AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?

Seetha Raama Serial: ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?

Seetha Raama Serial: ಸಿಹಿಯ ಆಸೆಗೆ ತಣ್ಣೀರೆರಚಿದ ಸೀತಾ, ಮಗಳ ಮುನಿಸಿಗೆ ಕಾರಣವಾಗುತ್ತಾಳಾ?
ಸೀತಾ ರಾಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Aug 22, 2023 | 10:38 PM

Share

‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 27: ಸಿಹಿಯ ಅಜ್ಜಿ, ತಾತನ ಮನೆಯಲ್ಲಿ ವಾಷಿಂಗ್ ಮಿಷನ್ ಪೂಜೆ ಸರಾಗವಾಗಿ ನಡೆಯುತ್ತದೆ. ಆದರೆ ಸಿಹಿ, ರಾಮ್ ಹೆಲಿಕೊಪ್ಟರ್ ನಲ್ಲಿ ಹೋಗಲು ಮಾತ್ರ ಸೀತಾ ಒಪ್ಪಿಗೆ ನೀಡುವುದಿಲ್ಲ. ಅವಳ ಮಾತು ಅಂತಿಮವಾದ್ದರಿಂದ ಸಿಹಿಗೂ, ರಾಮನಿಗೂ ಏನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸೀತಾ ಮಾತ್ರ ಅವರಿಬ್ಬರ ಯಾವ ಮಾತಿಗೂ ಒಪ್ಪಿಗೆ ನೀಡುವುದಿಲ್ಲ. ಇದೆಲ್ಲದರ ಮಧ್ಯೆ ರಾಮ್ ಟಿಫನ್ ಬಾಕ್ಸ್ ತರದೆ ಇದ್ದ ವಿಚಾರವೂ ಬರುತ್ತದೆ. ಆಗ ರಾಮ್ ನಾನು ಅಂಗಡಿ ಅಂಗಡಿ ಸುತ್ತಿ ತಂದಿರುವ ಬಾಕ್ಸ್ ತಗೋಳಿ ಅಂದಾಗ ಸೀತಾ ರಾಮನ ಬಳಿ ಕ್ಷಮೆ ಕೇಳಿ ಅದು ನನ್ನ ಅಮ್ಮ ನನಗೆ ನೀಡಿದ್ದು ಹಾಗಾಗಿ ಅದೇ ನನಗೆ ಬೇಕು ಎನ್ನುತ್ತಾಳೆ. ಸೀತಾ ಯಾಕೆ ಆ ಬಾಕ್ಸ್ ಮೇಲೆ ಕಾಳಜಿ ತೋರುತ್ತಿದ್ದರು ಎಂಬುದು ರಾಮನಿಗೆ ಅರ್ಥವಾಗುತ್ತದೆ. ಕೆಲವೊಂದು ವಸ್ತುಗಳು ಬರೀ ವಸ್ತುಗಳಾಗಿರಲ್ಲ ಅದಕ್ಕೆ ನಾವು ಜೀವ ತುಂಬಿರುತ್ತಿವಲ್ಲ ಹಾಗೇ ಇದು.

ರಾಮನಿಗೆ ಸಹಾಯ ಮಾಡಲು ಬಂದಿದ್ದ ಅಶೋಕನಿಗೆ, ಸೀತಾಳ ಗೆಳತಿ ಗಂಟು ಬೀಳುತ್ತಾಳೆ. ಚಹಾ ಹೇಗೆ ಕುಡಿಯಬೇಕು ಎನ್ನುವುದನ್ನು ಹೇಳಿ ಕೊಡುತ್ತಾಳೆ. ಹೇಗೋ ಅವಳಿನಿಂದ ತಪ್ಪಿಸಿಕೊಂಡು ಹೋಗುತ್ತಾನೆ. ರಾಮನಿಗೆ ಫೋನ್ ಮಾಡಿದರೆ ಅವನು ಹೇಳುವ ಕಥೆ, ಅಶೋಕ್ ನನ್ನು ಹೈರಾಣಗೊಳಿಸುತ್ತದೆ.

ಇದನ್ನೂ ಓದಿ:ಎರಡನೇ ಸ್ಥಾನಕ್ಕೆ ಜಿಗಿದ ‘ಸೀತಾ ರಾಮ’; ಟಿಆರ್​ಪಿ ರೇಸ್​ನಲ್ಲಿ ಯಾವ ಧಾರಾವಾಹಿಗೆ ಯಾವ ಸ್ಥಾನ? ಇಲ್ಲಿದೆ ವಿವರ

ಹೆಲಿಕೊಪ್ಟರ್ ಹಾರಾಡಲು ರೆಡಿ ಇದ್ದರೂ ಸೀತಾ ಮಾತ್ರ ಜಪ್ಪಯ್ಯ ಎಂದರೂ ಓಕೆ ಎನ್ನುವುದಿಲ್ಲ. ಸಿಹಿ ಮತ್ತು ರಾಮ್ ನಾನಾ ರೀತಿ ಪ್ಲಾನ್ ಮಾಡಿದರೂ ಸೀತಾ ಮುಂದೆ ಏನು ಉಪಯೋಗಕ್ಕೆ ಬರುವುದಿಲ್ಲ. ರಾಮ್ ಹೇಳಿದ ಸುಳ್ಳನ್ನು ಕೂಡ ಸೀತಾ ಒಪ್ಪುವುದಿಲ್ಲ. ಬದಲಾಗಿ ರಾಮನಿಗೆ ನನ್ನ ಮಗಳಿಗೆ ಹೀಗೆಲ್ಲಾ ಪ್ರಾಮಿಸ್ ಮಾಡಬೇಡಿ ಎನ್ನುತ್ತಾಳೆ. ಹಾಗಾದರೆ ಮುಂದೇನಾಗಬಹುದು?

Follow Us
ಪ್ರೀತಿ ಭಟ್​, ಗುಣವಂತೆ
ಪ್ರೀತಿ ಭಟ್​, ಗುಣವಂತೆ

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂಡಿಗೋ ವಿಮಾನದಲ್ಲಿ ಪವರ್ ಬ್ಯಾಂಕ್ ಸ್ಪೋಟ
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ಸಿಎಂ ಡಿಕೆ ಶಿವಕುಮಾರ್ ಉಡುಪಿ, ಮಂಗಳೂರು ಪ್ರವಾಸ ರದ್ದು
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ಇಂದು ನವರಾತ್ರಿಯ ಎರಡನೇ ದಿನ; ಬ್ರಹ್ಮಚಾರಿಣಿ ದೇವಿಯ ಪೂಜೆಯಿಂದ ಶುಭಫಲ
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ದಸರಾ ಅಂದವನ್ನು ಇಮ್ಮಡಿಗೊಳಿಸಿದ ಗೋಲ್ಡನ್‌ ಟೆಂಪಲ್‌ ಮಂಟಪ!
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್​ ಆಪರೇಷನ್​ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?