ಬಿಗ್ ಬಾಸ್ (Bigg Boss) ಮನೆಯಲ್ಲಿ ಯಾರು ಯಾವ ರೀತಿಯಲ್ಲಿ ಆಡುತ್ತಿದ್ದಾರೆ ಅನ್ನೋದು ಹೊರಗಿನಿಂದ ನೋಡಿದವರಿಗೆ ಸ್ಪಷ್ಟವಾಗಿ ತಿಳಿಯುತ್ತಿದೆ. ಯಾರ ಆಟದಲ್ಲಿ ಯಾವ ರೀತಿಯ ಬದಲಾವಣೆ ಆಗಬೇಕು ಅನ್ನೋದು ಕೂಡ ಅನೇಕರಿಗೆ ಗೊತ್ತಾಗಿರುತ್ತದೆ. ಈ ವಾರ ಫ್ಯಾಮಿಲಿ ವೀಕ್. ಕುಟುಂಬದವರು ದೊಡ್ಮನೆಗೆ ತೆರಳಿ ತಮ್ಮವರನ್ನು ಮಾತನಾಡಿಸುತ್ತಿದ್ದಾರೆ. ಆಟದಲ್ಲಿ ಯಾವ ರೀತಿಯ ಬದಲಾವಣೆ ಆಗಬೇಕು ಎಂಬುದನ್ನು ಹೇಳುತ್ತಿದ್ದಾರೆ. ಕಾರ್ತಿಕ್ (Karthik) ಅವರ ತಾಯಿ ಬಿಗ್ ಬಾಸ್ಗೆ ಬಂದಿದ್ದರು. ಈ ವೇಳೆ ಅವರ ಬಳಿ ಸಂಗೀತಾ ಕ್ಷಮೆ ಕೇಳಿದ್ದಾರೆ.
ಕಾರ್ತಿಕ್ ಅವರ ತಾಯಿ ದೊಡ್ಮನೆಗೆ ಬಂದರು. ಮೊದಲು ಹೀಗೆ ಬಂದು ಹಾಗೆ ಹೋದರು. ಆ ಬಳಿಕ ಅವರನ್ನು ಮತ್ತೆ ದೊಡ್ಮನೆಗೆ ಕಳುಹಿಸಲಾಯಿತು. ಈ ವೇಳೆ ಕಾರ್ತಿಕ್ ಖುಷಿಯಿಂದ ತಾಯಿಯನ್ನು ಮಾತನಾಡಿಸಿದರು. ಕಾರ್ತಿಕ್ ತಾಯಿ ಕೂಡ ಎಲ್ಲರ ಜೊತೆ ಬೆರೆತರು. ಸಮಯ ನೋಡಿ ಸಂಗೀತಾ ಅವರು ಕ್ಷಮೆ ಕೇಳಿದ್ದಾರೆ. ಇದಕ್ಕೆ ಒಂದು ಮಹತ್ವದ ಕಾರಣ ಇದೆ.
ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. ಈ ಟಾಸ್ಕ್ನಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಬೇರೆ ಬೇರೆ ಟೀಂನಲ್ಲಿ ಇದ್ದರು. ಸಂಗೀತಾ ಅವರು ಕಾರ್ತಿಕ್ಗೆ ತಲೆ ಬೋಳಿಸೋ ಟಾಸ್ಕ್ ನೀಡಿದರು. ಇದನ್ನು ಸ್ವೀಕರಿಸಿದರು ಕಾರ್ತಿಕ್. ಈ ಮೂಲಕ ಅವರು ತಲೆ ಬೋಳಿಸಿಕೊಂಡರು. ಈ ಘಟನೆ ಬಗ್ಗೆ ಸಂಗೀತಾಗೆ ಇನ್ನೂ ಬೇಸರ ಇದ್ದಂತೆ ಇದೆ. ಈ ವಿಚಾರದಲ್ಲಿ ಅವರು ಕ್ಷಮೆ ಕೇಳಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಈಗ ಉಳಿದಿದ್ದು 10 ಮಂದಿ; ಸ್ಪರ್ಧಿಗಳ ಬಲಾಬಲದ ಬಗ್ಗೆ ಇಲ್ಲಿದೆ ವಿವರ..
‘ಅಮ್ಮ ನನ್ನನ್ನು ಕ್ಷಮಿಸಿ’ ಎಂದರು ಸಂಗೀತಾ. ಇದಕ್ಕೆ ಕಾರ್ತಿಕ್ ತಾಯಿ ‘ಏಕೆ’ ಎಂದು ಪ್ರಶ್ನಿಸಿದರು. ‘ನಿಮ್ಮ ಮಗನ ತಲೆ ಕೂದಲು ಹೋಗುವಂತೆ ಮಾಡಿದೆ. ಅದೆಲ್ಲ ಗೇಮ್ಗೋಸ್ಕರ ಮಾತ್ರ ಆಗಿತ್ತು. ನಮ್ಮಿಬ್ಬರ ಮಧ್ಯೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ’ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಕಾರ್ತಿಕ್ ತಾಯಿ, ‘ಕ್ಷಮೆ ಕೇಳುವ ಅಗತ್ಯ ಇಲ್ಲ’ ಎಂದರು. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಬಿಗ್ ಬಾಸ್ ನೋಡೋ ಅವಕಾಶ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:04 am, Thu, 28 December 23