AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್​ಕುಮಾರ್ ಹೀಗೆ ಹೇಳಿದ್ರು

ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟರ ಜನಪ್ರಿಯತೆ ಹೆಚ್ಚಿದೆ. ಶಿವಣ್ಣನ ಮೆಚ್ಚುಗೆ ಹಾಗೂ ಸಿನಿಮಾ ಆಫರ್ ಪಡೆದ ಗಿಲ್ಲಿ, 'ಡೆವಿಲ್' ಚಿತ್ರದಲ್ಲಿ ಗಮನ ಸೆಳೆದಿದ್ದಾರೆ. ರಿಯಾಲಿಟಿ ಶೋಗಳಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಇವರಿಗೆ ಈಗ ಹೆಚ್ಚಿನ ಸಿನಿಮಾ ಆಫರ್‌ಗಳು ಬರುತ್ತಿವೆ. ಗಿಲ್ಲಿಯ ವಿಶಿಷ್ಟ ಕಾಮಿಡಿ ಟೈಮಿಂಗ್ ಜನರನ್ನು ಸೆಳೆದಿದೆ, ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡುತ್ತಿದೆ.

ಗಿಲ್ಲಿ ಜೊತೆ ಒಂದು ಸಿನಿಮಾ ಮಾಡ್ತೀನಿ; ಶಿವರಾಜ್​ಕುಮಾರ್ ಹೀಗೆ ಹೇಳಿದ್ರು
ಗಿಲ್ಲಿ ಶಿವಣ್ಣ
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Dec 13, 2025 | 8:29 AM

Share

ಬಿಗ್ ಬಾಸ್ ಮನೆಯಲ್ಲಿರುವ ಗಿಲ್ಲಿ ನಟ ಅವರ ಖ್ಯಾತಿ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ‘ಡೆವಿಲ್’ ಸಿನಿಮಾದಲ್ಲಿ ಅವರು ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು. ಗಿಲ್ಲಿಗೆ ಶಿವರಾಜ್​ಕುಮಾರ್ ಅವರನ್ನು ಕಂಡರೆ ತುಂಬಾನೇ ಅಭಿಮಾನ. ಗಿಲ್ಲಿ ಜೊತೆ ಸಿನಿಮಾ ಮಾಡೋದಾಗಿ ಶಿವರಾಜ್​ಕುಮಾರ್ ಅವರು ಈ ಮೊದಲು ಹೇಳಿದ್ದರು. ಆ ಸಂದರ್ಭದ ವಿಡಿಯೋ ಈಗ ವೈರಲ್ ಮಾಡಲಾಗುತ್ತಿದೆ. ಗಿಲ್ಲಿ ಅಭಿಮಾನಿಗಳು ಇದನ್ನು ವೈರಲ್ ಮಾಡಿದ್ದನ್ನು ಕಾಣಬಹುದು.

ಗಿಲ್ಲಿ ನಟ ಅವರು ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದವರು. ಅವರು ಈ ಮೊದಲು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸರ್​’ನಲ್ಲಿ ನಾನ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ಈ ಶೋಗೆ ಶಿವರಾಜ್​ಕುಮಾರ್ ಅವರು ಜಡ್ಜ್ ಸ್ಥಾನದಲ್ಲಿ ಇದ್ದರು. ಶಿವರಾಜ್​ಕುಮಾರ್ ಅವರಿಗೆ ಗಿಲ್ಲಿಯ ಕಾಮಿಡಿ ಇಷ್ಟ ಆಗಿತ್ತು. ಈ ವೇಳೆ ಶಿವಣ್ಣ ಅವರು ಹೇಳಿದ ಒಂದು ಮಾತು ಗಮನ ಸೆಳೆದಿತ್ತು

ಶಿವರಾಜ್​ಕುಮಾರ್ ಅವರು ಗಿಲ್ಲಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದರು. ಇದಕ್ಕೆ ಕಾರಣ ಅವರ ನಡೆದುಕೊಳ್ಳುತ್ತಿದ್ದ ರೀತಿ. ಕಾಮಿಡಿ ಟೈಮಿಂಗ್ ನೋಡಿ ಶಿವಣ್ಣ ಕಂಗಾಲಾಗಿದ್ದರು. ಆಗ ಅವರು ಒಂದು ಮಾತನ್ನು ಹೇಳಿದ್ದರು. ‘ನಿಜವಾಗಲೂ ಇವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು. ಗಿಲ್ಲಿ ನೋಡಿದಾಗಲೆಲ್ಲ ತಮಿಳಿನ ಹಾಸ್ಯ ನಟ ಚಂದ್ರಬಾಬುನ ನೆನಪಾಗುತ್ತಾರೆ. ಅವರು ಅದ್ಭುತ ಕಾಮಿಡಿಯನ್. ಇವರನ್ನು ಹಾಕಿಕೊಂಡು ಒಂದು ಸಿನಿಮಾ ಮಾಡುತ್ತೇನೆ’ ಎಂದು ಶಿವಣ್ಣ ಹೇಳಿದ್ದರು.ಆ ಬಳಿಕ ಅಲ್ಲಿಗೆ ಆಗಮಿಸಿದ್ದ ದಿನಕರ್ ತುಗುದೀಪ್ ಕೂಡ ಗಿಲ್ಲಿಯನ್ನು ಕಂಡು ಇಷ್ಟಪಟ್ಟಿದ್ದರು. ಅವರ ಡ್ಯಾನ್ಸ್ ಅಲ್ಲ ಬದಲಿಗೆ, ಡ್ಯಾನ್ಸ್ ಬಳಿಕ ಅವರು ಮಾತನಾಡುತ್ತಾ ಇದ್ದ ರೀತಿಗೆ.

ಗಿಲ್ಲಿ ನಟ ಅವರಿಗೆ ಈಗಾಗಲೇ ಸಾಕಷ್ಟು ಸಿನಿಮಾ ಆಫರ್​ಗಳು ಬರುತ್ತಿವೆ. ಈಗ ಬಿಗ್ ಬಾಸ್ ಅಲ್ಲಿ ಅವರ ಟೈಮಿಂಗ್ ಡೈಲಾಗ್ ಡೆಲಿವರಿ ಎಲ್ಲವೂ ಇಷ್ಟ ಆಗಿದೆ. ಹೀಗಾಗಿ, ಅವರಿಗೆ ಬರೋ ಆಫರ್ ಮತ್ತಷ್ಟು ಹೆಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಡೆವಿಲ್ ಸಿನಿಮಾದಲ್ಲಿ ಅವರು ನಟಿಸಿದ್ದು, ಕಾಮಿಡಿ ಮೂಲಕ ಗಮನ ಸೆಳೆದಿದ್ದಾರೆ. ಇದು ಕೂಡ ಅವರ ವೃತ್ತಿ ಜೀವನಕ್ಕೆ ಸಹಕಾರಿ ಆಗಬಹುದು.

ಇದನ್ನೂ ಓದಿ: ಎರಡನೇ ದಿನವೂ ಕೋಟಿಗಳಲ್ಲಿ ಗಳಿಸಿದ ‘ಡೆವಿಲ್’; ಮುಂದುವರಿದ ದರ್ಶನ್ ಅಬ್ಬರ

ಡೆವಿಲ್ ಸಿನಿಮಾ ಡಿಸೆಂಬರ್ 11ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ದರ್ಶನ್ ಹಾಗೂ ಗಿಲ್ಲಿ ಮಧ್ಯೆ ನೇರವಾಗಿ ಯಾವುದೇ ಕಾಂಬಿನೇಷನ್ ಇಲ್ಲವಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.