ಸಲ್ಮಾನ್ ಖಾನ್, ಗಂಗೂಲಿ ಜೊತೆ ಡ್ಯಾನ್ಸ್ ಮಾಡಿದ ಮಮತಾ ಬ್ಯಾನರ್ಜಿ; ಹೇಗಿತ್ತು ನೋಡಿ ಸ್ಟೆಪ್ಸ್

Salman Khan: ವೇದಿಕೆ ಮೇಲೆ ಡ್ಯಾನ್ಸ್ ಮಾಡುವಂತೆ ಸಲ್ಮಾನ್ ಖಾನ್ ಅವರು ಮಮತಾ ಬ್ಯಾನರ್ಜಿ ಬಳಿ ಕೋರಿದ್ದಾರೆ. ಮಮತಾ ಬ್ಯಾನರ್ಜಿಗೆ ಡ್ಯಾನ್ಸ್ ಮಾಡೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಅವರು ಕೇವಲ ಕೈ ಬೀಸಿದ್ದಾರೆ.

ಸಲ್ಮಾನ್ ಖಾನ್, ಗಂಗೂಲಿ ಜೊತೆ ಡ್ಯಾನ್ಸ್ ಮಾಡಿದ ಮಮತಾ ಬ್ಯಾನರ್ಜಿ; ಹೇಗಿತ್ತು ನೋಡಿ ಸ್ಟೆಪ್ಸ್
ಸಲ್ಮಾನ್-ಮಮತಾ

Updated on: Dec 06, 2023 | 6:56 AM

ಕೋಲ್ಕತ್ತಾ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್ (KIFF) ಮಂಗಳವಾರ (ಡಿಸೆಂಬರ್ 6) ಉದ್ಘಾಟನೆ ಗೊಂಡಿದೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಬಾಲಿವುಡ್ ಸೆಲೆಬ್ರಿಟಿಗಳಾದ ಸಲ್ಮಾನ್ ಖಾನ್ (Salman Khan)​, ಅನಿಲ್ ಕಪೂರ್, ಮಹೇಶ್ ಭಟ್​, ಶತ್ರುಘ್ನ ಸಿನ್ಹ, ಸೋನಾಕ್ಷಿ ಸಿನ್ಹ, ಟೀಂ ಇಂಡಿಯಾ ಮಾಜಿ ಆಟಗಾರ ಸೌರವ್ ಗಂಗೂಲಿ ಮೊದಲಾದವರು ಭಾಗಿ ಆಗಿದ್ದರು. ವೇದಿಕೆ ಮೇಲೆ ಸಲ್ಮಾನ್ ಖಾನ್ ಹಾಗೂ ಮಮತಾ ಬ್ಯಾನರ್ಜಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಟ್ರೋಲ್ ಆಗುತ್ತಿದೆ. ಇದೆಂಥಾ ಡ್ಯಾನ್ಸ್ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಸಲ್ಮಾನ್ ಖಾನ್ ಹಾಗೂ ಇತರ ಸೆಲೆಬ್ರಿಟಿಗಳು ದೀಪ ಬೆಳಗಿ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಮಮತಾ ಬ್ಯಾನರ್ಜಿ ಅವರು ವೇದಿಕೆ ಮೇಲೆ ಕುಳಿತಿದ್ದರು. ಈ ವೇಳೆ ಡ್ಯಾನ್ಸ್ ಮಾಡುವಂತೆ ಸಲ್ಮಾನ್ ಖಾನ್ ಅವರು ಮಮತಾ ಬ್ಯಾನರ್ಜಿ ಬಳಿ ಕೋರಿದ್ದಾರೆ. ಅವರು ಒಪ್ಪಿ ಡ್ಯಾನ್ಸ್ ಮಾಡಿದ್ದಾರೆ. ಸಲ್ಮಾನ್, ಮಮತಾ ಮಾತ್ರವಲ್ಲದೆ ಮಹೇಶ್ ಭಟ್, ಅನಿಲ್ ಕಪೂರ್, ಸೋನಾಕ್ಷಿ, ಗಂಗೂಲಿ ಕೂಡ ಮಮತಾ ಪಕ್ಕದಲ್ಲಿದ್ದರು.

ಮಮತಾ ಬ್ಯಾನರ್ಜಿಗೆ ಡ್ಯಾನ್ಸ್ ಮಾಡೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಅವರು ಕೇವಲ ಕೈ ಬೀಸಿದ್ದಾರೆ. ಅನೇಕರು ಮಮತಾ ಡ್ಯಾನ್ಸ್​ನ ಟ್ರೋಲ್ ಮಾಡಿದ್ದಾರೆ. ಇನ್ನೂ ಕೆಲವರು ಸಲ್ಮಾನ್ ಖಾನ್ ಅವರು ಮಮತಾ ಬ್ಯಾನರ್ಜಿ ಬಳಿ ಡ್ಯಾನ್ಸ್ ಮಾಡುವಂತೆ ಒತ್ತಾಯಿಸಿದ ಪರಿಯನ್ನು ಕೊಂಡಾಡಿದ್ದಾರೆ. ‘ಸಲ್ಮಾನ್ ಖಾನ್ ಬಳಿ ಮಾತ್ರ ಇದು ಸಾಧ್ಯ’ ಎಂದು ಅನೇಕರು ಹೇಳಿದ್ದಾರೆ.

ಇದನ್ನೂ ಓದಿ: ಸಲ್ಮಾನ್ ಖಾನ್ ಆಪ್ತನ ಮನೆ ಮೇಲೆ ಗುಂಡಿನ ದಾಳಿ, ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯಿ

ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ಇಂಟರ್​ನ್ಯಾಷನಲ್ ಫಿಲ್ಮ್​ ಫೆಸ್ಟಿವಲ್ ಉದ್ಘಾಟನೆಗೊಂಡಿದೆ. ಡಿಸೆಂಬರ್ 12ರವರೆಗೆ ಈ ಉತ್ಸವ ನಡೆಯಲಿದೆ. ವಿವಿಧ ದೇಶದ, ವಿವಿಧ ಭಾಷೆಗಳ ಸಿನಿಮಾಗಳು ಇಲ್ಲಿ ಪ್ರದರ್ಶನ ಕಾಣಲಿವೆ. ಹಲವು ಸೆಲೆಬ್ರಿಟಿಗಳು, ನಿರ್ದೇಶಕರು, ವಿಮರ್ಶಕರು ಇದರಲ್ಲಿ ಭಾಗಿ ಆಗಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us