AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?

Seetha Raama Serial: ಸೀತಾಳ ಮನೆ ಬಿಡಿಸಿಕೊಳ್ಳಲು ರಾಮ್ ಅಡ್ವಾನ್ಸ್ ಸ್ಯಾಲರಿ ಬಗ್ಗೆ ಹೇಳಿದರೂ ಅವಳು ಮಾತ್ರ ಅದರಿಂದ ಏನು ಉಪಯೋಗ ಆಗಲ್ಲ ಎನ್ನುತ್ತಾಳೆ. ಮುಂದೆ ಏನು ಮಾಡಬೇಕೆಂದು ತಿಳಿಯದ ರಾಮ್ ಮೌನಕ್ಕೆ ಜಾರುತ್ತಾನೆ. ಸೀತಾಳೆ ಅವನಿಗೆ ಸಣ್ಣದೊಂದು ಬಾಡಿಗೆ ಮನೆ ನೋಡುತ್ತೀರಾ ಎಂದು ಕೇಳುತ್ತಾಳೆ. ಅದಕ್ಕೆ ಒಪ್ಪಿಗೆ ಸೂಚಿಸಿದ ಶ್ರೀರಾಮ್ ಮನಸ್ಸಿಲ್ಲದೇ ಒಪ್ಪಿಗೆ ಸೂಚಿಸುತ್ತಾನೆ. ಮನೆ ಬಿಡಿಸಿಕೊಳ್ಳಲು ರಾಮ್ ಹೇಗೆ ಸಹಾಯ ಮಾಡಬಹುದು? ಕಾದು ನೋಡೋಣ.

Seetha Raama Serial: ಸೀತಾ ತನ್ನ ಮನೆ ಮಾರಾಟ ಮಾಡುವ ನಿರ್ಧಾರವನ್ನು ಬದಲಿಸುತ್ತಾಳಾ? ಶ್ರೀರಾಮನ ಮುಂದಿನ ನಡೆಯೇನು?
ಸೀತಾ ರಾಮ ಧಾರಾವಾಹಿ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 24, 2023 | 11:00 PM

Share

ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 29: ಸಿಹಿ ಅಜ್ಜಿ, ತಾತನ ಮನೆಯಲ್ಲಿ ವರಮಹಾಲಕ್ಷ್ಮೀ ಪೂಜೆ ತಯಾರಿ ನಡೆಯುತ್ತಿದೆ. ಜೊತೆಗೆ ಸಿಹಿ, ಹಬ್ಬದ ಬಗ್ಗೆ ಅನೇಕ ಪ್ರಶ್ನೆಗಳನ್ನು ಅಜ್ಜಿ ಬಳಿ ಕೇಳಿ ತಿಳಿದುಕೊಳ್ಳುತ್ತಾಳೆ. ಲಕ್ಷ್ಮೀಯನ್ನು ಯಾರು ಆರಾಧಿಸುತ್ತಾರೋ ಅವರಿಗೆ ಒಳ್ಳೆಯದಾಗುತ್ತದೆ ಎಂಬ ಅಜ್ಜಿ ಮಾತಿಗೆ, ಸಿಹಿ, ಅಪ್ಪ ಬೇಗ ಬರುವುದಾಗಿ ಕೇಳಬಹುದಿತ್ತು ಅಂದುಕೊಳ್ಳುತ್ತಾಳೆ. ಆದರೆ ಸೀತಾ ಮಾತ್ರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮನೆಗೆ ಬಂದ ಅವಳ ಗೆಳತಿ ಸೀತಾ ಕೂಡ ನಿನ್ನ ಜೀವನದಲ್ಲಿ ಆದದ್ದನ್ನು ನನ್ನ ಬಳಿ ಹಂಚಿಕೋ ಎನ್ನುತ್ತಾಳೆ. ಆದರೆ ಇದಕ್ಕೆಲ್ಲಾ ಸೀತಾಳದ್ದು ಮೌನವೇ ಉತ್ತರ.

ಇನ್ನು ಮನೆ ಬಿಡಿಸಿಕೊಳ್ಳುವ ವಿಚಾರವಾಗಿ ರಾಮ್, ಸೀತಾಳಿಗೆ ಫೋನ್ ಮಾಡುತ್ತಾನೆ. ಅಡ್ವಾನ್ಸ್ ಸ್ಯಾಲರಿ ಬಗ್ಗೆ ರಾಮ್ ಹೇಳಿದರೂ ಅದರಿಂದ ಮನೆ ಸಾಲ ತಿರುವುದಿಲ್ಲ ಎನ್ನುತ್ತಾಳೆ. ಅವಳ ನಿರ್ಧಾರ ಮಾತ್ರ ಮನೆ ಮಾರುವುದಾಗಿರುತ್ತದೆ. ಈ ಮಾತನ್ನು ಸಿಹಿಗೂ ಅರ್ಥ ಮಾಡಿಸುತ್ತೇನೆ, ಅವಳಿಗೂ ಈ ಕಷ್ಟ ಅರ್ಥವಾಗುತ್ತೆ ಎಂದು ರಾಮ್ ಬಳಿ ಸೀತಾ ಹೇಳುತ್ತಾಳೆ. ಅವನ ಬಳಿಯೇ ಬಾಡಿಗೆ ಮನೆಯನ್ನೂ ಹುಡುಕಲು ಹೇಳುತ್ತಾಳೆ. ಸಣ್ಣದಾದರೂ ತೊಂದರೆ ಇಲ್ಲ ಚಿಕ್ಕ ಮನೆ ಹುಡುಕಿ ಎನ್ನುತ್ತಾಳೆ. ಮನಸ್ಸಿಲ್ಲದಿದ್ದರೂ ಕಷ್ಟ ಪಟ್ಟು ರಾಮ್ ಅದಕ್ಕೆ ಒಪ್ಪಿಗೆ ಸೂಚಿಸುತ್ತಾನೆ.

ಅಜ್ಜಿ ಹೇಳಿದ ಮಾತನ್ನು ಸರಿಯಾಗಿ ಕೇಳಿಸಿಕೊಂಡ ಸಿಹಿ, ವರಮಹಾಲಕ್ಷ್ಮೀ ಹಬ್ಬಕ್ಕೆ ಬೆಳಿಗ್ಗೆ ಬೇಗ ಎದ್ದು ತಯಾರಾಗಿ, ಅಮ್ಮನನ್ನು ರೆಡಿ ಮಾಡುತ್ತಾಳೆ. ಇನ್ನು ಒಬ್ಬರಿಗೊಬ್ಬರು ದೃಷ್ಟಿಯನ್ನು ತೆಗೆದು ಖುಷಿ ಹಂಚಿಕೊಳ್ಳುತ್ತಾರೆ. ಅಜ್ಜಿ ಮನೆಯ ಪೂಜೆಗೆ ಅಮ್ಮ ಮಗಳು ಹಾಜರಿ ಹಾಕುತ್ತಾರೆ. ಅಲ್ಲಿ ಬಂದವರೆಲ್ಲಾ ಅರಿಶಿನ, ಕುಂಕುಮ ಕೊಡುವುದನ್ನು ನೋಡಿ ತನ್ನ ಸೀತಮ್ಮನಿಗೂ ಕುಂಕುಮ ಕೊಡಿ ಎಂದು ಸಿಹಿ ಕೇಳುತ್ತಾಳೆ. ಆದರೆ ಅಲ್ಲಿದ್ದವರು ಮುತ್ತೈದೆಯರಿಗೆ ಮಾತ್ರ ಇದನ್ನು ಕೊಡಬೇಕು ಎನ್ನುತ್ತಾರೆ. ಅವಳ ಗಂಡ ಎಲ್ಲಿದ್ದಾನೋ ಏನೋ ಎಂದು ಮಾತನಾಡಿಕೊಳ್ಳುತ್ತಾರೆ. ಈ ಮಾತು ಸೀತಾಳನ್ನು ನೋಯಿಸುತ್ತದೆ. ಮುಂದೇನಾಗಬಹುದು? ಕಾದು ನೋಡಬೇಕಾಗಿದೆ.

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​