AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಸೀರಿಯಲ್​ಗೆ ಒಳ್ಳೆಯ ಟಿಆರ್​ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ

‘ಸೀತಾ ರಾಮ’ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರಧಾರಿಗಳಾದ ಸೀತಾ ಹಾಗೂ ರಾಮ್​ ಮದುವೆ ನೆರವೇರಿದೆ. ಇದಕ್ಕಾಗಿ ಭರ್ಜರಿ ಸೆಟ್ ಹಾಕಲಾಗಿದೆ. ಅದ್ದೂರಿ ಮದುವೆ ಸಮಾರಂಭಕ್ಕೆ ಇಡೀ ಕರ್ನಾಟಕ ಸಾಕ್ಷಿ ಆಗಿದೆ. ಹೀಗಾಗಿ ಧಾರಾವಾಹಿಯ ಟಿಆರ್​ಪಿ ಹೆಚ್ಚಿದೆ.

‘ಸೀತಾ ರಾಮ’ ಸೀರಿಯಲ್​ಗೆ ಒಳ್ಳೆಯ ಟಿಆರ್​ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ
ಸೀತಾ ರಾಮ
ರಾಜೇಶ್ ದುಗ್ಗುಮನೆ
|

Updated on:Jul 18, 2024 | 2:28 PM

Share

ಕನ್ನಡದಲ್ಲಿ ಹೊಸ ಹೊಸ ಕಥೆಗಳೊಂದಿಗೆ ಧಾರಾವಾಹಿಗಳು ಬರುತ್ತಿವೆ. ಎಲ್ಲಾ ಧಾರಾವಾಹಿಗಳಿಗೂ ಭವ್ಯ ಸ್ವಾಗತ ಸಿಗೋದಿಲ್ಲ. ಇತ್ತೀಚೆಗೆ ಆರಂಭ ಆದ ಧಾರಾವಾಹಿಗಳಿಗೆ ಅಂದುಕೊಂಡ ಮಟ್ಟದ ಟಿಆರ್​ಪಿ ಸಿಕ್ಕಿಲ್ಲ. ಇನ್ನು ‘ಸೀತಾ ರಾಮ’ ಧಾರಾವಾಹಿಯಲ್ಲಿ ಮದುವೆ ಸೀಸನ್. ಹೀಗಾಗಿ, ಈ ಧಾರಾವಾಹಿಯ ಟಿಆರ್​ಪಿಯಲ್ಲಿ ಏರಿಕೆ ಕಂಡಿದೆ. ‘ಬ್ರಹ್ಮಗಂಟು’ ಧಾರಾವಾಹಿಯಲ್ಲೂ ಮದುವೆ ಜರುಗುತ್ತಿದ್ದು, ಅದರ ಟಿಆರ್​ಪಿಯಲ್ಲಿ ಏರಿಕೆ ಆಗಿದೆ.

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಈ ಬಾರಿ ಅತಿ ಹೆಚ್ಚು ಟಿಆರ್​ಪಿ ಪಡೆದು ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ವಾರ ಈ ಧಾರಾವಾಹಿ ಹಾಗೂ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಮಧ್ಯೆ ಸ್ಪರ್ಧೆ ಏರ್ಪಟ್ಟಿತ್ತು. ಈಗ ಕೆಲವೇ ಪಾಯಿಂಟ್​ಗಳ ಅಂತರದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಮೊದಲ ಸ್ಥಾನ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ‘ಶ್ರಾವಣಿ ಸುಬ್ರಮಣ್ಯ’ ಧಾರಾವಾಹಿ ಇದೆ. ಈ ಧಾರಾವಾಹಿಯನ್ನು ಜನರು ಮೆಚ್ಚಿಕೊಂಡಿದ್ದಾರೆ.

‘ಲಕ್ಷ್ಮೀ ನಿವಾಸ’ ಧಾರಾವಾಹಿಗೆ ಈ ಬಾರಿ ಮೂರನೇ ಸ್ಥಾನ ಸಿಕ್ಕಿದೆ. ಈ ಧಾರಾವಾಹಿಯನ್ನು ಜನರು ಹೆಚ್ಚು ವೀಕ್ಷಿಸುತ್ತಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ‘ಸೀತಾ ರಾಮ’ ಧಾರಾವಾಹಿ ಇದೆ. ಈ ಧಾರಾವಾಹಿ ಕೂಡ ಒಳ್ಳೆಯ ಟಿಆರ್​ಪಿ ಪಡೆದುಕೊಂಡಿದೆ. ಇದಕ್ಕೆ ಕಾರಣ ಆಗಿರೋದು ಸೀತಾ ಹಾಗೂ ರಾಮನ ಮದುವೆ. ನಗರ ಭಾಗದಲ್ಲಿ ಈ ಧಾರಾವಾಹಿ ಒಂದನೇ ಸ್ಥಾನ ಪಡೆದುಕೊಂಡಿದೆ. ಮದುವೆ ಬಳಿಕ ಟ್ವಿಸ್ಟ್​ಗಳು ಸಿಕ್ಕರೆ ಧಾರಾವಾಹಿ ಟಿಆರ್​ಪಿ ಮತ್ತಷ್ಟು ಹೆಚ್ಚಲಿದೆ.

ಇದನ್ನೂ ಓದಿ: ‘ಸೀತಾ ರಾಮ’ ಟಿಆರ್​ಪಿಯಲ್ಲಿ ಭರ್ಜರಿ ಏರಿಕೆ; ಉಳಿದ ಧಾರಾವಾಹಿಗಳ ಕಥೆ ಏನು?

ಐದನೇ ಸ್ಥಾನದಲ್ಲಿ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿ ಇದೆ. ಈ ಧಾರಾವಾಹಿ ಹಲವು ದಿನಗಳಿಂದ ಟಾಪ್ ಐದರಲ್ಲಿ ಬಂದಿರಲಿಲ್ಲ. ಈ ಧಾರಾವಾಹಿಯನ್ನು ಜನರು ಹೆಚ್ಚು ಇಷ್ಟಪಟ್ಟಿದ್ದಾರೆ. ಹೊಸ ಧಾರಾವಾಹಿಗಳಿಗೆ ಅಷ್ಟಾಗಿ ಟಿಆರ್​ಪಿ ಸಿಗುತ್ತಿಲ್ಲ. ‘ಕಲ್ಯಾಣಿ’ ಧಾರಾವಾಹಿ ಹಾಗೂ ‘ನನ್ನ ದೇವ್ರು’ 3 ಅಂಕದ ಟಿಆರ್​ಪಿ ಪಡೆಯಲು ಹರಸಾಹ ಪಟ್ಟಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:25 pm, Thu, 18 July 24

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More