ಸಂಜು ಉತ್ತರ ಕೇಳಿ ಅನು ಸಿರಿಮನೆಗೆ ನೆನಪಾದ ಆರ್ಯವರ್ಧನ್​; ಸಂದರ್ಶನದ ವೇಳೆ ಬಂತು ಅಚ್ಚರಿಯ ಉತ್ತರ

| Updated By: ರಾಜೇಶ್ ದುಗ್ಗುಮನೆ

Updated on: Oct 18, 2022 | 7:30 AM

ರಾಜ ನಂದಿನಿ ವಿಲಾಸದಲ್ಲಿ ಉಳಿದುಕೊಂಡಿರುವ ಸಂಜುಗೆ ನೆನಪಿನ ಶಕ್ತಿ ಮರಳಿ ತರಲು ಚಿಕಿತ್ಸೆ ನೀಡಲಾಗುತ್ತಿದೆ. ಆತ ಮೊದಲು ಎಲ್ಲಿದ್ದನೋ ಅಲ್ಲಿಯೇ ಉಳಿದುಕೊಂಡರೆ ನೆನಪು ಬೇಗ ಬರುತ್ತದೆ ಎಂಬುದು ವೈದ್ಯರ ಅಭಿಪ್ರಾಯ.

ಸಂಜು ಉತ್ತರ ಕೇಳಿ ಅನು ಸಿರಿಮನೆಗೆ ನೆನಪಾದ ಆರ್ಯವರ್ಧನ್​; ಸಂದರ್ಶನದ ವೇಳೆ ಬಂತು ಅಚ್ಚರಿಯ ಉತ್ತರ
ಆರ್ಯವರ್ಧನ್-ಅನು
Follow us on

‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಯಲ್ಲಿ ಆರ್ಯವರ್ಧನ್ ಮೃತಪಟ್ಟಿದ್ದಾನೆ ಎಂದು ಎಲ್ಲರೂ ಊಹಿಸಿದ್ದರು. ಆದರೆ, ಅದು ಸುಳ್ಳಾಗಿದೆ. ಆತ ಬದುಕಿದ್ದಾನೆ. ಹಳೆಯ ನೆನಪು ಯಾವುದೂ ಉಳಿದುಕೊಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಆತನ ಮುಖಚರ್ಯೆ ಬದಲಾಗಿದೆ. ರಾಜ ನಂದಿನಿ ವಿಲಾಸಕ್ಕೆ ಹೊಸ ಆರ್ಯವರ್ಧನ್​ನ ಎಂಟ್ರಿ ಆಗಿದೆ. ಸಂಜು ಆಗಿ ಆತ ಈ ಮನೆಗೆ ಬಂದಿದ್ದಾನೆ. ಆದರೆ, ಆತನನ್ನು ಯಾರಿಗೂ ಗುರುತಿಸೋಕೆ ಆಗುತ್ತಿಲ್ಲ. ಆದರೆ, ಆತ ನಡೆದುಕೊಳ್ಳುತ್ತಿರುವ ರೀತಿ ಸಾಕಷ್ಟು ಅನುಮಾನ ಹುಟ್ಟುಹಾಕುತ್ತಿದೆ. ಸಂಜು ನಡೆದುಕೊಳ್ಳುತ್ತಿರುವ ರೀತಿ ನೋಡಿದ ಅನೇಕರಿಗೆ ಆರ್ಯವರ್ಧನ್​ನ ನೆನಪಾಗುತ್ತಿದೆ. ಸ್ವತಃ ಅನು ಸಿರಿಮನೆಗೂ ಇದೇ ಅನುಭವ ಆಗಿದೆ.

ರಾಜ ನಂದಿನಿ ವಿಲಾಸದಲ್ಲಿ ಉಳಿದುಕೊಂಡಿರುವ ಸಂಜುಗೆ ನೆನಪಿನ ಶಕ್ತಿ ಮರಳಿ ತರಲು ಚಿಕಿತ್ಸೆ ನೀಡಲಾಗುತ್ತಿದೆ. ಆತ ಮೊದಲು ಎಲ್ಲಿದ್ದನೋ ಅಲ್ಲಿಯೇ ಉಳಿದುಕೊಂಡರೆ ನೆನಪು ಬೇಗ ಬರುತ್ತದೆ ಎಂಬುದು ವೈದ್ಯರ ಅಭಿಪ್ರಾಯ. ಈ ಕಾರಣಕ್ಕೆ ಆತ ರಾಜ ನಂದಿನಿ ವಿಲಾಸದಲ್ಲೇ ಇದ್ದಾನೆ. ಹೀಗಿರುವಾಗಲೇ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಆತನಿಗೆ ನಿಧಾನವಾಗಿ ಹಳೆಯ ಘಟನೆಗಳು ನೆನಪಿಗೆ ಬರುತ್ತಿವೆ.

ಸಂಜು ಮನೆಯಲ್ಲಿ ಇರೋ ಬದಲು ಕಚೇರಿಗೆ ತೆರಳಲಿ ಅನ್ನೋದು ಶಾರದಾ ದೇವಿ ಅವರ ಉದ್ದೇಶ. ಹೀಗಾಗಿ, ಆತನನ್ನು ಕಚೇರಿಗೆ ಕಳುಹಿಸಲಾಗಿದೆ. ಮೊದಲ ದಿನವೇ ಆತ ರಿಸೆಪ್ಶನ್ ಬುಕ್​ನಲ್ಲಿ ತನ್ನ ಹೆಸರನ್ನು ಆರ್ಯವರ್ಧನ್ ಎಂದು ಬರೆದು ಬಂದಿದ್ದಾನೆ. ಇದು ಆತನಿಗೇ ಅಚ್ಚರಿ ಮೂಡಿಸಿದೆ. ಇನ್ನು, ಈತನ ಸಂದರ್ಶನ ಮಾಡುವಲ್ಲಿ ಅನು ಕೂಡ ಭಾಗಿ ಆಗಿದ್ದಾಳೆ.

‘ಬಿಸ್ನೆಸ್ ಮಾಡೋಕೆ ಮುಖ್ಯವಾಗಿ ಏನು ಬೇಕು’ ಎಂಬ ಪ್ರಶ್ನೆ ಸಂಜುಗೆ ಸಂದರ್ಶನದಲ್ಲಿ ಹರ್ಷ ಕೇಳಿದ್ದ. ಇದೇ ಸಂದರ್ಭದಲ್ಲಿ ಅನುನ ಎಂಟ್ರಿ ಆಗಿದೆ. ವಿಡಿಯೋ ಕಾಲ್ ಮೂಲಕ ಅವಳು ಸಂದರ್ಶನದಲ್ಲಿ ಭಾಗಿ ಆಗಿದ್ದಾಳೆ. ಈ ಪ್ರಶ್ನೆಗೆ ಸಂಜು ಯಾವ ಉತ್ತರ ಹೇಳಬಹುದು ಎಂದು ಎಲ್ಲರೂ ಕಾದಿದ್ದರು. ಅಚ್ಚರಿ ಎಂಬಂತೆ ಆತ ‘ಬಿಸ್ನೆಸ್ ಮಾಡೋಕೆ ನಂಬಿಕೆ ಮುಖ್ಯ’ ಎಂದಿದ್ದಾನೆ. ಈ ಮೊದಲು ಆರ್ಯವರ್ಧನ್ ಕೂಡ ಹೀಗೇ ಹೇಳುತ್ತಿದ್ದ. ಸಂಜುನ ಉತ್ತರ ಕೇಳಿ ಅನು ಸಿರಿಮನೆಗೆ ಶಾಕ್ ಆಗಿದೆ. ಏನು ಹೇಳಬೇಕು ಎಂಬುದೇ ಆಕೆಗೆ ಗೊತ್ತಾಗಿಲ್ಲ.

ಆರ್ಯವರ್ಧನ್​ಗೆ ಬರುತ್ತಿದೆ ಹಳೆಯ ನೆನಪು

ಆರ್ಯವರ್ಧನ್​ಗೆ ನಿಧಾನವಾಗಿ ಹಳೆಯ ನೆನಪು ಬರುತ್ತಿದೆ. ಅಪಘಾತದ ವೇಳೆ ಆತನ ಮೆಮೋರಿ ಸಂಪೂರ್ಣವಾಗಿ ಲಾಸ್ ಆಗಿದೆ. ಆರ್ಯವರ್ಧನ್​ ಕೊಲ್ಲೋಕೆ ಯಾರೋ ಪ್ರಯತ್ನಪಟ್ಟಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಈ ಕಾರಣಕ್ಕೆ ಸಂಜುನೇ ಆರ್ಯವರ್ಧನ್, ಆತನ ಮುಖ ಬದಲಾಗಿದೆ ಎಂಬ ವಿಚಾರವನ್ನು ರಿವೀಲ್ ಮಾಡಿಲ್ಲ. ಸೂಕ್ತ ಸಂದರ್ಭ ನೋಡಿ ಅದನ್ನು ರಿವೀಲ್ ಮಾಡುವ ಉದ್ದೇಶ ಪೊಲೀಸರದ್ದು. ಒಂದೊಮ್ಮೆ ಈ ವಿಚಾರ ಗೊತ್ತಾದರೆ ಅನು ಹೇಗೆ ರಿಯಾಕ್ಟ್ ಮಾಡಬಹುದು ಎಂಬುದು ಅನೇಕರ ಕುತೂಹಲ.

ಮಾನ್ಸಿಗೆ ಹೆಚ್ಚುತ್ತಿದೆ ಅನುಮಾನ

ಹರ್ಷನ ಹೆಂಡತಿ ಮಾನ್ಸಿಗೆ ಸಂಜು ಬಗ್ಗೆ ಅನುಮಾನ ಹೆಚ್ಚುತ್ತಲೇ ಇದೆ. ಆತ ಯಾರು, ಇಲ್ಲಿಗೆ ಬಂದಿದ್ದು ಯಾಕೆ ಎಂಬಿತ್ಯಾದಿ ಪ್ರಶ್ನೆಗಳು ಆಕೆಗೆ ಮೂಡಿವೆ. ‘ಮುಂದೊಂದು ದಿನ ಈತ ತಾನೇ ಆರ್ಯವರ್ಧನ್ ಎಂದು ಹೇಳಿಕೊಳ್ಳುತ್ತಾನೆ’ ಎಂದು ಕೂಡ ಮಾನ್ಸಿ ಆರೋಪ ಮಾಡಿದ್ದಾಳೆ. ಮುಂದೊಂದು ದಿನ ಸಂಜು ಬಂದು ನಾನೇ ಆರ್ಯವರ್ಧನ್ ಎಂದು ಹೇಳಿದರೆ ಮಾನ್ಸಿ ಊಹೆ ಖಚಿತವಾಗಲಿದೆ.

ಶ್ರೀಲಕ್ಷ್ಮಿ ಎಚ್.