ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೆಚ್ಚು ಫ್ಯಾನ್ ಫಾಲೋಯಿಂಗ್ ಇದೆ. ವಿವಾದಗಳ ಜೊತೆಜೊತೆಯಲ್ಲೇ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವುದು ಈ ರಿಯಾಲಿಟಿ ಶೋನ ಸ್ಪೆಷಾಲಿಟಿ. ಪ್ರತಿ ಬಾರಿ ಯಾವೆಲ್ಲ ಸ್ಪರ್ಧಿಗಳು ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳಾಗಿ ಭಾಗವಹಿಸುತ್ತಾರೆ ಎಂಬ ಕುತೂಹಲ ಇದ್ದೇ ಇರುತ್ತದೆ. ಅದೇ ರೀತಿ ಯಾರು ನಿರೂಪಣೆ ಮಾಡುತ್ತಾರೆ ಎಂಬ ಪ್ರಶ್ನೆ ಕೂಡ ಎದ್ದಿರುತ್ತದೆ. ಅದರಲ್ಲೂ ತೆಲುಗಿನಲ್ಲಿ ಆಗಾಗ ನಿರೂಪಕರು ಬದಲಾದ ಉದಾಹರಣೆ ಇದೆ. ಈವರೆಗೂ ತೆಲುಗಿನಲ್ಲಿ 5 ಸೀಸನ್ಗಳನ್ನು ಪೂರೈಸಿರುವ ಬಿಗ್ ಬಾಸ್ ಕಾರ್ಯಕ್ರಮ ಈಗ 6ನೇ ಸೀಸನ್ಗೆ (Bigg Boss Telugu 6) ಸಜ್ಜಾಗುತ್ತಿದೆ. ಈ ಬಾರಿ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ನಿರೂಪಣೆ ಮಾಡುತ್ತಾರೆ ಎಂಬ ಗುಸುಗುಸು ಹಬ್ಬಿದೆ. ಆದರೆ ಈಗಾಗಲೇ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅವರ ಪ್ರೋಮೋ ರಿಲೀಸ್ ಆಗಿರುವುದರಿಂದ ಅವರೇ ನಿರೂಪಕರಾಗಿ ಮುಂದುವರಿಯುತ್ತಾರೆ ಎಂಬುದು ಕೂಡ ಖಚಿತವಾಗಿದೆ. ಅದರ ನಡುವೆಯೂ ಸಮಂತಾ ಕುರಿತು ಈ ರೀತಿ ಗಾಸಿಪ್ ಹಬ್ಬಿರುವುದರಿಂದ ಫ್ಯಾನ್ಸ್ ಗೊಂದಲಕ್ಕೆ ಒಳಗಾಗಿದ್ದಾರೆ.
ಸಮಂತಾ ಅವರಿಗೆ ಇತ್ತೀಚಿನ ದಿನಗಳಲ್ಲಿ ವೃತ್ತಿಜೀವನದಲ್ಲಿ ಹೊಸ ಹೊಸ ಅವಕಾಶಗಳು ಬರುತ್ತಿವೆ. ನಾಗ ಚೈತನ್ಯ ಅವರಿಗೆ ವಿಚ್ಛೇದನ ನೀಡಿದ ಬಳಿಕ ಅವರು ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ. ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡುವುದರಿಂದ ಹಿಡಿದು, ಬೋಲ್ಡ್ ಪಾತ್ರಗಳವರೆಗೆ ಅನೇಕ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗ ಬಿಗ್ ಬಾಸ್ ರಿಯಾಲಿಟಿ ಶೋ ಸಾರಥ್ಯವನ್ನೂ ವಹಿಸುತ್ತಾರೆ ಎಂಬ ಗುಮಾನಿ ಮೂಡಿದೆ.
ಇದನ್ನೂ ಓದಿ: ‘ನೀವು ನಾಯಿ-ಬೆಕ್ಕುಗಳ ಜತೆ ಒಂಟಿಯಾಗಿ ಸಾಯುತ್ತೀರಿ’ ಎಂದ ಅಭಿಮಾನಿಗೆ ಸಮಂತಾ ಹೇಳಿದ್ದೇನು ನೋಡಿ
ಈ ಹಿಂದಿನ ಸೀಸನ್ಗಳಲ್ಲಿ ಅಕ್ಕಿನೇನಿ ನಾಗಾರ್ಜುನ ಅವರು ಸಿನಿಮಾ ಕೆಲಸಗಳ ಕಾರಣದಿಂದ ಬಿಗ್ ಬಾಸ್ ನಿರೂಪಣೆಗೆ ಚಕ್ಕರ್ ಹಾಕಿದ್ದಾಗ ಬೇರೆ ಕಲಾವಿದರು ಬಂದು ಶೋ ನಡೆಸಿಕೊಟ್ಟಿದ್ದರು. ಈ ಬಾರಿ ಕೂಡ ಅವರೇನಾದರೂ ಸಿನಿಮಾ ಕೆಲಸಗಳ ಸಲುವಾಗಿ ಬಿಗ್ ಬಾಸ್ನ ಕೆಲವು ಎಪಿಸೋಡ್ಗಳನ್ನು ಸ್ಕಿಪ್ ಮಾಡುತ್ತಾರಾ? ಸದ್ಯಕ್ಕೆ ಈ ಪ್ರಶ್ನೆಗೆ ಉತ್ತರ ಇಲ್ಲ. ಒಟ್ಟಿನಲ್ಲಿ ಈ ಬಾರಿ ಸಮಂತಾ ನಿರೂಪಣೆ ಮಾಡುವ ಬಗ್ಗೆ ಯಾರೂ ಅಧಿಕೃತ ಹೇಳಿಕೆ ನೀಡಿಲ್ಲ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:33 pm, Fri, 3 June 22