ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ

ರಾಶಿಕಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಅಹಂನಿಂದ ದೊಡ್ಡ ಅವಕಾಶ ಕಳೆದುಕೊಂಡಿದ್ದಾರೆ. ಟಾಸ್ಕ್ ಗೆದ್ದು ನಾಮಿನೇಷನ್​ನಿಂದ ಬಚಾವ್ ಆಗುವ ಸುವರ್ಣಾವಕಾಶ ಸಿಕ್ಕಿತ್ತು. ಆದರೆ, ತಂಡದ ಸರ್ವಾನುಮತದ ನಿರ್ಧಾರಕ್ಕೆ ಒಪ್ಪದೆ, ಸ್ಪಂದನಾ ಅವರನ್ನು ನಾಮಿನೇಟ್ ಮಾಡಲು ಹಠ ಹಿಡಿದರು. ಇದರಿಂದ ಆ ಅವಕಾಶ ಕೈತಪ್ಪಿತು.

ದಡ್ಡತನದಿಂದ ಅಪರೂಪದ ಅವಕಾಶ ಕಳೆದುಕೊಂಡ ರಾಶಿಕಾ ಶೆಟ್ಟಿ
ರಾಶಿಕಾ

Updated on: Nov 13, 2025 | 11:05 AM

ಬಿಗ್ ಬಾಸ್​ (Bigg Boss) ಮನೆಯಲ್ಲಿ ಅವಕಾಶದ ಬಾಗಿಲು ತೆರೆದಾಗ ಅದನ್ನು ಸ್ವೀಕರಿಸಬೇಕು. ಅದನ್ನು ಮುಚ್ಚಿಬಿಟ್ಟರೆ ಅದರಷ್ಟು ಮೂರ್ಖತನ ಮತ್ತೊಂದು ಇರೋದಿಲ್ಲ. ಈಗ ರಾಶಿಕಾ ಶೆಟ್ಟಿ ಅವರು ತಮ್ಮ ದಡ್ಡತನದಿಂದ ದೊಡ್ಡ ಅವಕಾಶ ಕಳೆದುಕೊಂಡಿದ್ದಾರೆ. ಈ ಬಗ್ಗೆ ಬಿಗ್ ಬಾಸ್ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು? ಆ ಬಗ್ಗೆ ಇಲ್ಲಿದೆ ವಿವರ.

ರಾಶಿಕಾ ಶೆಟ್ಟಿ ಅವರು ಈ ವಾರ ಉತ್ತಮವಾಗಿ ಆಟ ಆಡಿದರು. ಅವರ ತಂಡ ಗೆದ್ದಿತು. ಈ ವೇಳೆ ತಮ್ಮನ್ನು ತಾವು ನಾಮಿನೇಷನ್​ನಿಂದ ಬಚಾವ್ ಮಾಡಿಕೊಳ್ಳುವ ಪ್ರಯತ್ನದಲ್ಲಿ ಇದ್ದರು. ಆದರೆ, ಇದಕ್ಕೆ ರಕ್ಷಿತಾ ಶೆಟ್ಟಿ ಅವಕಾಶ ಕೊಡಲಿಲ್ಲ. ಅವರು ಹಠ ಬಿದ್ದು, ಸುಧಿಯನ್ನು ಸೇವ್ ಮಾಡಬೇಕು ಎಂದರು. ಅವಕಾಶ ಹಾಳಾಗಬಾರದು ಎಂಬ ಕಾರಣಕ್ಕೆ ಎಲ್ಲರೂ ಒಪ್ಪಿಕೊಂಡರು.

ಆ ಬಳಿಕ ಮತ್ತೊಂದು ಟಾಸ್ಕ್ ಗೆದ್ದಾಗ ರಾಶಿಕಾ ಅವರನ್ನು ನಾಮಿನೇಷನ್​ನಿಂದ ಬಚಾವ್ ಮಾಡಬೇಕು ಎಂದು ಎಲ್ಲರೂ ನಿರ್ಧಾರಕ್ಕೆ ಬಂದರು. ಈ ರೀತಿ ಸೇವ್ ಮಾಡಿದಾಗ ಎದುರಾಳಿ ತಂಡದಿಂದ ಒಬ್ಬರನ್ನು ನಾಮಿನೇಟ್ ಮಾಡಬೇಕಿತ್ತು. ಮುಂದೆ ಬರುವ ಆಟದ ದೃಷ್ಟಿಯಿಂದ ಅಭಿಯನ್ನು ನಾಮಿನೇಟ್ ಮಾಡಬೇಕು ಎಂಬುದು ತಂಡದ ನಿರ್ಧಾರ ಆಗಿತ್ತು. ಆದರೆ, ಇದಕ್ಕೆ ರಾಶಿಕಾ ಒಪ್ಪಿಗೆ ಸೂಚಿಸಲೇ ಇಲ್ಲ.

ರಾಶಿಕಾ ಥಿಯರಿಯೇ ಬೇರೆ ಇತ್ತು. ಸ್ಪಂದನಾ ನಾಮಿನೇಟ್ ಆಗಬೇಕು ಎಂದು ಅವರು ಹಠ ಹಿಡಿದರು. ಅವರನ್ನು ನಾಮಿನೇಟ್ ಮಾಡಿ ತಂಡಕ್ಕೆ ಸೇರಿಸಿಕೊಂಡರೆ ಟೀಂ ಬಲ ಕಡಿಮೆ ಆಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ ಆಗಿತ್ತು. ಆದರೆ, ರಾಶಿಕಾ ಮಾತ್ರ ಹಠ ಬಿಡಲೇ ಇಲ್ಲ. ಕೊನೆಗೆ ಒಮ್ಮತದ ನಿರ್ಧಾರಕ್ಕೆ ಬರಲಾಗದೆ ಸಿಕ್ಕ ದೊಡ್ಡ ಅವಕಾಶವನ್ನು ಕೈಚೆಲ್ಲಿದರು.

ಇದನ್ನೂ ಓದಿ: ಗಿಲ್ಲಿ ಕೈಗೊಂಬೆಯಾದ್ರಾ ರಕ್ಷಿತಾ ಶೆಟ್ಟಿ? ವೀಕೆಂಡ್​ನಲ್ಲಿ ಸುದೀಪ್ ಕ್ಲಾಸ್ ಫಿಕ್ಸ್?

ಈ ಬಗ್ಗೆ ಬಿಗ್ ಬಾಸ್ ಅನೌನ್ಸ್ ಮಾಡುವಾಗ ಬೇಸರ ಹೊರಹಾಕಿದರು. ‘ನೀವೆಷ್ಟು ದೊಡ್ಡ ಅವಕಾಶ ಕಳೆದುಕೊಂಡಿದ್ದೀರಿ ಎಂಬ ಪರಿಜ್ಞಾನ ನಿಮಗೆ ಇಲ್ಲ’ ಎಂದು ಬಿಗ್ ಬಾಸ್ ಹೇಳಿದರು. ಇಷ್ಟು ದಿನ ‘ನಾನು ಸೇವ್ ಆಗೋದಿಲ್ಲ, ನನಗೆ ಏಕೆ ಹೀಗಾಗುತ್ತದೆ’ ಎನ್ನುತ್ತಿದ್ದ  ರಾಶಿಕಾ ಅವರು ಇಂದು ಈಗೋ ಹಾಗೂ ದಡ್ಡತನದ ಕಾರಣಕ್ಕೆ ಸಿಕ್ಕ ದೊಡ್ಡ ಅವಕಾಶ ಕೈಚೆಲ್ಲಿದಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.