಪ್ರತಿಕ್ರಿಯೆ ಪಡೆದಿದೆ. ಈ ಧಾರಾವಾಹಿಯ ಗ್ರಾಫಿಕ್ಸ್ ಹಾಗೂ ಮೇಕಿಂಗ್ ಎಲ್ಲರ ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಮುಂದಿನ ದಿನಗಳಲ್ಲಿ ಒಂದನೇ ಸ್ಥಾನ ಪಡೆಯಲಿದೆಯೇ ಎನ್ನುವ ಕುತೂಹಲ ಮೂಡಿದೆ.

ಐದನೇ ಸ್ಥಾನದಲ್ಲಿ ‘ಅಮೃತಧಾರೆ’ ಧಾರಾವಾಹಿ ಇದೆ. ಈ ಧಾರಾವಾಹಿ ಕಳೆದ ಕೆಲವು ವರ್ಷಗಳಿಂದ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿಯಲ್ಲಿ ಪ್ರಮುಖ ಟ್ವಿಸ್ಟ್​ಗಳು ಇದ್ದು, ಎಲ್ಲರ ಮೆಚ್ಚುಗೆ ಪಡೆದಿದೆ. ಹೀಗಾಗಿ ಟಾಪ್ 5ರಲ್ಲಿ ಧಾರಾವಾಹಿಗೆ ಸ್ಥಾನ ಸಿಕ್ಕಿದೆ.

ಇದನ್ನೂ ಓದಿ: ಟಿಆರ್​ಪಿ ವಿಚಾರದಲ್ಲಿ ‘ಬಿಗ್ ಬಾಸ್ ಫಿನಾಲೆ’ ದಾಖಲೆ; ಹೊಸ ಧಾರಾವಾಹಿಗಳ ರೇಟಿಂಗ್ ಹೇಗಿದೆ?

ಇನ್ನು, ಸರಿಗಮಪ ವೇದಿಕೆ ಮೇಲೆ ಇತ್ತೀಚೆಗೆ ಶ್ರುತಿ, ಸುಧಾರಾಣಿ, ತಾರಾ ಮೊದಲಾದ ಸೆಲೆಬ್ರಿಟಿಗಳು ಬಂದಿದ್ದರು. ಇದರ ಟಿಆರ್​ಪಿ ಕೂಡ ಹೊರ ಬಿದ್ದಿದೆ. ಇದಕ್ಕೆ 10.6 ಟಿವಿಆರ್ ಸಿಕ್ಕಿದೆ. ಈ ಮೂಲಕ ಜನರು ಈ ಶೋನ ಮೆಚ್ಚಿಕೊಂಡಿದ್ದು ಸ್ಪಷ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:22 pm, Thu, 13 February 25