ಒಂದಲ್ಲಾ ಒಂದು ದಿನ ನಾನು ದೊಡ್ಡ ಸೆಲೆಬ್ರಿಟಿ ಆಗ್ತೀನಿ ಎಂದಿದ್ದ ಗಿಲ್ಲಿ ನಟ

ಗಿಲ್ಲಿ ನಟ ಅವರು ತುಂಬಾನೇ ಕಷ್ಟದಲ್ಲಿ ಜೀವನ ಸಾಗಿಸಿದವರು. ಈಗ ಅವರು ಬೇಡಿಕೆಯ ಕಲಾವಿದ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅವರು ಇಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಶೋನಲ್ಲಿ ಅವರು ಮಾತುಗಳು ಮೆಚ್ಚುಗೆ ಪಡೆಯುತ್ತಿವೆ.

ಒಂದಲ್ಲಾ ಒಂದು ದಿನ ನಾನು ದೊಡ್ಡ ಸೆಲೆಬ್ರಿಟಿ ಆಗ್ತೀನಿ ಎಂದಿದ್ದ ಗಿಲ್ಲಿ ನಟ
ಗಿಲ್ಲಿ
Edited By:

Updated on: Dec 17, 2025 | 7:49 AM

ಗಿಲ್ಲಿ ನಟನ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ಇಂದು ಬಿಗ್ ಬಾಸ್​ಗೆ ತೆರಳಿ ಸ್ಟಾರ್ ಪರ್ಫಾರ್ಮರ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹಳೆಯ ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಮಾಡಲಾಗುತ್ತಾ ಇದೆ. ಇದರಲ್ಲಿ ಒಂದು ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಈ ವಿಡಿಯೋದಲ್ಲಿ ಗಿಲ್ಲಿ ಅವರು ನಾನು ದೊಡ್ಡ ಸೆಲೆಬ್ರಿಟಿ ಆಗ್ತೀನಿ ಎಂದಿದ್ದರು. ಅದು ಈಗ ನಿಜವಾಗಿದೆ.

ಗಿಲ್ಲಿ ನಟ ಅವರು ತುಂಬಾನೇ ಕಷ್ಟದಲ್ಲಿ ಜೀವನ ಸಾಗಿಸಿದವರು. ಈಗ ಅವರು ಬೇಡಿಕೆಯ ಕಲಾವಿದ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ಅವರು ಇಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಶೋನಲ್ಲಿ ಅವರು ಮಾತುಗಳು ಮೆಚ್ಚುಗೆ ಪಡೆಯುತ್ತಿವೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?

ಗಿಲ್ಲಿ ನಟ ಅವರ ಹಳೆಯ ವಿಡಿಯೋ ಭಿನ್ನವಾಗಿದೆ. ಇದು ಶಾರ್ಟ್​ಮೂವಿ ವಿಡಿಯೋ ರೀತಿ ಕಾಣಿಸುತ್ತದೆ. ಸಹ ಕಲಾವಿದ, ‘ಯಾಕೋ ಗಿಲ್ಲಿ ಇಡೀ ದಿನ ಮೊಬೈಲ್​ನಲ್ಲೇ ಇರ್ತೀಯಾ. ಯೂಟ್ಯೂಬ್ ಮಾಡಿಕೋ. ಅದರ ಮೂಲಕ ಜನಪ್ರಿಯತೆ ಗಳಿಸಬಹುದು’ ಎನ್ನುತ್ತಾರೆ. ಆಗ ಗಿಲ್ಲಿ ನಟ, ‘ನಾನು ಒಂದಲ್ಲಾ ಒಂದು ದಿನ ಸೆಲೆಬ್ರಿಟಿ ಆಗಿಯೇ ಆಗುತ್ತೇನೆ’ ಎನ್ನುತ್ತಾರೆ. ಈ ರೀತಿಯಲ್ಲಿ ವಿಡಿಯೋ ಮೂಡಿ ಬಂದಿದೆ.

ಈಗ ಗಿಲ್ಲಿ ನಟ ಅವರು ನಿಜಕ್ಕೂ ಸೆಲೆಬ್ರಿಟಿ ಆಗಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರ ದೃಶ್ಯ ಬಂದಾಗ ಎಲ್ಲರೂ ಸಿಳ್ಳೆ ಹೊಡೆಯುತ್ತಾರೆ. ಚಪ್ಪಾಳೆ ತಟ್ಟುತ್ತಾರೆ. ಅವರ ಹೆಸರಲ್ಲಿ ಸಾಕಷ್ಟು ಫ್ಯಾನ್​ ಪೇಜ್​ಗಳು ಸೃಷ್ಟಿ ಆಗಿವೆ. ಇದಕ್ಕಿಂತ ಖುಷಿಯ ವಿಷಯ ಮತ್ತೇನಿದೆ? ಗಿಲ್ಲಿ ಅವರು ಬಿಗ್ ಬಾಸ್ ಗೆಲ್ಲುತ್ತಾರೆ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ಪ್ರಶಾಂತ್ ಕಿಣಿ ಹೆಸರಿನ ಜ್ಯೋತಿಷಿ ಒಬ್ಬರು ಗಿಲ್ಲಿ ಬಿಗ್ ಬಾಸ್ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.