ಐದು ವರ್ಷಗಳ ನಂತರ ಹಾಸ್ಯನಟ ಕಪಿಲ್ ಶರ್ಮಾ ಅವರ ಕಾರ್ಯಕ್ರಮದಲ್ಲಿ ನವಜೋತ್ ಸಿಂಗ್ ಸಿಧು ಕಾಣಿಸಿಕೊಂಡಿದ್ದಾರೆ. ಅವರು ‘ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ’ ಸಂಚಿಕೆಗೆ ಬಂದಿದ್ದರು. ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ನಂತರ ಅವರು 2019ರಲ್ಲಿ ಕಾರ್ಯಕ್ರಮವನ್ನು ತ್ಯಜಿಸಬೇಕಾಯಿತು. ಅದರ ನಂತರ, ಅವರ ಸ್ಥಾನವನ್ನು ನಟಿ ಅರ್ಚನಾ ಪುರನ್ ಸಿಂಗ್ ವಹಿಸಿಕೊಂಡರು. ಇದೀಗ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸಿಧು ತಮ್ಮ ಕಾರ್ಯಕ್ರಮವನ್ನು ತೊರೆಯಲು ಕಾರಣವನ್ನು ಹೇಳಿದ್ದಾರೆ.
ನಾನು ಕಾರ್ಯಕ್ರಮದಿಂದ ಹಿಂದೆ ಸರಿಯುವುದರ ಹಿಂದೆ ಕೆಲವು ರಾಜಕೀಯ ಕಾರಣಗಳಿವೆ ಎಂದು ಸಿಧು ಹೇಳಿದ್ದಾರೆ. ‘ನಾನು ಅದರ ಬಗ್ಗೆ ಮಾತನಾಡಲು ಬಯಸುವುದಿಲ್ಲ. ಆದರೆ ಅದರ ಹೊರತಾಗಿ ಬೇರೆ ಕಾರಣಗಳೂ ಇದ್ದವು. ಪುಷ್ಪಗುಚ್ಛದಿಂದ ಒಂದೊಂದೇ ಹೂವುಗಳು ಹೊರ ಹೋಗುತ್ತಿದ್ದವು. ಆ ಪುಷ್ಪಗುಚ್ಛವು ಮೊದಲಿನಂತೆಯೇ ಮತ್ತೆ ಒಟ್ಟಿಗೆ ಬರಬೇಕೆಂದು ನಾನು ಬಯಸುತ್ತೇನೆ. ಅವರ ಕಾರ್ಯಕ್ರಮ ಇನ್ನೂ ಚೆನ್ನಾಗಿ ನಡೆಯುತ್ತಿದೆ. ಕಪಿಲ್ ತುಂಬಾ ಬುದ್ಧಿವಂತ’ ಎಂದಿದ್ದಾರೆ ಸಿಧು.
ಇಲ್ಲಿ ಸಿದ್ದು ಬಳಸಿದ ಹೂಗುಚ್ಛ ಎಂದರೆ ಕಪಿಲ್ ಅವರ ಕಾರ್ಯಕ್ರಮದ ವಿವಿಧ ನಟರು. ಹಲವು ನಟರು ಕಾರ್ಯಕ್ರಮದಿಂದ ಹೊರ ನಡೆದಿದ್ದರು. ಇದರಲ್ಲಿ ಉಪಾಸನಾ ಸಿಂಗ್, ಅಲಿ ಅಸ್ಗರ್ ಮತ್ತು ಸುಮೋನಾ ಚಕ್ರವರ್ತಿ ಸೇರಿದ್ದಾರೆ. ಕಾರ್ಯಕ್ರಮದ ಮೂಲ ತಂಡದೊಂದಿಗೆ ಇಲ್ಲದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ಈ ಸಂದರ್ಶನಗಳು ಸಿಧು ಕಪಿಲ್ ಅವರ ವೃತ್ತಿಜೀವನದ ಕಷ್ಟದ ಸಮಯವನ್ನು ಬಹಿರಂಗಪಡಿಸಿದವು. ‘ಕಪಿಲ್ ಕಠಿಣ ಸಮಯವನ್ನು ಎದುರಿಸುತ್ತಿದ್ದರು. ಅವರಷ್ಟು ಬುದ್ಧಿವಂತರು ಇಲ್ಲಿ ಇಲ್ಲ’ ಎಂದಿದ್ದಾರೆ ಅವರು.
ಇದನ್ನೂ ಓದಿ:ಕಪಿಲ್ ಶರ್ಮಾ ಬಗ್ಗೆ ‘ಶಕ್ತಿಮಾನ್’ ಮಖೇಶ್ಗೆ ಯಾಕಿಷ್ಟು ಕೋಪ? ಎರಡು ಘಟನೆ ಅವರ ಆಲೋಚನೆ ಬದಲಿಸಿತು
2019ರಲ್ಲಿ ಸಿಧು ಪುಲ್ವಾಮಾ ದಾಳಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ಗಳಿಂದಾಗಿ ಕಾರ್ಯಕ್ರಮವನ್ನು ತೊರೆಯಬೇಕಾಯಿತು. ‘ಇದೊಂದು ಹೇಡಿತನ ಮತ್ತು ಹೇಯ ಕೃತ್ಯವಾಗಿದ್ದು, ನಾನು ಇದನ್ನು ಬಲವಾಗಿ ಖಂಡಿಸುತ್ತೇನೆ. ಹಿಂಸೆಯನ್ನು ಯಾವಾಗಲೂ ಖಂಡಿಸಲಾಗುತ್ತದೆ ಮತ್ತು ಅದನ್ನು ಮಾಡಿದವರಿಗೆ ಶಿಕ್ಷೆಯಾಗಬೇಕು. ಆದರೆ ಬೆರಳೆಣಿಕೆಯ ಜನರಿಗಾಗಿ ನೀವು ಇಡೀ ದೇಶವನ್ನು ದೂಷಿಸಬಹುದೇ? ನೀವು ಒಬ್ಬ ವ್ಯಕ್ತಿಯನ್ನು ದೂಷಿಸಬಹುದೇ?’ ಎಂದು ನವಜೋತ್ ಸಿಂಗ್ ಸಿಧು ಹೇಳಿಕೆ ನೀಡಿದ್ದರು. ಅವರು ಪಾಕಿಸ್ತಾನವನ್ನು ಬೆಂಬಲಿಸಿದರು ಎಂದು ಅನೇಕರು ಅಭಿಪ್ರಾಯಪಟ್ಟರು.
ಆ ಸಮಯದಲ್ಲಿ ‘ದಿ ಕಪಿಲ್ ಶರ್ಮಾ ಶೋ’ ಅನ್ನು ನಿಷೇಧಿಸಬೇಕೆಂದು ಅನೇಕರು ಒತ್ತಾಯಿಸಿದರು. ‘ಬಾಯ್‌ಕಾಟ್ ಸಿದ್ದು’ ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಈ ವಿವಾದದ ನಂತರ, ಕಪಿಲ್ ಶರ್ಮಾ ಅವರ ಶೋನಲ್ಲಿ ಸಿಧು ಬದಲಿಗೆ ಅರ್ಚನಾ ಪುರನ್ ಸಿಂಗ್ ಬಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ