
‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBk 12) ಸ್ಪಂದನಾ ಹಾಗೂ ಗಿಲ್ಲಿ ನಟ ಫ್ರೆಂಡ್ಶಿಪ್ ಗಮನ ಸೆಳೆದಿದೆ. ‘ಕಳ್ಳ ಪುಟ್ಟಿ’ ಎಂದು ಸ್ಪಂದನಾ ಅವರನ್ನು ಗಿಲ್ಲಿ ಪ್ರೀತಿಯಿಂದ ಕರೆಯುತ್ತಿದ್ದಾರೆ. ಗಿಲ್ಲಿ ಅವರು ಸ್ಪಂದನಾನ ಸಾಕಷ್ಟು ಗೌರವಿಸುತ್ತಾರೆ. ವಿಶೇಷ ಪ್ರೀತಿ ತೋರಿಸುತ್ತಾರೆ. ಆದರೆ, ಸ್ಪಂದನಾ ಅವರು ಗಿಲ್ಲಿ ವಿರುದ್ಧವೇ ಈಗ ಮಸಲತ್ತು ಮಾಡುತ್ತಿದ್ದಾರೆ. ಧನುಷ್ ಜೊತೆ ಸೇರಿಕೊಂಡು ಗಿಲ್ಲಿ ವಿರುದ್ಧ ಮಾತನಾಡುತ್ತಿದ್ದಾರೆ. ಇದು ವೀಕ್ಷಕರ ಗಮನಕ್ಕೆ ಬಂದಿದೆ.
ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಉತ್ತಮವಾಗಿ ಆಟ ಆಡುತ್ತಿದ್ದಾರೆ. ಅವರು ಗೆಲ್ಲೋ ಕುದುರೆ ಆಗಿದ್ದಾರೆ. ಈ ಕಾರಣದಿಂದಲೇ ಅನೇಕರು ಗಿಲ್ಲಿ ಸುತ್ತ ಸುತ್ತುತ್ತಿದ್ದಾರೆ. ಇನ್ನೂ ಕೆಲವರು ಗಿಲ್ಲಿಯನ್ನು ಎದುರು ಹಾಕಿಕೊಳ್ಳುತ್ತಿದ್ದಾರೆ. ಸ್ಪಂದನಾ ಇಷ್ಟು ದಿನ ಗಿಲ್ಲಿ ಜೊತೆ ಚೆನ್ನಾಗಿಯೇ ಇದ್ದು, ಈಗ ಅವರ ವಿರುದ್ಧವೇ ಮಸಲತ್ತು ಮಾಡುತ್ತಿದ್ದಾರೆ.
ಈ ಮೊದಲು ಸ್ಪಂದನಾ ಅವರು ರಕ್ಷಿತಾ ಶೆಟ್ಟಿ ಜೊತೆ ಒಳ್ಳೆಯ ರೀತಿಯಲ್ಲಿ ಇದ್ದರು. ಆದರೆ, ಇತ್ತೀಚೆಗೆ ಸ್ಪಂದನಾ ಅವರು ರಕ್ಷಿತಾ ಬಗ್ಗೆ ಅಸಮಧಾನ ಹೊರಹಾಕಿದ್ದರು. ‘ರಕ್ಷಿತಾ ಮುಗ್ಧೆ ಅಲ್ಲ. ಅವಳು ಪ್ಲ್ಯಾನ್ ಮಾಡಿಕೊಂಡು ಆಡುತ್ತಿದ್ದಾಳೆ’ ಎಂದು ಹೇಳಿದ್ದರು. ರಕ್ಷಿತಾ ಬೆನ್ನ ಹಿಂದೆ ನಿಂತು ಅನೇಕ ಬಾರಿ ಅವರು ಈ ರೀತಿಯ ಮಾತನ್ನು ಹೇಳಿದ್ದಾರೆ.
Serial gang fans gala kathe 😂😂..
so called fab 4😘😘😘#BBK12 pic.twitter.com/IazCwbnmzt— Raju-7777 (@DBOSS0718) November 19, 2025
ಈಗ ಗಿಲ್ಲಿ ಬಗ್ಗೆ ಮಾತನಾಡುತ್ತಿದ್ದಾರೆ. ಧನುಷ್ ಜೊತೆ ಸ್ಪಂದನಾ ಮಾತುಕತೆ ನಡೆಸಿದ್ದಾರೆ. ‘ಎಲ್ಲರೂ ಗಿಲ್ಲಿಯನ್ನು ಅವಾಯ್ಡ್ ಮಾಡಿದರೆ ಅವನು ದಾರಿಗೆ ಬರ್ತಾನೆ’ ಎಂದು ಧನುಷ್ ಹೇಳಿದರು. ‘ಏನೇ ಆದರೂ ಕಾವ್ಯಾ ಅವನನ್ನು ದೂರ ತಳ್ಳಲ್ಲ’ ಎಂದು ಸ್ಪಂದನಾ ಹೇಳಿದರು. ‘ಕಾವ್ಯಾಗೂ ಲಾಭ ಇದೆ’ ಎಂದು ಧನು ಹೇಳಿದರು. ಆಗ ಸ್ಪಂದನಾ ಅವರು, ‘ಇದು ಕಾವ್ಯಾಗೂ ಗೊತ್ತು ಎನಿಸುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ರೇಜಿಗೆ ಹುಟ್ಟಿಸಿದ ಅಶ್ವಿನಿ ಗೌಡ-ಜಾನ್ವಿ; ಅಸಮಾಧಾನ ಹೊರಹಾಕಿದ ಬಿಗ್ ಬಾಸ್
ಸ್ಪಂದನಾ ಅವರು ಈ ರೀತಿ ಬದಲಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ‘ಗಿಲ್ಲಿ ಇಲ್ಲ ಎಂದಿದ್ರೆ ನೀವು ಇಲ್ಲಿವರೆಗೆ ಬರುತ್ತಲೇ ಇರುತ್ತಿರಲಿಲ್ಲ, ಏರಿದ ಏಣಿಯನ್ನು ಒದೆಯಬೇಡಿ’ ಎಂದು ಅನೇಕರು ಕಿವಿಮಾತು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:55 am, Thu, 20 November 25