
ಕಿರುತೆರೆ ನಟಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಪಂದನಾ ಸೋಮಣ್ಣ ತಮ್ಮ ಮದುವೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ತಾವು ಮದುವೆಯಾಗಲಿರುವ ಹುಡುಗನ ಜೊತೆಗಿನ ಫೋಟೋ ಹಂಚಿಕೊಂಡಿದ್ದ ಸ್ಪಂದನಾ, ಅವರ ಮುಖವನ್ನು ಗೌಪ್ಯವಾಗಿಟ್ಟಿದ್ದರು. ಇದರಿಂದಾಗಿ, ಅವರು ಮದುವೆಯಾಗಲಿರುವ ವ್ಯಕ್ತಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೂರಜ್ ಇರಬಹುದು ಎಂದು ಅಭಿಮಾನಿಗಳು ಹಾಗೂ ನೆಟ್ಟಿಗರು ಊಹಿಸಿ, ಸೂರಜ್ ಅವರ ಫೋಟೋಗಳನ್ನು ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದರು. ಇದಕ್ಕೆ ಅವರ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಸ್ಪಂದನಾ ಅವರು ಪ್ಯಾರಿಸ್ಗೆ ತೆರಳಿದ್ದರು. ಅಲ್ಲಿನ ಐಫೆಲ್ ಟವರ್ ಎದುರು ಅವರು ಪೋಸ್ ಕೊಟ್ಟಿದ್ದರು. ಅವರ ಬಾಯ್ಫ್ರೆಂಡ್ ಬೆನ್ನು ಮಾತ್ರ ಕಾಣಿಸಿತ್ತು. ಹೀಗಾಗಿ, ಅಭಿಮಾನಿಗಳು ಬೇರೆ ಬೇರೆ ಸೆಲೆಬ್ರಿಟಿಗಳ ಹೆಸರನ್ನು ಹೇಳಿದ್ದರು. ಆದರೆ, ಅವರ್ಯಾರೂ ಅಲ್ಲ ಎನ್ನುತ್ತಾರೆ ಸ್ಪಂದನಾ. ಈ ವಿಷಯವನ್ನು ಅವರು ಶೀಘ್ರವೇ ರಿವೀಲ್ ಮಾಡಲಿದ್ದಾರಂತೆ.
ಈ ಕುರಿತು ವಿಡಿಯೋ ಹಂಚಿಕೊಳ್ಳುವ ಮೂಲಕ ಸ್ವತಃ ಸ್ಪಂದನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ‘ಪಾಪ ಸೂರಜ್ ಅವರ ಫೋಟೋ ಎಡಿಟ್ ಮಾಡಿ ಅವರಿಗೆ ಸಾಕಷ್ಟು ಕಿರಿಕಿರಿ ಉಂಟುಮಾಡಿದ್ದೀರಿ. ಆದರೆ ತಾವು ಮದುವೆಯಾಗುತ್ತಿರುವುದು ಸೂರಜ್ ಅವರನ್ನಂತೂ ಅಲ್ಲ’ ಎಂದು ನಗುತ್ತಲೇ ಖಚಿತಪಡಿಸಿದ್ದಾರೆ. ಅಲ್ಲದೆ, ಅನೇಕರು ಬೇರೆ ಬೇರೆ ಹುಡುಗರನ್ನು ಟ್ಯಾಗ್ ಮಾಡುತ್ತಿದ್ದು, ಅವರ್ಯಾರೂ ಅಲ್ಲ ಎಂದು ವದಂತಿಗಳನ್ನು ಅಲ್ಲಗೆಳೆದಿದ್ದಾರೆ.
ಇದನ್ನೂ ಓದಿ: ಐಶಾರಾಮಿ ಕಾರು ಖರೀದಿಸಿದ ನಟಿ ಸ್ಪಂದನಾ ಸೋಮಣ್ಣ: ವಿಡಿಯೋ ನೋಡಿ
ತಮ್ಮ ಮದುವೆ, ನಿಶ್ಚಿತಾರ್ಥದ ದಿನಾಂಕಗಳು, ಶಾಪಿಂಗ್ ಹಾಗೂ ಭಾವಿ ಪತಿಯ ಪರಿಚಯ ಸೇರಿದಂತೆ ಪ್ರತಿಯೊಂದು ವಿಶೇಷ ಕ್ಷಣಗಳನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲೇ ಹಂಚಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಕೊನೆಯಲ್ಲಿ, ಶೀಘ್ರದಲ್ಲೇ ಮದುವೆ ಆಗುತ್ತಿರುವುದಕ್ಕೆ ಅತ್ಯಂತ ಸಂತಸ ವ್ಯಕ್ತಪಡಿಸಿರುವ ಸ್ಪಂದನಾ ಸೋಮಣ್ಣ, ತಮ್ಮ ಈ ಹೊಸ ಜೀವನದ ಪ್ರಯಾಣಕ್ಕೆ ಬೆಂಬಲವಾಗಿ ನಿಲ್ಲಿ ಎಂದು ಕೋರಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:54 am, Tue, 22 September 26