‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 31: ಹಬ್ಬದ ಊಟಕ್ಕೆ ಫ್ರೆಂಡ್ಗಾಗಿ ಕಾದು ಕುಳಿತ ಸಿಹಿಗೆ, ಶ್ರೀರಾಮ ಬೇಸರ ಮಾಡಲು ಇಷ್ಟ ಪಡದೇ ಅವಳಿಗಾಗಿ ಬರುತ್ತಾನೆ. ಆದರೆ ಮನೆಯಲ್ಲಿಯೇ ಹಬ್ಬದ ಊಟ ಮಾಡಿ ಬಂದವನಿಗೆ ಮತ್ತೊಮ್ಮೆ ಊಟ ಮಾಡುವುದು ಕಷ್ಟವಾದರೂ ಸಿಹಿಗಾಗಿ ಒಪ್ಪಿಕೊಳ್ಳುತ್ತಾನೆ. ತನ್ನ ಫ್ರೆಂಡ್ಗಾಗಿ ಅವಳೇ ಕೈ ತುತ್ತು ಮಾಡಿ ತಿನ್ನಿಸುತ್ತಾಳೆ. ಅವಳ ಪ್ರೀತಿಗೆ ಶ್ರೀರಾಮನೇ ಕರಗಿ ಹೋಗುತ್ತಾನೆ. ಇನ್ನು ಹಬ್ಬದ ಸಂಭ್ರಮ ಹೆಚ್ಚಿಸಲು ಎಲ್ಲರೂ ಸೇರಿ ಅಂತ್ಯಾಕ್ಷರಿ ಆಡುತ್ತಾರೆ. ಬಳಿಕ ರಾಮನಿಗೆ ಅಶೋಕನ ಫೋನ್ ಬಂದು ಮನೆಗೆ ಹೊರಡುತ್ತಾನೆ. ಅವನ ಗುಣವನ್ನು ನೋಡಿ ಅಜ್ಜಿ, ತಾತ ಅವನ ಗುಣಗಾನ ಮಾಡುತ್ತಾರೆ.
ಇನ್ನು ರುದ್ರ ಪ್ರತಾಪ, ಸೀತಾ ಬಳಿ ಮಾತನಾಡಲು ಒಂದು ನೆಪ ಹುಡುಕಿ ಫೋನ್ ಮಾಡಿ ತನ್ನ ಆಫೀಸ್ಗೆ ಬರುವಂತೆ ಹೇಳುತ್ತಾಳೆ. ಆದರೆ ಸಿಹಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತೀನಿ ಎಂದು ಹೇಳಿದ್ದ ಸೀತಾ ಆರ್.ಪಿಯ ಮೋಸಕ್ಕೆ ಕತ್ತು ತೂಗಿಸುತ್ತಾಳೆ. ಮಗಳಿಗೆ ಬೇಸರ ಮಾಡಲು ಇಷ್ಟವಿಲ್ಲದೇ ಪ್ಲಾನ್ನಲ್ಲಿ ಸ್ವಲ್ಪ ಬದಲಾವಣೆ ಮಾಡಿ ಸಿಹಿಯನ್ನು ತನ್ನ ಜೊತೆಗೆ ಕರೆದುಕೊಂಡು ಹೋಗುತ್ತಾಳೆ.
ಇದನ್ನೂ ಓದಿ: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?
ಇನ್ನು, ರಾಮ್ ಮನೆಯವರ ಮಧ್ಯೆ ಇರುವ ಗೊಂದಲ ಪರಿಹರಿಸಿ, ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಬೇಕು ಎಂದು ಅಶೋಕ್ ಬಳಿ ಹೇಳುತ್ತಾನೆ. ಮನೆಯ ಕೆಲವು ವಿಚಾರ ಅಶೋಕ್ನಿಗೆ ಗೊತ್ತಿದ್ದರೂ ಹೇಳಿಕೊಳ್ಳಲಾಗದ ಪರಿಸ್ಥಿತಿಯಲ್ಲಿರುತ್ತಾನೆ. ರಾಮನಿಗೆ ಸೀತಾ ಅವರು ಇರುವ ವಠಾರದ ಜನರ ಅವರ ಬಾಂಧವ್ಯ ನೋಡಿ ತಮ್ಮ ಮನೆಯಲ್ಲಿ ಆ ಸಂತೋಷವಿಲ್ಲವಲ್ಲ ಎಂದುಕೊಳ್ಳುತ್ತಾನೆ. ಇದಕ್ಕೆಲ್ಲಾ ಪರಿಹಾರ ನೀನು ಮದುವೆಯಾಗುವುದು ಎಂದು ಅಶೋಕ್ ಹೇಳುತ್ತಾನೆ. ಎಲ್ಲೇ ಹೋದರೂ ಅದೇ ವಿಷಯಕ್ಕೆ ಬರುವುದನ್ನು ನೋಡಿ ರಾಮನಿಗೆ ಬೇಸರವಾಗುತ್ತದೆ. ಜೊತೆಗೆ ಮಲೇಷ್ಯಾದಿಂದ ಇಂಡಿಯಾಗೆ ಬರುವಾಗ ತಾನು ಹೇಳಿದ ಮಾತನ್ನು ಅಶೋಕ್ ನೆನಪಿಸುತ್ತಾನೆ. ರಾಮನಿಗೆ ಭಾರತಕ್ಕೆ ಬಂದಾಗ ಮೊದಲು ಕಾಣುವ ಹುಡುಗಿಯ ಮೇಲೆ ಪ್ರೀತಿಯಾಗುತ್ತದೆ ಎಂದಿರುತ್ತಾನೆ. ಹಾಗೆ ಮೊದಲು ನೋಡಿದ ಹುಡುಗಿ ಸೀತಾ ಆಗಿರುವುದರಿಂದ ಅವಳ ಬಗ್ಗೆ ಮತ್ತು ಸಿಹಿಯ ಬಗ್ಗೆ ಮಾತನಾಡುತ್ತಾನೆ. ದೇವರೆ ನಿಮ್ಮನ್ನು ಒಂದು ಮಾಡಲು ಪ್ರಯತ್ನಿಸುತ್ತಿದ್ದಾನೆ ಎನ್ನುತ್ತಾನೆ. ಇದೆಲ್ಲವೂ ರಾಮನ ಕಿವಿಗೆ ಮಾತ್ರ ಬೀಳುವುದಿಲ್ಲ.
ಇದನ್ನೂ ಓದಿ: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?
ರಾಮ್, ಅಶೋಕ್ ಆಫೀಸ್ನಲ್ಲಿ ಇರುವಾಗಲೇ ಸಿಹಿ, ಸೀತಾ ಬಂದಿರುತ್ತಾರೆ. ಫ್ರೆಂಡ್ ನೋಡಿದ ಸಿಹಿ, ಬಾಸ್ ಬಳಿ ರಾಮನನ್ನು ನನ್ನ ಜೊತೆ ಕಳಿಸಿಕೊಡಿ ಎಂದು ಕೇಳುತ್ತಾಳೆ. ಅದಕ್ಕೆ ಅಶೋಕ್ನಿಂದ ಒಪ್ಪಿಗೆಯೂ ಸಿಗುತ್ತದೆ. ಮೂವರು ಸೇರಿ ಸುತ್ತಾಡಲು ಹೊರಡುತ್ತಾರೆ. ಅಶೋಕ್ ಆಡಿದ ಮಾತು ರಾಮ್ ಬದಲಾವಾಗುವಂತೆ ಮಾಡುತ್ತಾ? ಕಾದು ನೋಡೋಣ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 pm, Mon, 28 August 23