
ನಟ ರಜತ್ ಕಿಶನ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಆಗಿದ್ದರು. ಅಲ್ಲದೇ, ಸೀಸನ್ 12ರಲ್ಲಿ ಕೂಡ ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ (Bigg Boss Kannada) ಮನೆಗೆ ಬಂದಿದ್ದಾರೆ. ಈ ಶೋನಿಂದ ಅವರಿಗೆ ತುಂಬಾ ಪ್ರಸಿದ್ಧಿ ಸಿಕ್ಕಿದೆ. ಅದಕ್ಕೆ ಅವರು ಋಣಿ ಆಗಿದ್ದಾರೆ. ಆದ್ದರಿಂದ ಬಿಗ್ ಬಾಸ್ ಲೋಗೋವನ್ನು ಅವರು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅದು ಕೂಡ ಪರ್ಮನೆಂಟ್ ಟ್ಯಾಟೂ! ಅವರ ಈ ನಿರ್ಧಾರದಿಂದ ಎಲ್ಲರಿಗೂ ಅಚ್ಚರಿ ಆಗಿದೆ. ರಜತ್ (Rajath Kishan) ಅವರು ಖುಷಿಯಿಂದಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಈಗ ವಿಲನ್ ಥೀಮ್ ಪರಿಚಯಿಸಲಾಗಿದೆ. ರಜತ್ ಮತ್ತು ಅಶ್ವಿನಿ ಗೌಡ ಅವರಿಗೆ ವಿಲನ್ ಒಂದು ಚಾಲೆಂಜ್ ನೀಡಿದರು. ಇಬ್ಬರಲ್ಲಿ ಒಬ್ಬರು ಬಿಗ್ ಬಾಸ್ ಲೋಗೋವನ್ನು ಶಾಶ್ವತವಾಗಿ ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ಸೂಚಿಸಲಾಯಿತು. ಅದಕ್ಕೆ ರಜತ್ ಅವರು ಮೊದಲು ಬಜರ್ ಒತ್ತುವ ಮೂಲಕ ತಮ್ಮ ಒಪ್ಪಿಗೆ ಸೂಚಿಸಿದರು.
ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅಶ್ವಿನಿ ಗೌಡ, ರಜತ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆ ಕಾರಣಕ್ಕಾಗಿ ರಜತ್ ಅವರು ಟ್ಯಾಟೂ ಹಾಕಿಸಿಕೊಳ್ಳಲು ಮುಂದೆ ಬಂದರು. ಅಲ್ಲದೇ ಅವರಿಗೆ ಬಿಗ್ ಬಾಸ್ ಶೋ ಸ್ಮರಣೀಯವಾಗಿದೆ. ಅದನ್ನು ಈ ಟ್ಯಾಟೂ ಮೂಲಕ ಶಾಶ್ವತವಾಗಿ ಇರಿಸಲು ಅವರು ತೀರ್ಮಾನಿಸಿದರು. ಭುಜದ ಮೇಲೆ ರಜತ್ ಅವರು ಬಿಗ್ ಬಾಸ್ ಲೋಗೋ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
‘ನಾನು ತರಬೇತಿ ಪಡೆದ ಟ್ಯಾಟೂ ಕಲಾವಿದರಿಂದ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದೇನೆ. ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ’ ಎಂದು ಬರೆದುಕೊಟ್ಟು ರಜತ್ ಅವರು ಸಹಿ ಮಾಡಿದ್ದಾರೆ. ಎಷ್ಟೋ ಕಲಾವಿದರಿಗೆ ಬಿಗ್ ಬಾಸ್ ಶೋನಿಂದ ಅನುಕೂಲ ಆಗಿದೆ. ಅಂಥವರಲ್ಲಿ ರಜತ್ ಕೂಡ ಒಬ್ಬರು. ಆ ಕಾರಣದಿಂದಲೂ ಅವರು ಎರಡನೇ ಯೋಚನೆ ಇಲ್ಲದೇ ಟ್ಯಾಟೂ ಹಾಕಿಸಿಕೊಂಡರು.
ಇದನ್ನೂ ಓದಿ: ‘ಈ ಬಾರಿ ಗಿಲ್ಲಿಯೇ ಬಿಗ್ ಬಾಸ್ ವಿನ್ನರ್’: ಅಭಿಮಾನಿಗಳಿಂದ ಕಮೆಂಟ್ಸ್ ಸುರಿಮಳೆ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಈಗ 73 ದಿನಗಳು ಕಳೆದಿವೆ. ಗಿಲ್ಲಿ ನಟ ಅವರು ಸಖತ್ ಮಿಂಚುತ್ತಿದ್ದಾರೆ. ಈ ಬಾರಿ ಅವರೇ ಗೆಲ್ಲುವುದು ಎಂದು ವೀಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಅಶ್ವಿನಿ ಗೌಡ ಕೂಡ ಟಫ್ ಸ್ಪರ್ಧಿ ಆಗಿದ್ದಾರೆ. ಟಾಪ್ 5 ಯಾರಾಗುತ್ತಾರೆ ಎಂಬ ಕೌತುಕ ವೀಕ್ಷಕರಲ್ಲಿ ಇದೆ. ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.