ಸಿನಿಮಾ ಗೆದ್ದಿದ್ದು ನನ್ನಿಂದಲೇ ಅನ್ನೋ ಹೀರೋಗಳು ರಾಜ್​ಕುಮಾರ್ ಹೇಳಿದ ಈ ಮಾತನ್ನು ಕೇಳಿ

| Updated By: ರಾಜೇಶ್ ದುಗ್ಗುಮನೆ

Updated on: Oct 01, 2024 | 7:43 AM

ಉಪೇಂದ್ರ ಅವರು ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ. ‘ನಾನು ಅಣ್ಣಾವ್ರ ಜೊತೆ ತುಂಬಾ ಮಾತನಾಡಿದ್ದೇನೆ. ಒಮ್ಮೆ ಮಾತನಾಡುವಾಗ ಬಂಗಾರದ ಮನುಷ್ಯ ಸಿನಿಮಾ ಏಕೆ ಹಿಟ್ ಆಗಿದೆ ಎಂದು ಕೇಳಿದ್ದೆ’ ಎಂದಿದ್ದಾರೆ ಉಪೇಂದ್ರ.

ಸಿನಿಮಾ ಗೆದ್ದಿದ್ದು ನನ್ನಿಂದಲೇ ಅನ್ನೋ ಹೀರೋಗಳು ರಾಜ್​ಕುಮಾರ್ ಹೇಳಿದ ಈ ಮಾತನ್ನು ಕೇಳಿ
ರಾಜ್​ಕುಮಾರ್
Follow us on

ವರನಟ ಡಾ. ರಾಜ್​ಕುಮಾರ್ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಈಗ ಬರುವ ಅನೇಕ ಹೊಸ ತಲೆಮಾರಿಗೆ ಮಾದರಿ. ರಾಜ್​ಕುಮಾರ್ ಅವರು ತಮ್ಮ ನಿರ್ಮಾಣ ಸಂಸ್ಥೆಯಿಂದ ಅನೇಕರಿಗೆ ಬೆಂಬಲವಾಗಿ ನಿಂತಿದ್ದರು. ಅವರಿಗೆ ಎಷ್ಟೇ ದೊಡ್ಡ ಯಶಸ್ಸು ಸಿಕ್ಕರೂ ತಮ್ಮದಲ್ಲ ಅದು ಎನ್ನುತ್ತಿದ್ದರಂತೆ. ಈ ಬಗ್ಗೆ ಉಪೇಂದ್ರ ಅವರು ಮಾತನಾಡಿದ್ದಾರೆ. ಆ ಮಾತನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಉಪೇಂದ್ರ ಅವರು ಜೀ ಕನ್ನಡದ ರಿಯಾಲಿಟಿ ಶೋ ಒಂದರಲ್ಲಿ ಭಾಗಿ ಆಗಿದ್ದಾರೆ. ಈ ವೇಳೆ ಅವರು ರಾಜ್​ಕುಮಾರ್ ಬಗ್ಗೆ ಮಾತನಾಡಿದ್ದಾರೆ. ‘ನಾನು ಅಣ್ಣಾವ್ರ ಜೊತೆ ತುಂಬಾ ಮಾತನಾಡಿದ್ದೇನೆ. ಒಮ್ಮೆ ಮಾತನಾಡುವಾಗ ಬಂಗಾರದ ಮನುಷ್ಯ ಸಿನಿಮಾ ಏಕೆ ಹಿಟ್ ಆಗಿದೆ ಎಂದು ಕೇಳಿದ್ದೆ’ ಎಂದಿದ್ದಾರೆ ಉಪೇಂದ್ರ.

‘ಈ ಸಿನಿಮಾ ಹಳ್ಳಿಗಳಲ್ಲಿ ಶೂಟಿಂಗ್ ಮಾಡಿದ್ದೇವೆ. ತುಂಬಾ ಜೂನಿಯರ್ಸ್ ಆರ್ಟಿಸ್ಟ್ ಇದಾರೆ. ಇವರ ಮಧ್ಯೆ ಗೊತ್ತಿಲ್ಲದೆ ಯಾರೋ ಒಬ್ಬ ಹಳ್ಳಿಯವನು ಪಾಸ್ ಆಗಿದ್ದಾನೆ. ಅವನ ಅದೃಷ್ಟದಿಂದ ಸಿನಿಮಾ ಹಿಟ್ ಆಯಿತು’ ಎಂದು ರಾಜ್​ಕುಮಾರ್ ಅವರು ಹೇಳಿದ್ದರು. ‘ನಿರ್ದೇಶಕರು, ಹೀರೋ, ಹೀರೋಯಿನ್ ಯಾರೂ ಅಲ್ಲ. ಹೀಗೆ ಸುಮ್ಮನೆ ಕಾಣಿಸಿಕೊಂಡವನಿಂದ ಲಕ್ ಹೊಡೆಯಿತು ಎಂದು ಹೇಳಿದ್ದಾರೆ ಎಂದರೆ ಲೆಕ್ಕ ಹಾಕಿ. ಇದನ್ನು ಅರ್ಥ ಮಾಡಿಕೊಳ್ಳೋಕೆ ಎರಡು ವರ್ಷ ಬೇಕಾಯಿತು’ ಎಂದಿದ್ದಾರೆ ಉಪೇಂದ್ರ.

‘ಯಶಸ್ಸು ನಮ್ಮದು ಅಂದುಕೊಳ್ಳುತ್ತೇವೆ. ಆದರೆ, ನಮ್ಮದಲ್ಲ. ಅದು ಮ್ಯಾಜಿಕ್. ಸಕಸ್ಸ್ ಕುಣಿಯುತ್ತಾ ಇರುತ್ತದೆ. ಸ್ವಚ್ಛತೆ ಕಾಪಾಡಿಕೊಳ್ಳಬೇಕು. ನಿತ್ಯ ಸ್ನಾನ ಮಾಡಿದ ಹಾಗೆ ಗಲೀಜನ್ನು ಕ್ಲೀನ್ ಮಾಡಿಕೊಳ್ಳುತ್ತಾ ಇರಬೇಕು. ಅಣ್ಣಾವ್ರು ಸಕ್ಸಸ್​ಗೆ ಯಾರೂ ಕಾರಣ ಅಂದರಲ್ಲ. ಅದು ನಿಜಕ್ಕೂ ದೊಡ್ಡ ವಿಚಾರ’ ಎಂದರು ಉಪ್ಪಿ.


‘ಜೀ ಕನ್ನಡದ ರಿಯಾಲಿಟಿ ಶೋ ಒಂದಕ್ಕೆ ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಒಟ್ಟಾಗಿ ಆಗಮಿಸಿದ್ದರು. ಈ ವೇಳೆ ಉಪೇಂದ್ರ ಅವರು ಈ ಮಾತನ್ನು ಹೇಳಿದ್ದರು. ಈ ವೇಳೆ ಶಿವಣ್ಣ ಅವರ ಬಗ್ಗೆಯೂ ಮೆಚ್ಚುಗೆ ಮಾತನ್ನು ಆಡಿದ್ದಾರೆ. ಇಬ್ಬರೂ ‘ಕಬ್ಜ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಒಟ್ಟಾಗಿ ‘45’ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಗೆ ಅರ್ಜುನ್ ಜನ್ಯ ನಿರ್ದೇಶನ ಇದೆ.

ಇದನ್ನೂ ಓದಿ: ‘ಅದೇ ಎನರ್ಜಿ, ಅದೇ ಗತ್ತು’; ಜೀ ಕನ್ನಡ ವೇದಿಕೆ ಮೇಲೆ ಶಿವಣ್ಣ-ಪ್ರೇಮಾ ‘ಓಂ’ ರೀ ಕ್ರಿಯೇಷನ್

‘ಓಂ’ ಸಿನಿಮಾ ನಿರ್ಮಾಣ ಮಾಡಿದ್ದು ಅಣ್ಣಾವ್ರ ಕುಟುಂಬದವರೇ. ಅವರು ಸಿನಿಮಾದ ಕಥೆ ಹೇಳಿದಾಗ ರಾಜ್​ಕುಮಾರ್ ಹಾಗೂ ಅವರ ಸಹೋದರ ವರದಣ್ಣ ಅವರು ಈ ಕಥೆಯನ್ನು ಫೈನಲ್ ಮಾಡಿದ್ದರು. ಹೇಗೆ ಕಥೆ ಹೇಳಲಾಗಿದೆಯೋ ಅದೇ ರೀತಿ ಸಿನಿಮಾ ಮೂಡಿಬರಬೇಕು ಎನ್ನುವ ಆಗ್ರಹ ಕೂಡ ಇತ್ತು. ಒಂದೊಮ್ಮೆ ರಾಜ್​ಕುಮಾರ್ ಅವರು ಕಥೆಯಲ್ಲಿ ಬದಲಾವಣೆ ಕೇಳಿದ್ದರೆ ಸಿನಿಮಾ ಉತ್ತಮವಾಗಿ ಮೂಡಿ ಬರುತ್ತಿರಲಿಲ್ಲವೇನೋ. ‘ಒಂ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಮಾತ್ರವಲ್ಲ ರೀ ರಿಲೀಸ್ ವಿಚಾರದಲ್ಲೂ ವಿಶ್ವ ದಾಖಲೆ ಬರೆಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.