‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ

Vasudeva Kutumba serial: ಮಾಜಿ ಬಿಗ್​​ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡಹಾಕಿ ಪೇಮೆಂಟ್ ಕೊಡುವಂತೆ ಧಾರಾವಾಹಿಯ ನಟಿಯರಾದ ಹಂಸ ಮತ್ತು ಚೈತ್ರಾ ಕೇಳಿದ್ದು, ನಿರ್ಮಾಪಕರು ಸ್ಥಳದಿಂದ ಪರಾರಿ ಆಗಿದ್ದಾರೆ.

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ
Vasudeva Kutumba

Updated on: May 01, 2026 | 1:49 PM

‘ವಸುದೇವ ಕುಟುಂಬ’ ಧಾರಾವಾಹಿಯ (Serial) ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಜಿ ಬಿಗ್​​ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು ರಸ್ತೆಯಲ್ಲಿ ಅಡ್ಡಹಾಕಿ ಪೇಮೆಂಟ್ ಕೊಡುವಂತೆ ಧಾರಾವಾಹಿಯ ನಟಿಯರಾದ ಹಂಸ ಮತ್ತು ಚೈತ್ರಾ ಕೇಳಿದ್ದು, ನಿರ್ಮಾಪಕರು ಸ್ಥಳದಿಂದ ಪರಾರಿ ಆಗಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ ಪೇಮೆಂಟ್ ಬಂದಿಲ್ಲದ ಕಾರಣ ಬೇಸತ್ತು ಬಿಗ್ ಬಾಸ್ ಸೀಸನ್ 11 ಸ್ಪರ್ದಿ ನಟಿ ಹಂಸ ಹಾಗೂ ನಟಿ ಚೈತ್ರ ಜೊತೆ ಯೂನಿಟ್ ಸದಸ್ಯರು ನಿರ್ಮಾಪಕರನ್ನು ಮುಖಾ-ಮುಖಿ ಭೇಟಿಯಾಗಿ ಪೇಮೆಂಟ್​​ಗೆ ಒತ್ತಾಯಿಸಿದ್ದಾರೆ. ಕೋರಮಂಗಲ ಅನಿಲ್ ಎಂಬುವರು, ಕೋರಮಂಗಲ ಟಾಕೀಸ್ ಹೆಸರಲ್ಲಿ ‘ವಸುದೇವ ಕುಟುಂಬ’ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದು, ನಾಗರಬಾವಿಯಲ್ಲಿ ಅವರು ನಡೆಸುತ್ತಿರುವ ‘ತತ್ಸವಿ ಹೋಟೆಲ್’ ಬಳಿ ಇಂದು ಮಧ್ಯಾಹ್ನ ಆಗಮಿಸಿದ ಹಂಸ, ಚೈತ್ರಾ ಹಾಗೂ ಯೂನಿಟ್​​ನ ಇತರೆ ಕೆಲವು ಮಂದಿ ನಿರ್ಮಾಪಕರನ್ನು ಸಂಭಾವನೆಗಾಗಿ ಒತ್ತಾಯಿಸಿದ್ದಾರೆ. ಆದರೆ ನಿರ್ಮಾಪಕ ಅನಿಲ್ ಮತ್ತು ಅವರ ಪತ್ನಿ ಕೂಡಲೇ ಸ್ಥಳದಿಂದ ಪಲಾಯನ ಮಾಡಿದ್ದಾರೆ.

ಇದನ್ನೂ ಓದಿ:‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ?

ನಟಿ ಹಂಸ ಅವರಿಗೆ ಮೂರು ಲಕ್ಷ ರೂಪಾಯಿ, ಚೈತ್ರಾ ಅವರಿಗೂ ಸಹ ದೊಡ್ಡ ಮೊತ್ತದ ಹಣವನ್ನು ನಿರ್ಮಾಪಕರು ಬಾಕಿ ಉಳಿಸಿಕೊಂಡಿದ್ದಾರಂತೆ. ಚೈತ್ರಾ ಅವರು ಈ ಹಿಂದೆ ಕಣ್ಣೀರು ಹಾಕಿ ನಿರ್ಮಾಪಕರ ಬಳಿ ಹಣ ಕೇಳಿದ್ದರೂ ಸಹ ಅವರು ಕೊಟ್ಟಿಲ್ಲ, ಇದೀಗ ಹಂಸ ಅವರು ಹೋಟೆಲ್ ಬಳಿ ಬಂದು ನೇರಾ-ನೇರ ನಿರ್ಮಾಪಕರನ್ನು ಹಣ ಕೇಳಿದ್ದಾರೆ. ಆದರೆ ಹಂಸ ಅವರನ್ನು ‘ರೌಡಿಸಂ ಮಾಡುತ್ತಿದ್ದೀರ’ ಎಂದು ಕೇಳಿದ ನಿರ್ಮಾಪಕ ಮತ್ತು ಅವರ ಪತ್ನಿ, ಹಂಸ ಅವರು ಧ್ವನಿ ಎತ್ತರಿಸುತ್ತಿದ್ದಂತೆ ಅಲ್ಲಿಂದ ಪರಾರಿ ಆಗಿದ್ದಾರೆ.

ಬಳಿಕ ಮಾಧ್ಯಮಗಳ ಬಳಿ ಮಾತನಾಡಿರುವ ಹಂಸ, ಅವರು ಇದೊಂದು ಕಚಡಾ ನಿರ್ಮಾಣ ಸಂಸ್ಥೆ, ಯಾರಿಗೂ ಸಹ ಸರಿಯಾಗಿ ಪೇಮೆಂಟ್ ಕೊಟ್ಟಿಲ್ಲ. ಇವರಿಂದ ಬೇರೆ ಧಾರಾವಾಹಿ ಅವಕಾಶವನ್ನೂ ಸಹ ಕಳೆದುಕೊಂಡಿದ್ದೇವೆ. ಹಣ ಕೇಳಿದ ನಟ-ನಟಿಯರನ್ನು ಬದಲಾವಣೆ ಮಾಡಿಬಿಟ್ಟಿದ್ದಾರೆ. ಯೂನಿಟ್ ಅವರನ್ನು ಕ್ಷುಲ್ಲಕವಾಗಿ ನೋಡಿಕೊಂಡಿದ್ದಾರೆ. ಹಳಸಿದ ಅನ್ನ ಹಾಕಿದ್ದಾರೆ. ಈ ನಿರ್ಮಾಪಕರ ವಿರುದ್ಧ ಪೊಲೀಸ್ ದೂರು ದಾಖಲಿಸುವುದಾಗಿಯೂ ಹಂಸ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Fri, 1 May 26

Follow Us