ಎರಡನೇ ದಿನವೂ ಕೋಟಿಗಳಲ್ಲಿ ಗಳಿಸಿದ ‘ಡೆವಿಲ್’; ಮುಂದುವರಿದ ದರ್ಶನ್ ಅಬ್ಬರ
ದರ್ಶನ್ ನಟನೆಯ 'ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಅಭಿಮಾನಿಗಳ ಬೆಂಬಲದಿಂದ ಚಿತ್ರ ಮೊದಲ ದಿನ 13.5 ಕೋಟಿ ಗಳಿಸಿತ್ತು. ಎರಡನೇ ದಿನವೂ ಸಿನಿಮಾ ಅಬ್ಬರಿಸಿದೆ. ವಾರದ ದಿನವೂ ಸಿನಿಮಾ ಉತ್ತಮ ಪ್ರದರ್ಶನ ನೀಡಿದೆ. ಇಂದು ಹಾಗೂ ನಾಳೆ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡೋ ನಿರೀಕ್ಷೆ ಇದೆ.

ನಟ ದರ್ಶನ್ ನಟನೆಯ ‘ಡೆವಿಲ್’ ಸಿನಿಮಾ (Devil Movie) ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ ಚಿತ್ರ. ಈ ಸಿನಿಮಾ ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅವರ ಕಟ್ಟಾಭಿಮಾನಿಗಳು ಪದೇ ಪದೇ ಸಿನಿಮಾನ ವೀಕ್ಷಣೆ ಮಾಡುತ್ತಿದ್ದಾರೆ. ಈ ಸಿನಿಮಾ ಮೊದಲ ದಿನ 13.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋದಾಗಿ ತಂಡ ಹೇಳಿಕೊಂಡಿದೆ. ಈಗ ಎರಡನೇ ದಿನದ ಗಳಿಕೆ ಲೆಕ್ಕ ಸಿಕ್ಕಿದೆ. ಎರಡನೇ ದಿನವೂ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡಿದೆ. ಇಂದು ಹಾಗೂ ನಾಳೆ ಸಿನಿಮಾ ಅಬ್ಬರಿಸುವ ನಿರೀಕ್ಷೆ ಇದೆ.
ಡೆವಿಲ್ ಸಿನಿಮಾಗೆ ಮಿಲನ ಪ್ರಕಾಶ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೈಲಿನಲ್ಲಿ ಇರುವುದರಿಂದ ಸಿನಿಮಾನ ಗೆಲ್ಲಿಸೋ ಜವಾಬ್ದಾರಿ ಅವರ ಅಭಿಮಾನಿಗಳ ಮೇಲೆ ಇದೆ. ಹೀಗಾಗಿ, ಅಭಿಮಾನಿಗಳು ಸಿನಿಮಾನ ಪ್ರಚಾರ ಮಾಡಿದ್ದರು. ಈಗ ಚಿತ್ರವನ್ನು ಪದೇ ಪದೇ ನೋಡುವ ಕೆಲಸ ಕೂಡ ಅವರದ್ದೇ. ದರ್ಶನ್ ಅಭಿಮಾನಿಗಳು ‘ಡೆವಿಲ್’ನ ಮತ್ತೆ ಮತ್ತೆ ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಡೆವಿಲ್ ಸಿನಿಮಾ ಎರಡನೇ ದಿನ ಮೂರುವರೆ ಕೋಟಿ ರೂಪಾಯಿ ಗಳಿಸಿದೆ ಎಂದು ಬಾಕ್ಸ್ ಆಫೀಸ್ ಲೆಕ್ಕ ನೀಡುವ sacnilk ವರದಿ ಮಾಡಿದೆ. ಈ ಮೂಲಕ ಚಿತ್ರದ ಒಟ್ಟೂ ಕಲೆಕ್ಷನ್ 17 ಕೋಟಿ ರೂಪಾಯಿ ಆಗಿದೆ. ಎರಡೇ ದಿನಕ್ಕೆ ಚಿತ್ರ ಇಷ್ಟು ಗಳಿಕೆ ಮಾಡಿರೋದು ನಿಜಕ್ಕೂ ದೊಡ್ಡ ವಿಷಯ. ಶುಕ್ರವಾರ ವಾರದ ದಿನ. ಆದಾಗ್ಯೂ ಹೆಚ್ಚಿನ ಜನರು ಸಿನಿಮಾ ವೀಕ್ಷಿಸಿದ್ದಾರೆ.
sacnilk ವರದಿ ಪ್ರಕಾರ ಈ ಚಿತ್ರ ಮೊದಲ ದಿನ ಗಳಿಕೆ ಮಾಡಿದ್ದು 10 ಕೋಟಿ ರೂಪಾಯಿ. ಆದರೆ, ತಂಡದವರು ಘೋಷಿಸಿಕೊಂಡಿದ್ದು 13.5 ಕೋಟಿ ರೂಪಾಯಿ ಎಂದು. ‘ಡೆವಿಲ್’ ಎರಡನೇ ದಿನ 3.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ಹೇಳಿದೆ. ತಂಡದವರು ನೀಡುವ ಲೆಕ್ಕದಲ್ಲಿ ಕೊಂಚ ಬದಲಾವಣೆ ಇರಬಹುದು.
ಇದನ್ನೂ ಓದಿ: ಮೊದಲ ದಿನ ‘ಡೆವಿಲ್’ ಸಿಡಿಲಬ್ಬರದ ಕಲೆಕ್ಷನ್; ದರ್ಶನ್ ಫ್ಯಾನ್ಸ್ ಫುಲ್ ಖುಷ್
‘ಕಾಟೇರ’ ಸಿನಿಮಾ ಈ ಮೊದಲು ರಿಲೀಸ್ ಆಗಿ ಸಂಚಲನ ಮೂಡಿಸಿತ್ತು. ಈ ದಾಖಲೆಯನ್ನು ‘ಡೆವಿಲ್’ ಬಳಿ ಮುರಿಯೋಕೆ ಆಗೋದು ಅನುಮಾನವೇ. ದುಬಾರಿ ಟಿಕೆಟ್ ದರ ಕೂಡ ಸಿನಿಮಾಗೆ ಸಹಕಾರಿ ಆಗಿದೆ. ಗಗನಕ್ಕೇರಿದ ಟಿಕೆಟ್ ದರದ ಮಧ್ಯೆಯೂ ಜನರು ಸಿನಿಮಾ ನೋಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



