Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ.  ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

Seetha Raama Serial: ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್? ಸೀತಾಳನ್ನು ಕಾಪಾಡುತ್ತಾನಾ?
ವೈಷ್ಣವಿ
Edited By:

Updated on: Sep 07, 2023 | 7:59 AM

‘ಸೀತಾ ರಾಮ’ (Seetha Raama Serial) ಧಾರಾವಾಹಿ (Serial) ಸಂಚಿಕೆ 38: ಸೀತಾ ಮತ್ತು ರಾಮ ಬಾಡಿಗೆಗಾಗಿ ಮನೆ ನೋಡಲು ಹೋಗುತ್ತಾರೆ. ಆದರೆ  ಸೀತಾ ಒಬ್ಬಳೇ ಎಂಬ ಕಾರಣಕ್ಕಾಗಿ ಮನೆ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಜೊತೆಗೆ ಅವಮಾನ ಮಾಡುತ್ತಾರೆ. ಇದನ್ನೆಲ್ಲಾ ನೋಡಿದ ರಾಮ, ಸೀತಾ ಪರಿಸ್ಥಿತಿ ನೋಡಿ ಮರುಗುತ್ತಾನೆ. ಅದರ ಜೊತೆ ಬದುಕಿನ ಬಗ್ಗೆ ಸೀತಾ ಆಡುತ್ತಿರುವ ಮಾತು ಕೇಳಿ ಖುಷಿ ಪಡುತ್ತಾನೆ. ಬಳಿಕ ಮನೆಯವರು ಕೇಳುವ ಪ್ರಶ್ನೆಗಳಿಗೆ ಬೇಸತ್ತ ರಾಮ್, ಸೀತಾಳ ಗಂಡ ನಾನೇ ಎನ್ನುತ್ತಾನೆ. ಅದನ್ನು ಕೇಳಿ ಸೀತಾ ಕೂಡ ರಾಮ್ ನಿಗೆ ಬೈದು, ನನ್ನ ಹಿಂದೆ ಬರಬೇಡಿ ಎಂದು ಹೋಗುತ್ತಾಳೆ.

ಸೀತಾಳ ಕಷ್ಟವನ್ನು ತನ್ನ ಉಪಯೋಗಕ್ಕಾಗಿ ಬಳಸಿಕೊಳ್ಳುತ್ತಿರುವ ಲಾಯರ್ ರುದ್ರ ಪ್ರತಾಪ ತಾನೇ ಖುದ್ದಾಗಿ ಮನೆ ನೋಡಿದ್ದಾಗಿ, ಸೀತಾಳನ್ನು ಆಹ್ವಾನಿಸುತ್ತಾನೆ. ಏನೂ ಅರಿಯದ ಸೀತಾ ಒಬ್ಬಳೇ ರುದ್ರ ಪ್ರತಾಪ ಹೇಳಿದ ಜಾಗಕ್ಕೆ ಬರುತ್ತಾಳೆ. ಅವಳು ಬರುತ್ತಿದ್ದಂತೆ ತನ್ನ ನಾಟಕ ಶುರು ಮಾಡಿ, ಈ ಮನೆಗೆ ನೀವು ಬಾಡಿಗೆ ಕೊಡದಿದ್ದರೂ ಪರವಾಗಿಲ್ಲ ಎನ್ನುತ್ತಾನೆ. ಅವರು ಆಡುವ ಮಾತು ಮತ್ತು ನಡೆದುಕೊಳ್ಳುವ ರೀತಿ ನೋಡಿ ಸೀತಾಳಿಗೆ ಭಯವಾಗುತ್ತಿದ್ದರೂ ಏನು ಮಾಡಲಾಗದ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತಾಳೆ.

ಇದನ್ನೂ ಓದಿ: ಎರಡನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ; ಹೆಚ್ಚಿತು ‘ಗೀತಾ’ ಸೀರಿಯಲ್ ಟಿಆರ್​ಪಿ

ರುದ್ರಪ್ರತಾಪನ ಸಂಚಿಗೆ ಸೀತಾ ಬಲಿಯಾಗುವಷ್ಟರಲ್ಲಿ ರಾಮ್ ಬರುತ್ತಾನೆ. ಸೀತಾ ಬೈದು ಕಳಿಸಿದ್ದರೂ ಅವಳನ್ನು ಹುಡುಕಿ ಬಂದ ರಾಮನನ್ನು ನೋಡಿ ಅವಳಿಗೆ ಮತ್ತೆ ಜೀವ ಬಂದಂತಾಗುತ್ತದೆ. ರಾಮನು ಕೂಡ ಸೀತಾ ಬಂದ ಮನೆಗೆ ಬರುತ್ತಾನೆ ಎಂದು ನೀರಿಕ್ಷಿಸದ ರುದ್ರ ಪ್ರತಾಪ ಅವನನ್ನು ನೋಡಿ ಕಂಗಾಲಾಗುತ್ತಾನೆ. ರುದ್ರ ಪ್ರತಾಪನ ಸಂಚನ್ನು ಅರಿತ ರಾಮ್ ಸೀತಾಳನ್ನು ಕಾಪಾಡುತ್ತಾನಾ? ಕಾದು ನೋಡೋಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ