ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ರಾತ್ರಿ 8.30ಕ್ಕೆ ಪ್ರಸಾರವಾಗುವ ಲಕ್ಷಣ ಧಾರವಾಹಿಯು ತನ್ನ ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗುವ ಮುಂಚೆನೇ ಡೆವಿಲ್ ಉಪಾಯದಿಂದ ಪ್ರಖ್ಯಾತ್‌ನನ್ನು ಕಿಡ್ನಾಪ್ ಮಾಡಿದ್ದಾಳೆ. ಇದು ಮಾತ್ರವಲ್ಲದೆ ಭೂಪತಿಗೆ ಒಂದು ಕೊರಿಯರ್ ಕಳುಹಿಸಿ ರಾತ್ರಿ 9.30ಕ್ಕೆ ಒಂದು ಸಾವು ಸಂಭವಿಸುತ್ತದೆ ಎಂದು ಹೇಳಿರುತ್ತಾಳೆ. ಇದರಿಂದ ಭಯಗೊಂಡ ಭೂಪತಿ ಮತ್ತು ನಕ್ಷತ್ರಳಿಗೆ ಆ ಡೆವಿಲ್ ಎಂತಹ ಮಾಸ್ಟರ್ ಮೈಂಡ್ ಮತ್ತು ಎಷ್ಟು ಕ್ರೂರಿ ಎಂಬ ಅರಿವಾಗಿದೆ. ಪ್ರಖ್ಯಾತ್‌ನ ಪ್ರಾಣ ಉಳಿಸುವ ಸಲುವಾಗಿ ಭೂಪತಿ ನಕ್ಷತ್ರ ಜೋಡಿ ಹಾಗೂ ಪೊಲೀಸರು ಅವನನ್ನು ಹುಡುಕುವ ಪ್ರಯತ್ನಕ್ಕೆ ಮುಂದಾಗುತ್ತಾರೆ.
ಇಷ್ಟರಲ್ಲೇ ಭೂಪತಿಯ ಮನೆಗೆ ಒಂದು ಕೊರಿಯರ್ ಕೂಡಾ ಬರುತ್ತದೆ. ಅದನ್ನು ಶಕುಂತಳಾದೇವಿ ಓಪನ್ ಮಾಡಿ ನೋಡಿದಾಗ ಅದರಲ್ಲಿ ಒಂದು ಲೇಟರ್ ಇತ್ತು ಹಾಗೂ ಸಾವಿನ ಸುದ್ದಿಯನ್ನು ಕೂಡಾ ಬರೆಯಲಾಗಿತ್ತು. ಇದರಿಂದ ಗಾಬರಿಗೊಂಡ ಶಕುಂತಳಾದೇವಿ ಭೂಪತಿಗೆ ಕಾಲ್ ಮಾಡಿ ಬೇಗ ಮನೆಗೆ ಬಾ ಮನೆಗೆ ಒಂದು ಲೆಟರ್ ಬಂದಿದೆ, ನನಗೆ ಭಯವಾಗುತ್ತದೆ. ನಿನಗೆ ಏನಾದರೂ ತೊಂದರೆಯಾದರೆ ನನಗೆ ಯಾರಿದ್ದಾರೆ ಬೇಗ ಬಾ ಎಂದು ಅಳುತ್ತಾಳೆ.
ಆಕೆಗೆ ಸಮಾಧಾನ ಮಾಡಿ ಆ ಲೆಟರ್‌ನ ಫೋಟೋ ಕಳುಹಿಸುವಂತೆ ಭೂಪತಿ ಕೇಳುತ್ತಾನೆ. ಶಕುಂತಳಾದೇವಿ ಲೆಟರ್‌ನ ಫೋಟೊ ಭೂಪತಿಗೆ ಕಳುಹಿಸುತ್ತಾರೆ. ಅದನ್ನು ನೋಡಿದ ಆತನಿಗೆ ಶಾಕ್ ಆಗುತ್ತದೆ. ಸರಿಯಾಗಿ ರಾತ್ರಿ 9.30ಕ್ಕೆ ಒಂದು ಸಾವು ಆಗುತ್ತದೆ. ನಿನ್ನ ಬಳಿ ಟೈಮ್ ತುಂಬಾ ಕಮ್ಮಿ ಇದೆ. ಸಾಧ್ಯವಾದರೆ ಅವನನ್ನು ಉಳಿಸಿಕೋ ಅಂತ ಹೇಳಿ ಕೊನೆಯಲ್ಲಿ ಪ್ರಖ್ಯಾತ್‌ನನ್ನು ಬಚ್ಚಿಟ್ಟ ಸ್ಥಳದ ವಿಳಾಸವನ್ನು ಕೂಡ ಲೆಟರ್‌ನಲ್ಲಿ ಬರೆದಿರುತ್ತದೆ.
ಇದನ್ನು ಓದಿ; ಭುವಿ ಹೆಗಲಿಗೆ ರತ್ನಮಾಲಾ ಕಂಪನಿಯ ಜವಾಬ್ದಾರಿ; ಸಾನಿಯಾಗೆ ಶುರುವಾಯ್ತು ಹೊಟ್ಟೆಉರಿ
ಆ ಲೆಟರ್‌ನಲ್ಲಿ ಬರೆದಿರುವ ವಿಳಾಸ ‘ಬನಶಂಕರಿ ಗ್ರೌಂಡ್’. ಇದೇ ಜಾಗದಲ್ಲಿ ನಕ್ಷತ್ರಳ ತಂದೆ ಚಂದ್ರಶೇಖರ್ ನವರಾತ್ರಿಯ ಪೂಜಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಅದು ಕೂಡಾ ಇದೇ ಸಮಯದಲ್ಲಿ. ಖಂಡಿತವಾಗಿಯೂ ಪ್ರಖ್ಯಾತ್‌ನನ್ನು ಮುಂದಿಟ್ಟುಕೊಂಡು ನನ್ನ ತಂದೆಯನ್ನು ಕೊಲೆ ಮಾಡಲು ಸಂಚು ಮಾಡುತ್ತಿದ್ದಾಳೆ, ಎಂದು ಭಯ ಪಡುತ್ತಾಳೆ ನಕ್ಷತ್ರ.
ನಂತರ ನಕ್ಷತ್ರ ಮತ್ತು ಭೂಪತಿ ಆ ಸ್ಥಳಕ್ಕೆ ಹೋಗುತ್ತಾರೆ. ಡೆವಿಲ್ ಕೂಡಾ ಅಲ್ಲಿಗೆ ಬಂದಿರುತ್ತಾಳೆ. ಪ್ರಖ್ಯಾತ್‌ನನ್ನು ಈ ಜನಜಂಗುಳಿ ಮಧ್ಯೆ ಹೇಗೆ ಹುಡುಕುವುದು ಎಂದು ಭೂಪತಿಗೆ ಚಿಂತೆಯಾಗಿದೆ. ಆದರೆ ನಕ್ಷತ್ರ ಆಕೆಯ ತಂದೆಯ ಪ್ರಾಣಕ್ಕೆ ಕುತ್ತು ಬಂದಿದೆ ಎಂದುಕೊಂಡು ಅವರನ್ನು ಹೇಗಾದರೂ ಕಾಪಡಲೇಬೇಕು ಎಂದು ಪಣ ತೊಟ್ಟಿದ್ದಾಳೆ.
ಎಷ್ಟೇ ಹುಡುಕಿದರೂ ಪ್ರಖ್ಯಾತ್ ಭೂಪತಿಯ ಕೈಗೆ ಸಿಗುವುದಿಲ್ಲ. ಆ ಡೆವಿಲ್ ಮಹಿಳೆ ಆತನನ್ನು ವಿಜಯ ದಶಮಿಯಂದು ಸುಡುವ ರಾವಣನ ಹಿಂದೆ ಪ್ರಖ್ಯಾತ್‌ನನ್ನು ಕಟ್ಟಿ ಹಾಕಿರುತ್ತಾಳೆ. ಕೊನೆಯ ಕ್ಷಣದಲ್ಲಾದರೂ ಭೂಪತಿ ಪ್ರಖ್ಯಾತ್‌ನನ್ನು ಕಾಪಾಡುತ್ತಾನಾ ಹಾಗೂ ಆ ಡೆವಿಲ್ ಮಹಿಳೆ ಯಾರೆಂಬುದು ಈ ದಿನವಾದರೂ ಗೊತ್ತಾಗುತ್ತಾ ಎಂದು ಮುಂದೆ ಕಾದು ನೋಡಬೇಕಾಗಿದೆ.
ಮಧುಶ್ರೀ