ಬಿಗ್ ಬಾಸ್ ಮನೆಯಲ್ಲಿ ಸಂಗೀತಾ ಶೃಂಗೇರಿ ಮತ್ತು ವಿನಯ್ ಗೌಡ (Vinay Gowda) ಅವರು ಹಲವು ಬಾರಿ ಜಗಳ ಮಾಡಿಕೊಂಡಿದ್ದಾರೆ. ನಡುವೆ ಒಂದಷ್ಟು ದಿನ ಸ್ನೇಹ ಬೆಳೆಸಿಕೊಂಡಿದ್ದ ಅವರು ನಂತರ ಮತ್ತೆ ಕಿತ್ತಾಡಲು ಆರಂಭಿಸಿದರು. ಈಗ ಫಿನಾಲೆ ವಾರ ಹತ್ತಿರ ಆಗಿದೆ. ಸಂಗೀತಾ ಶೃಂಗೇರಿ (Sangeetha Sringeri) ಅವರು ನೇರವಾಗಿ ಫಿನಾಲೆ ವಾರಕ್ಕೆ ಟಿಕೆಟ್ ಪಡೆದಿದ್ದಾರೆ. ವೀಕೆಂಡ್ ಪಂಚಾಯ್ತಿಯಲ್ಲಿ ಹೊಸ ವಿಚಾರ ಚರ್ಚೆಗೆ ಬಂದಿದೆ. ‘ಯಾವ ವ್ಯಕ್ತಿ ಫಿನಾಲೆ (Bigg Boss Finale) ತಲುವುದು ನಿಮಗೆ ಇಷ್ಟ ಇಲ್ಲ’ ಎಂದು ಕಿಚ್ಚ ಸುದೀಪ್ ಎಲ್ಲರಿಗೂ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಸಂಗೀತಾ ಶೃಂಗೇರಿ ಅವರು ವಿನಯ್ ಗೌಡ ಹೆಸರು ಹೇಳಿದ್ದಾರೆ. ತಮ್ಮ ಈ ಅಭಿಪ್ರಾಯಕ್ಕೆ ಕಾರಣ ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.
‘ನನ್ನ ಪ್ರಕಾರ ಬಿಗ್ ಬಾಸ್ ಎಂಬುದು ಒಂದು ವ್ಯಕ್ತಿತ್ವದ ಸ್ಪರ್ಧೆ. ಖಂಡಿತವಾಗಿಯೂ ವಿನಯ್ ಅವರು ಗೇಮ್ನಲ್ಲಿ ತುಂಬ ಚೆನ್ನಾಗಿ ಆಡಿದ್ದಾರೆ. ಆದರೆ ಅವರು ತಮ್ಮ ಅಭಿಪ್ರಾಯವನ್ನು ಹೇರುತ್ತಾರೆ. ಇದನ್ನು ಮೋಸ ಅಥವಾ ಸ್ಮಾರ್ಟ್ ಪ್ಲೇ ಅಂತ ಹೇಳಬಹುದು. ಹಲವು ಬಾರಿ ಅನೇಕರ ಮನಸ್ಸು ಬದಲಾಗಿದೆ. ನನಗೆ ಎಮೋಷನಲಿ ತುಂಬ ಪರಿಣಾಮ ಬೀರಿದೆ’ ಎಂದು ಸಂಗೀತಾ ಶೃಂಗೇರಿ ಹೇಳಿದ್ದಾರೆ.
ಇದನ್ನೂ ಓದಿ: ಅರ್ಹರಿಗೇ ಸಿಕ್ತು ಫೈನಲ್ ಟಿಕೆಟ್, ಫೈಟರ್ ಸಂಗೀತಾ ಫಿನಾಲೆಗೆ
‘ಬೇರೆ ಗೇಮ್ಸ್ ಆಡುವಾಗ ವಿನಯ್ ಅವರ ಅಗ್ರೆಷನ್ ಕಾರಣದಿಂದ ಆಟ ಹಾಳಾಗಿದೆ. ಇಂಥ ವ್ಯಕ್ತಿತ್ವದವರನ್ನು ಬಿಗ್ ಬಾಸ್ ವಿನ್ನರ್ ಆಗಿ ನೋಡಲು ನಾನು ಇಷ್ಟಪಡುವುದಿಲ್ಲ. ಫೈನಲಿಸ್ಟ್ಗಳಲ್ಲಿ ಅವರು ಒಬ್ಬರಾಗಿ ಇರುವುದು ನನಗೆ ಇಷ್ಟ ಇಲ್ಲ’ ಎಂದು ಸಂಗೀತಾ ಶೃಂಗೇರಿ ಅವರು ನೇರವಾಗಿ ಹೇಳಿದ್ದಾರೆ. ಇನ್ನು, ‘ಡ್ರೋನ್ ಪ್ರತಾಪ್ ಅವರು ಒಂದು ವಾರ ಕಾದು ನೋಡಬೇಕು. ನಮ್ರತಾ ಗೌಡ ಅವರು ನೇರವಾಗಿ ಫಿನಾಲೆ ವಾರಕ್ಕೆ ಬರಬೇಕು’ ಎಂದು ಸಂಗೀತಾ ಹೇಳಿದ್ದಾರೆ.
ಇದನ್ನೂ ಓದಿ: ಸಂಗೀತಾಗೆ ಫಿನಾಲೆ ಟಿಕೆಟ್ ಜೊತೆ ಮತ್ತೊಂದು ದೊಡ್ಡ ಅಡ್ವಾಂಟೇಜ್ ಕೊಟ್ಟ ಬಿಗ್ ಬಾಸ್
‘ನಮ್ರತಾ ಗೌಡ ತುಂಬ ಸ್ಟ್ರಾಂಗ್ ಆಗಿದ್ದಾರೆ. ಮೊದಲಿನಿಂದ ನನಗೂ ನಮ್ರತಾಗೂ ಆಗಿಬರುತ್ತಿರಲಿಲ್ಲ. ಆದರೆ ಎಲ್ಲೇ ಇದ್ದರೂ ಅವರು ಪ್ರಾಮಾಣಿಕವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಅವರು ಫೈನಲಿಸ್ಟ್ ಆಗಲು ಸಾಮರ್ಥ್ಯ ಹೊಂದಿದ್ದಾರೆ’ ಎಂದು ನಮ್ರತಾ ಪರವಾಗಿ ಸಂಗೀತಾ ಮಾತನಾಡಿದ್ದಾರೆ. ಅಂತಿಮವಾಗಿ ಯಾರು ಫಿನಾಲೆಗೆ ತಲುಪುತ್ತಾರೆ? ಟ್ರೋಫಿ ಯಾರಿಗೆ ಸಿಗಲಿದೆ? ರನ್ನರ್ಅಪ್ ಯಾರು ಆಗಲಿದ್ದಾರೆ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ