ಎಲ್ಲರ ಎದುರು ಬಯಲಾಯ್ತು ಗಿಲ್ಲಿ ಅಸಲಿ ಬಣ್ಣ: ನಿಜವಾಯ್ತು ಕಾವ್ಯಾ ಅನುಮಾನ
ಇತ್ತೀಚಿನ ಸಂಚಿಕೆಯಲ್ಲಿ ಕಾವ್ಯಾ ಅವರು ಗಿಲ್ಲಿಯ ಚುಚ್ಚು ಮಾತುಗಳನ್ನು ಕೇಳಿ ನೋವಿನಿಂದ ಕಣ್ಣೀರು ಹಾಕಿದ್ದರು. ಆದರೆ ಗಿಲ್ಲಿ ಅವರು ಆ ರೀತಿ ನಡೆದುಕೊಂಡಿದ್ದಕ್ಕೆ ಸೀಕ್ರೆಟ್ ಟಾಸ್ಕ್ ಕಾರಣವೇ ಹೊರತು ಅದು ಅವರ ನಿಜ ವ್ಯಕ್ತಿತ್ವ ಅಲ್ಲ. ಸೀಕ್ರೆಟ್ ಟಾಸ್ಕ್ ರಹಸ್ಯವನ್ನು ಎಲ್ಲರ ಎದುರಲ್ಲೂ ಈಗ ಬಯಲು ಮಾಡಲಾಗಿದೆ. ಹೊಸ ಎಪಿಸೋಡ್ ಬಗ್ಗೆ ಇಲ್ಲಿದೆ ವಿವರ..

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟ ಅವರು ಕಾವ್ಯ ಶೈವ ಜೊತೆ ಸ್ನೇಹ ಬೆಳೆಸಿದ್ದಾರೆ. ಮೊದಲ ದಿನದಿಂದಲೂ ಅವರಿಬ್ಬರು ಕ್ಲೋಸ್ ಆಗಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅವರ ನಡುವೆ ಒಂದು ಬಿರುಕು ಮೂಡಿತ್ತು. ಕಾವ್ಯಾ ಅವರಿಗೆ ನೋವಾಗುವ ರೀತಿಯಲ್ಲಿ ಗಿಲ್ಲಿ (Gilli Nata) ನಡೆದುಕೊಂಡಿದ್ದರು. ಸತತವಾಗಿ ಚುಚ್ಚು ಮಾತುಗಳನ್ನು ಆಡಿದ್ದರು. ಗಿಲ್ಲಿಯ ಆ ವರ್ತನೆ ಕಂಡು ಕಾವ್ಯಾ ಅವರಿಗೆ ಅನುಮಾನ ಮೂಡಿತ್ತು. ಇದು ಸೀಕ್ರೆಟ್ ಟಾಸ್ಕ್ ಆಗಿರಬಹುದು ಎಂದು ಕಾವ್ಯ (Kavya Shaiva) ಅನುಮಾನಪಟ್ಟರು. ನಿಜವಾಗಿಯೂ ಗಿಲ್ಲಿ ಈ ರೀತಿ ಮಾತನಾಡುತ್ತಾರಾ ಎಂದು ಹಲವರಿಗೆ ಸಂಶಯ ಕಾಡಿತ್ತು. ಡಿಸೆಂಬರ್ 12ರ ಸಂಚಿಕೆಯಲ್ಲಿ ಆ ಅನುಮಾನ ಪರಿಹಾರ ಆಗಿದೆ.
ಕಾವ್ಯಾ ಕಣ್ಣೀರು ಹಾಕುವಂತೆ ಮಾಡಬೇಕು ಎಂದು ಬಿಗ್ ಬಾಸ್ ಆಟದಲ್ಲಿ ಗಿಲ್ಲಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಆ ಕಾರಣದಿಂದಲೇ ಗಿಲ್ಲಿ ಅವರು ಚುಚ್ಚು ಮಾತುಗಳಿಂದ ಕಾವ್ಯ ಅವರನ್ನು ಹೀಯಾಳಿಸಿದ್ದರು. ಆ ಮಾತುಗಳನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಕಾವ್ಯಾ ಕಣ್ಣೀರು ಹಾಕಿದ್ದರು. ಸ್ಪಂದನಾ ಎದುರು ಕಾವ್ಯ ನೋವು ತೋಡಿಕೊಂಡು ಅತ್ತಿದ್ದರು.
ಗಿಲ್ಲಿ ನಟ ನಿಜವಾಗಿಯೂ ಆ ರೀತಿ ಮಾತನಾಡಿದ್ದಾರೋ ಅಥವಾ ಸೀಕ್ರೆಟ್ ಟಾಸ್ಕ್ ನೀಡಿದ ಕಾರಣದಿಂದ ಆ ರೀತಿ ವರ್ತಿಸಿದ್ದರೋ ಎಂಬುದು ಕಾವ್ಯಾ ಅವರ ಅನುಮಾನ ಆಗಿತ್ತು. ಆದರೆ ಇದು ಸೀಕ್ರೆಟ್ ಟಾಸ್ಕ್ ಎಂಬುದನ್ನು ಎಲ್ಲರ ಎದುರಿನಲ್ಲಿ ಬಹಿರಂಗಪಡಿಸಲಾಗಿದೆ. ಅಂದರೆ ಕಾವ್ಯಾರನ್ನು ಆ ರೀತಿ ಹೀಯಾಳಿಸುವಂತೆ ಮಾತನಾಡಿದ್ದು ಗಿಲ್ಲಿಯ ನಿಜವಾದ ವ್ಯಕ್ತಿತ್ವ ಅಲ್ಲ ಎಂಬುದು ಎಲ್ಲರ ಎದುರು ಸಾಬೀತಾಯಿತು. ಕಾವ್ಯಾಗೆ ಅನುಮಾನ ಪರಿಹಾರ ಆಯಿತು.
ಗಿಲ್ಲಿ ನಟ ಅವರು ಈ ವಾರ ಚೆನ್ನಾಗಿ ಆಟ ಆಡಿದ್ದಾರೆ ಎಂಬುದು ವೀಕ್ಷಕರು ಅಭಿಪ್ರಾಯ. ಕಿಚ್ಚನ ಚಪ್ಪಾಳೆಯ ಫೋಟೋಗಳನ್ನು ಕದಿಯಬೇಕು ಎಂದು ಕೂಡ ಗಿಲ್ಲಿಗೆ ಸೀಕ್ರೆಟ್ ಟಾಸ್ಕ್ ನೀಡಲಾಗಿತ್ತು. ಅದನ್ನು ಕೂಡ ಗಿಲ್ಲಿ ಅವರು ಯಶಸ್ವಿಯಾಗಿ ನಿಭಾಯಿಸಿದರು. ಈ ಎಲ್ಲ ಕಾರಣಗಳನ್ನು ಇಟ್ಟುಕೊಂಡು ಗಿಲ್ಲಿ ಅವರಿಗೆ ಈ ವಾರದ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ವೀಕ್ಷಕರು ಅಭಿಪ್ರಾಯ ತಿಳಿಸುತ್ತಿದ್ದಾರೆ.
ಇದನ್ನೂ ಓದಿ: ಈ ವಾರದ ಕಿಚ್ಚನ ಚಪ್ಪಾಳೆ ಗಿಲ್ಲಿಗೆ ಸಿಗಬೇಕು: ಅಭಿಮಾನಿಗಳ ಒತ್ತಾಯ
ಬಿಗ್ ಬಾಸ್ ಮನೆಯಲ್ಲಿ ಈಗ 75 ದಿನಗಳು ಕಳೆದಿವೆ. ಇಲ್ಲಿಯವರೆಗೂ ಕಾವ್ಯ ಶೈವ ಮತ್ತು ಗಿಲ್ಲಿ ನಟ ಅವರು ದೊಡ್ಡ ಮಟ್ಟದಲ್ಲಿ ಕಿರಿಕ್ ಮಾಡಿಕೊಂಡಿಲ್ಲ. ಅವರಿಬ್ಬರ ಸ್ನೇಹ ಗಟ್ಟಿಯಾಗಿಯೇ ಇದೆ. ಇನ್ನು ದಿನ ಕಳೆದಂತೆ ಫಿನಾಲೆ ಹತ್ತಿರ ಆಗುತ್ತದೆ. ಪೈಪೋಟಿ ಜಾಸ್ತಿ ಆಗುತ್ತದೆ. ಆಗಲೂ ಕಾವ್ಯ ಹಾಗೂ ಗಿಲ್ಲಿ ನಟ ಇದೇ ಸ್ನೇಹ ಮುಂದುವರಿಸುತ್ತಾರಾ ಅಥವಾ ಎದುರುಬದರಾಗಿ ಹಣಾಹಣಿ ನಡೆಸುತ್ತಾರಾ ಎಂಬುದು ತಿಳಿಯುವ ಕೌತುಕ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




