ಕನ್ನಡ ಪರ ಹೋರಾಟದ ಮೂಲಕ ಗುರುತಿಸಿಕೊಂಡ ರೂಪೇಶ್ ರಾಜಣ್ಣ (Roopesh Rajanna) ಅವರು ಬಿಗ್ ಬಾಸ್ ಕನ್ನಡ ಸೀಸನ್ 9ರ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಇದರಿಂದ ಸಾಕಷ್ಟು ಕುತೂಹಲ ಸೃಷ್ಟಿ ಆಗಿದೆ. ಹಿಂದಿ ಹೇರಿಕೆ ವಿರೋಧಿಸಿ, ಕನ್ನಡ ಉಳಿಸಿ ಬಗ್ಗೆ ಸಾಕಷ್ಟು ಚಳುವಳಿ ಮಾಡಿದ್ದಾರೆ ರೂಪೇಶ್ ರಾಜಣ್ಣ. ಈಗ ಅವರು ಬಿಗ್ ಬಾಸ್ನಲ್ಲಿ ಯಾವ ರೀತಿಯಲ್ಲಿ ಗಮನ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಪ್ರಶಾಂತ್ ಸಂಬರ್ಗಿ ಅವರು ಹೋರಾಟಗಾರನಾಗಿ, ಸಾಮಾಜಿಕ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದರು. ಅವರು ಮತ್ತೆ ಬಿಗ್ ಬಾಸ್ಗೆ ಎಂಟ್ರಿ ಕೊಟ್ಟಿದ್ದಾರೆ. ಈಗ ರೂಪೇಶ್ ರಾಜಣ್ಣ ಕೂಡ ಅವರಿಗೆ ಜತೆಯಾಗಿದ್ದಾರೆ. ಈ ಕಾರಣದಿಂದ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಹೋರಾಟಗಾರರು ಸೇರಿದಂತಾಗಿದೆ.
ತಮ್ಮ ಬಗ್ಗೆ ಮಾಹಿತಿ ನೀಡಿರುವ ರೂಪೇಶ್ ರಾಜಣ್ಣ, ‘ಕನ್ನಡದ ಮೇಲೆ ಮೊದಲೇ ಪ್ರೀತಿ ಇತ್ತು. ಮೊದಲು ಆ್ಯಂಕರ್ ಆಗಿದ್ದೆ. ಸಿನಿಮಾದಲ್ಲಿ ನಟಿಸಿದ್ದೆ. ನಂತರ ಕನ್ನಡದ ಪರವಾಗಿ ಹೋರಾಟ ಆರಂಭಿಸಿದೆ. ಈಗ ಎಲ್ಲರೂ ನನ್ನನ್ನು ಗುರುತಿಸುತ್ತಾರೆ. ರೂಪೇಶ್ ಎಲ್ಲಾ ಭಾಷೆ ದ್ವೇಷ ಮಾಡ್ತಾರೆ ಎಂಬ ಆರೋಪ ಇದೆ. ಆದರೆ, ನಮ್ಮ ಭಾಷೆ ಮೇಲೆ ಬೇರೆ ಭಾಷೆಯನ್ನು ಹೇರುವುದನ್ನು ಮಾತ್ರ ನಾನು ವಿರೋಧಿಸುತ್ತೇವೆ. ಕನ್ನಡವನ್ನು ಕನ್ನಡ ಎನ್ನಿ, ಕನ್ನಡ್ ಎನ್ನಬೇಡಿ. ಚಿಕ್ಕ ವಯಸ್ಸಲ್ಲಿ ತಂದೆ ಕಳೆದುಕೊಂಡೆ. ಅಮ್ಮ ಮಾತ್ರ ಇದ್ದಿದ್ದು. ಅವರು ನಮ್ಮನ್ನು ಬೆಳೆಸಿ ಇಲ್ಲಿಗೆ ತಂದು ನಿಲ್ಸಿಸಿದ್ದಾರೆ. ನನ್ನ ಹೋರಾಟದ ಜೀವನಕ್ಕೆ ಹೆಂಡತಿ ಬೆಂಬಲವಾಗಿ ನಿಂತಿದ್ದಾಳೆ’ ಎಂದಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ಗೆ ಎಂಟ್ರಿ ಕೊಟ್ಟ ನೇಹಾ ಗೌಡ ಹಾಗೂ ವಿನೋದ್; ಇವರ ವಿಶೇಷತೆಗಳೇನು?
ರೂಪೇಶ್ ರಾಜಣ್ಣ ಅವರು ಮಿಮಿಕ್ರಿ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರು ಹಲವು ಸ್ಟಾರ್ ನಟರ ಮಿಮಿಕ್ರಿ ಮಾಡುತ್ತಾರೆ. ಇದನ್ನು ಕೂಡ ಅವರು ವೇದಿಕೆ ಮೇಲೆ ಮಾಡಿ ತೋರಿಸಿದ್ದಾರೆ. ಈಗಾಗಲೇ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿದ್ದಾರೆ. ಈ ಕಾರಣದಿಂದ ದೊಡ್ಮನೆಯಲ್ಲಿ ಡಬಲ್ ರೂಪೇಶ್ ಆಗಿದ್ದಾರೆ.
Published On - 10:15 pm, Sat, 24 September 22