‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ

ಬಿಗ್ ಬಾಸ್ ತೊರೆದು ಹೊರಗೆ ಹೋಗುವುದಾಗಿ ಅನೇಕ ಸ್ಪರ್ಧಿಗಳು ಹೇಳಿದ್ದಾರೆ. ಈ ಬಾರಿ ನಮ್ರತಾ ಗೌಡ ಅವರ ಸರದಿ. ಸಂಗೀತಾ ಜೊತೆ ಆದ ಜಗಳಕ್ಕೆ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ’; ಕಣ್ಣೀರು ಹಾಕಿದ ನಮ್ರತಾ
ಸಂಗೀತಾ-ನಮ್ರತಾ

Updated on: Dec 16, 2023 | 9:30 AM

‘ಬಿಗ್ ಬಾಸ್’ (Bigg Boss) ಮನೆಯಲ್ಲಿ ಎಲ್ಲಾ ಮನಸ್ಥಿತಿಗಳ ಜೊತೆ ಒಟ್ಟಿಗೆ ಸಾಗೋದು ಅಷ್ಟು ಸುಲಭದ ಮಾತು ಅಲ್ಲವೇ ಅಲ್ಲ. ಕಪ್ ಗೆಲ್ಲಬೇಕು ಎಂದರೆ ಇದೆಲ್ಲವನ್ನೂ ಎದುರಿಸಲೇಬೇಕು. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳಿಗೆ ಚಾಲೆಂಜ್​ಗಳನ್ನು ಎದುರಿಸುವ ತಾಕತ್ತು ಸ್ವಲ್ಪ ಕಡಿಮೆ ಇದೆ ಎನ್ನುವ ಭಾವನೆ ವೀಕ್ಷಕರಿಗೆ ಬರುತ್ತಿದೆ. ಬಿಗ್ ಬಾಸ್ ತೊರೆದು ಹೊರಗೆ ಹೋಗುವುದಾಗಿ ಅನೇಕ ಸ್ಪರ್ಧಿಗಳು ಹೇಳಿದ್ದಾರೆ. ಈ ಬಾರಿ ನಮ್ರತಾ ಗೌಡ ಅವರ ಸರದಿ. ಸಂಗೀತಾ ಜೊತೆ ಆದ ಜಗಳಕ್ಕೆ ಅವರು ಮನೆ ಬಿಟ್ಟು ಹೋಗುವ ನಿರ್ಧಾರಕ್ಕೆ ಬಂದಿದ್ದಾರೆ.

ಬಿಗ್ ಬಾಸ್​ನಲ್ಲಿ ಪ್ರತಿ ವಾರ ಲಕ್ಷುರಿ ಬಜೆಟ್ ನೀಡುತ್ತಾರೆ. ಮನೆಯಲ್ಲಿ ಸಿಗುವ ಸಾಮಾನ್ಯ ವಸ್ತುಗಳಿಗಿಂತ ಬೇರೆ ವಸ್ತುಗಳನ್ನು ಇಲ್ಲಿ ಪಡೆಯಬಹುದು. ಈ ವಾರ 10 ಸಾವಿರ  ಪಾಯಿಂಟ್ಸ್ ಸಿಕ್ಕಿತ್ತು. ಆದರೆ, ಇದನ್ನು ಸ್ಪರ್ಧಿಗಳು ಹಾಳು ಮಾಡಿಕೊಂಡರು. ಕೊಟ್ಟ ಪಾಯಿಂಟ್ಸ್​ಗಿಂತ ಹೆಚ್ಚಿನ ಪಾಯಿಂಟ್ಸ್ ಬರೆದರು ಲಕ್ಷುರಿ ಬಜೆಟ್ ಮಿಸ್ ಆಯಿತು. ಬೋರ್ಡ್​ ಮೇಲೆ ಲೆಕ್ಕ ಬರೆಯಲು ಹೋದ ನಮ್ರತಾ ಹಾಗೂ ಮೈಕಲ್ ವಿರುದ್ಧ ಸಂಗೀತಾ ತಿರುಗಿ ಬಿದ್ದರು.

ಈ ಬಾರಿಯ ಲಕ್ಷುರಿ ಬಜೆಟ್​ನಲ್ಲಿ ಚಿಕನ್, ಪನೀರ್ ಹಾಗೂ ಬ್ರೌನ್ ರೈಸ್ ಬರೆಯಲಾಗಿತ್ತು. ಬ್ರೌನ್ ರೈಸ್ ಸೇರಿಸಿದ್ದರಿಂದಲೇ ಲೆಕ್ಕ ತಪ್ಪಿತು ಎಂದು ಸಂಗೀತಾ ವಾದ ಮಾಡಿದರು. ಜೊತೆಗೆ ಬ್ರೌನ್​ ರೈಸ್​ನ ಯಾರನ್ನು ಕೇಳಿ ಸೇರಿಸಿದಿರಿ ಎಂದು ಕ್ಯಾತೆ ತೆಗೆದರು. ಇದು ನಮ್ರತಾಗೆ ಬೇಸರ ತರಿಸಿತು. ‘ಮನೆಯಲ್ಲಿ ಅಕ್ಕಿ ಕಡಿಮೆ ಬೀಳುತ್ತದೆ ಎನ್ನುವ ಕಾರಣಕ್ಕೆ ಬ್ರೌನ್​ ರೈಸ್ ಸೇರಿಸಿದೆ. ಮನೆಗೋಸ್ಕರ ನಾನು ಇದನ್ನು ಮಾಡಿದೆ. ಪನೀರ್ ನಿಮ್ಮ ಬಿಟ್ಟು ಬೇರೆ ಯಾರಿಗೂ ಬೇಕಿರಲಿಲ್ಲ. ಆದಾಗ್ಯೂ ನಾನು ಪನೀರ್​ನ ಸೇರಿಸಿದೆ’ ಎಂದು ನಮ್ರತಾ ಸ್ಪಷ್ಟನೆ ಕೊಡಲು ಬಂದರು. ಆದರೆ, ಸಂಗೀತಾ ಇದನ್ನು ಕಿವಿಗೆ ಹಾಕಿಕೊಳ್ಳಲೇ ಇಲ್ಲ.

ಇದನ್ನೂ ಓದಿ: ‘ಎಲಿಮಿನೇಟ್​ ಆದವರೆಲ್ಲ ನಮ್ಮ ಗುಂಪಿ​ನವರೇ’; ನಮ್ರತಾಗೆ ಕೊನೆಗೂ ಆಯ್ತು ಜ್ಞಾನೋದಯ

ಬೆಡ್​ರೂಂಗೆ ಹೋದ ನಮ್ರತಾ ಕಣ್ಣೀರು ಹಾಕಲು ಶುರು ಮಾಡಿದರು. ‘ಸಂಗೀತಾ ಮಾನಸಿಕವಾಗಿ ತುಂಬಾ ಹಿಂಸೆ ಕೊಡುತ್ತಿದ್ದಾಳೆ. ತುಂಬಾನೇ ನೆಗೆಟಿವಿಟಿ ಸ್ಪ್ರೆಡ್ ಮಾಡುತ್ತಿದ್ದಾಳೆ. ನನ್ನ ಬಳಿ ಇರೋಕೆ ಆಗುತ್ತಿಲ್ಲ. ನಾನು ಹೊರಹೋಗುತ್ತೇನೆ’ ಎನ್ನುತ್ತಾ ಮತ್ತಷ್ಟು ಕಣ್ಣೀರು ಹಾಕಿದರು. ಮನೆ ಮಂದಿ ಸಮಾಧಾನ ಮಾಡಲು ಪ್ರಯತ್ನಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:35 am, Sat, 16 December 23

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us