AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ದಿನ ‘ಡೆವಿಲ್’ ಸಿಡಿಲಬ್ಬರದ ಕಲೆಕ್ಷನ್; ದರ್ಶನ್ ಫ್ಯಾನ್ಸ್ ಫುಲ್ ಖುಷ್

The Devil First Day Collection: ನಟ ದರ್ಶನ್ ಜೈಲಿನಲ್ಲಿದ್ದರೂ 'ಡೆವಿಲ್' ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾ ಭರ್ಜರಿ ಗಳಿಸಿದೆ. ಪ್ರಚಾರದ ಕೊರತೆ ಇದ್ದರೂ, ಅಭಿಮಾನಿಗಳು ಸಕ್ರಿಯವಾಗಿ ಪ್ರಚಾರ ಮಾಡಿ ಚಿತ್ರವನ್ನು ಯಶಸ್ವಿಗೊಳಿಸಿದ್ದಾರೆ. 'ಕಾಂತಾರ: ಚಾಪ್ಟರ್ 1' ನಂತರ ಇಷ್ಟು ದೊಡ್ಡ ಗಳಿಕೆ ಕಂಡ ಮೊದಲ ಕನ್ನಡ ಚಿತ್ರವಿದು. ಅಧಿಕ ಟಿಕೆಟ್ ದರವೂ ಕಲೆಕ್ಷನ್‌ಗೆ ನೆರವಾಗಿದೆ.

ಮೊದಲ ದಿನ ‘ಡೆವಿಲ್’ ಸಿಡಿಲಬ್ಬರದ ಕಲೆಕ್ಷನ್; ದರ್ಶನ್ ಫ್ಯಾನ್ಸ್ ಫುಲ್ ಖುಷ್
Devil Movie
ರಾಜೇಶ್ ದುಗ್ಗುಮನೆ
|

Updated on:Dec 12, 2025 | 6:58 AM

Share

ನಟ ದರ್ಶನ್ ಅವರು ಜೈಲಿನಲ್ಲಿರುವಾಗಲೇ ‘ಡೆವಿಲ್’ ಸಿನಿಮಾ (Devil Movie) ರಿಲೀಸ್ ಆಗಿದೆ. ಈ ಸಿನಿಮಾ ಮೊದಲ ದಿನ (ಡಿಸೆಂಬರ್ 11) ಎಷ್ಟು ಕೋಟಿ ಕಲೆಕ್ಷನ್ ಮಾಡಬಹುದು ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಬಾಕ್ಸ್ ಆಫೀಸ್ ಕಲೆಕ್ಷನ್ ಲೆಕ್ಕ ನೀಡುವ sacnilk ವರದಿ ಮಾಡಿದೆ. ಸದ್ಯ ಕಲೆಕ್ಷನ್ ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಬಳಿಕ ಕನ್ನಡದ ಚಿತ್ರವೊಂದು ಮೊದಲ ದಿನ ಇಷ್ಟು ದೊಡ್ಡ ಗಳಿಕೆ ಮಾಡಿದ್ದು ಇದೇ ಮೊದಲು.

ಕನ್ನಡ ಸಿನಿಮಾಗಳಿಗೆ ಜನ ಬರುವುದಿಲ್ಲ ಎಂಬ ಆರೋಪ ಮೊದಲಿನಿಂದಲೂ ಇದೆ. ಆದರೆ, ಕೆಲವು ಸ್ಟಾರ್ ಸಿನಿಮಾಗಳು ಬಂದಾಗ ಜನರು ಮುಗಿಬಿದ್ದು ಸಿನಿಮಾ ವೀಕ್ಷಣೆ ಮಾಡುತ್ತಾರೆ. ‘ಡೆವಿಲ್’ ಸಿನಿಮಾ ರಿಲೀಸ್ ಆಗುವ ಸಂದರ್ಭದಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಹೀಗಾಗಿ, ಪ್ರಚಾರದ ಕೊರತೆ ಉಂಟಾಗುವ ಭಯ ಇತ್ತು. ಆದರೆ, ಅವರ ಅಭಿಮಾನಿಗಳು ಎಲ್ಲಕಡೆಗಳಲ್ಲೂ ಸಿನಿಮಾನ ಪ್ರಚಾರ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದರು. ಇದರಲ್ಲಿ ಅವರು ಯಶಸ್ಸು ಕಂಡಿದ್ದಾರೆ.

‘ಡೆವಿಲ್’ ಸಿನಿಮಾ ಮೊದಲ ದಿನ 10 ಕೋಟಿ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎಂದು sacnilk ವರದಿ ಮಾಡಿದೆ. ಇದು ಕರ್ನಾಟಕದ ಕಲೆಕ್ಷನ್ ಮಾತ್ರ. ವಿದೇಶದ ಗಳಿಕೆಯೂ ಸೇರಿದರೆ ಮತ್ತಷ್ಟು ಹೆಚ್ಚಲಿದೆ. ಸಿನಿಮಾ ಗಳಿಕೆ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇದನ್ನೂ ಓದಿ: ಡೆವಿಲ್ ವಿಮರ್ಶೆ: ‘ದಿ ಡೆವಿಲ್’ ರಾಜಕೀಯ ಸಮರದಲ್ಲಿ ದರ್ಶನ್ ವರ್ಸಸ್ ದರ್ಶನ್

ಕನ್ನಡದ ಸಿನಿಮಾ ಒಂದು ಮೊದಲು ದಿನ 10 ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂದರೆ ಅದು ಸಣ್ಣ ವಿಷಯ ಏನು ಅಲ್ಲ. ಇಷ್ಟು ದೊಡ್ಡ ಕಲೆಕ್ಷನ್ ಆಗಲು ಚಿತ್ರದ ಟಿಕೆಟ್ ಬೆಲೆ ಕೂಡ ಕಾರಣ. ಪಿವಿಆರ್, ಐನಾಕ್ಸ್​​ ಸೇರಿದಂತೆ ಬಹುತೇಕ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ದರ ಕನಿಷ್ಠ 500 ರೂಪಾಯಿ ಇಂದ ಆರಂಭ ಆಗಿತ್ತು. ಏಕಪರದೆಯಲ್ಲಿ 400 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿತ್ತು. ಇದರಿಂದ ಹೆಚ್ಚಿನ ಕಲೆಕ್ಷನ್ ಆಗಿದೆ. ಕೆಲವು ಮಲ್ಟಿಪ್ಲೆಕ್ಸ್​​ಗಳಲ್ಲಿ ಜನ ಇಲ್ಲದೆ ಶೋ ಕ್ಯಾನ್ಸಲ್ ಆದ ಬಗ್ಗೆಯೂ ವರದಿ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Fri, 12 December 25