Seetha Raama: ಮೋಸದ ಲೆಕ್ಕ ನೀಡಿದ ಸೀತಾ; ಭಾರ್ಗವಿ ಕೆಂಗಣ್ಣಿಗೆ ಗುರಿಯಾಗುತ್ತಾಳಾ ನಾಯಕಿ?   

ದೇಸಾಯಿ ಮನೆಯ ಹಿರಿ ತಲೆ  ಸೂರ್ಯ ಪ್ರಕಾಶ್ ಬಂದಾಗ ಆತ ಕೇಳಿದ ಪ್ರಶ್ನೆಗೆಲ್ಲಾ ಸೀತಾ ಸತ್ಯವನ್ನೇ ಹೇಳುತ್ತಾಳೆ. ಆಕೆಯ ಸತ್ಯ ಹೇಳಿದ್ದಕ್ಕೆ ರಾಮ್ ಕೂಡ ಮನದಲ್ಲೇ ಮೆಚ್ಚುಗೆ ಸೂಚಿಸುತ್ತಾನೆ. ಆದರೆ ದೂರದಲ್ಲಿ ನಿಂತು ನೋಡುತ್ತಿದ್ದ ಭಾರ್ಗವಿಗೆ ಸೀತಾ ಮೇಲೆ ಸಿಟ್ಟು ಬಂದಿದೆ.  

Seetha Raama: ಮೋಸದ ಲೆಕ್ಕ ನೀಡಿದ ಸೀತಾ; ಭಾರ್ಗವಿ ಕೆಂಗಣ್ಣಿಗೆ ಗುರಿಯಾಗುತ್ತಾಳಾ ನಾಯಕಿ?   
ಸೀತಾ
Edited By:

Updated on: Jul 27, 2023 | 8:05 AM

‘ಸೀತಾ ರಾಮ’ ಧಾರಾವಾಹಿ (Seetha Raama Serial) ಆರಂಭದಲ್ಲೇ ಕುತೂಹಲ ಮೂಡಿಸಿದೆ. ಎರಡನೇ ವಾರಕ್ಕೆ ಕಾಲಿಟ್ಟಿರುವ ವೈಷ್ಣವಿ-ಗಗನ ಚಿನ್ನಪ್ಪ ಧಾರಾವಾಹಿ ಗಮನ ಸೆಳೆಯುತ್ತಿದೆ. ಸಿಹಿ 10 ಎಣಿಸುವುದರ ಒಳಗಡೆ ಮನೆಗೆ ಬಂದ ರೌಡಿಗಳನ್ನು ಒಂದು ಫೋನ್ ಕರೆಯ ಮೂಲಕ ಓಡಿಸಿದ್ದ ರಾಮ್ (Ram). ಮುದ್ದು ಫ್ರೆಂಡ್ ಗಿದ್ದ ಭಯನ ನಿವಾರಣೆ ಮಾಡೋದರಲ್ಲಿ ಯಶಸ್ವಿಯೂ ಆಗತ್ತಾನೆ. ಅದನ್ನ ನಾನು ಮಾಡಿದ್ದೂ ಅಂತಾನೂ ಹೇಳದೆಯೇ ಸಿಹಿ ಹತ್ತಿರ, ನಿನ್ನ ಮುಗುಳ್ನಗೆಯ ಮ್ಯಾಜಿಕ್ ಅಂತಾನೂ ಹೇಳಿದ್ದ. ಆದರೆ ಸೀತಾ ಹಿಂದಿನ ಅಸಮಾಧಾನ ಮನಸ್ಸಿನಲ್ಲಿಟ್ಟುಕೊಂಡು ರಾಮ್ ಮಾಡಿದ ಸಹಾಯವನ್ನು ಲೆಕ್ಕಿಸದೆಯೇ, ಖಡಕ್ ಆಗಿಯೇ ಮಾತನಾಡುತ್ತಾಳೆ. ಮನದಲ್ಲಿ ರಾಮ್ ಮಾಡಿದ ಉಪಕಾರಕ್ಕೆ ಥ್ಯಾಂಕ್ಸ್ ಕೂಡ ಹೇಳುತ್ತಾಳೆ.

ಇನ್ನು ಸಿಹಿ, ರಾತ್ರಿ ಮಲಗಿದ್ದಾಗಲೂ ರೌಡಿಗಳಿಂದ ಬಚಾವ್ ಮಾಡಿದ್ದ ತನ್ನ ಫ್ರೆಂಡ್ ನನ್ನು ಕನವರಿಸುತ್ತಾ ಮುಗುಳ್ನಗೆ ಮ್ಯಾಜಿಕ್ ಹೇಳಿಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತಾ ಇದ್ದಾಳೆ. ಅವಳ ತಾಯಿ ಸೀತಾ ತಾನು ಅವರೊಂದಿಗೆ ಫೋನ್ ನಲ್ಲಿ ಹಾಗೇ ಮಾತನಾಡಬಾರದಿತ್ತು!  ಯಾಕೆ ಕೋಪವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಅಂದುಕೊಳ್ಳುತ್ತಾಳೆ.

ಮರುದಿನ ಸಿಹಿ ಮನೆಯಲ್ಲಿ ಶಾಲೆ, ಆಫೀಸ್ ಗೆ ಹೋಗುವ ಸಂಭ್ರಮ. ಆದರೆ ಗ್ಯಾಸ್ ಖಾಲಿಯಾಗಿ, ತಿಂಡಿ ಇದ್ದಿದ್ದರಲ್ಲಿಯೇ ಸಂಬಾಳಿಸಿಕೊಂಡು ಹೋಗುವ ಅಮ್ಮ, ಮಗಳ ಭಾಂದವ್ಯ ಎಲ್ಲರ ಮನಸೆಳೆಯುತ್ತದೆ. ಇನ್ನು ತನ್ನ ಮನಗೆದ್ದಿದ್ದ ಶ್ರೀರಾಮನಿಗೆ, ಸೀತಮ್ಮನ ಕೈಯಲ್ಲಿ ಹಾರ್ಟ್ ಕೊಟ್ಟು ಕಳುಹಿಸಿದ್ದಾಳೆ ಸಿಹಿ. ಆದರೆ ಅಮ್ಮನಿಗೆ ಆಫೀಸ್​ಗೆ ಹೋದಾಗ ಮ್ಯಾನೇಜರ್ ಚರಣ್​ ಡಿಯಿಂದ ಮಂಗಳಾರತಿ.

ಇದನ್ನೂ ಓದಿ: ‘ಸೀತಾ ರಾಮ’ ಧಾರಾವಾಹಿ ಆರಂಭಕ್ಕೂ ಮೊದಲು ಸಖತ್ ಕ್ಯೂಟ್ ಲುಕ್​ನಲ್ಲಿ ಮಿಂಚಿದ ವೈಷ್ಣವಿ ಗೌಡ

ಹೋಗುವಾಗಲೇ ತಡವಾದ್ದರಿಂದ ದೊಡ್ಡ ಬಾಸ್ ಆಫೀಸಿಗೆ ಬರುತ್ತಾರೆ ಎಂಬ ಸುಳಿವು ಸೀತಾಗೆ ಇರಲಿಲ್ಲ. ಬಾಸ್ ಬಂದಾಗ ಏನು ಮಾತನಾಡಬೇಕು ಎಂಬುದನ್ನು ಮ್ಯಾನೇಜರ್ ಹೇಳಿಕೊಟ್ಟಿದ್ದ. ಆದರೆ ಸೀತಾ ಆಗ ಇರಲಿಲ್ಲ. ದೇಸಾಯಿ ಮನೆಯ ಹಿರಿ ತಲೆ  ಸೂರ್ಯ ಪ್ರಕಾಶ್ ಬಂದಾಗ, ಆತ ಕೇಳಿದ ಪ್ರಶ್ನೆಗೆಲ್ಲಾ ಸೀತಾ ಸತ್ಯವನ್ನೇ ಹೇಳುತ್ತಾಳೆ. ಆಕೆಯ ನಿಷ್ಠೆಗೆ ರಾಮ್ ಕೂಡ ಮನದಲ್ಲೇ ಮೆಚ್ಚುಗೆ ಸೂಚಿಸುತ್ತಾನೆ. ಆದರೆ ದೂರದಲ್ಲಿ ನಿಂತು ನೋಡುತ್ತಿದ್ದ ಭಾರ್ಗವಿ ಮಾತ್ರ ಸೀತಾ ಮಾತನಾಡುವುದನ್ನೇ ಆಲಿಸುತ್ತಿರುತ್ತಾಳೆ. ಸೀತಾ ಹೇಳಿರೋ ಸತ್ಯದಿಂದ ಭಾರ್ಗವಿಯ ಮೋಸ ಬಯಲಾಗುತ್ತಾ? ಅಥವಾ ಭಾರ್ಗವಿ ಕೆಂಗಣ್ಣಿಗೆ  ಸೀತಾ ಗುರಿಯಾಗುತ್ತಾಳಾ? ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us