ಮಸ್ಕತ್​​ನಲ್ಲಿ ಹುಟ್ಟಿದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್​ಗೆ ಎಂಟ್ರಿ

'ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16' ಫೈನಲಿಸ್ಟ್ ಹಾಗೂ ಮಂಗಳೂರು ಮೂಲದ ಮಾಡೆಲ್ ಸೌಂದರ್ಯಾ ಶೆಟ್ಟಿ 'ಬಿಗ್ ಬಾಸ್ ಕನ್ನಡ ಸೀಸನ್ 13'ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್ ಆಗಿರುವ ಸೌಂದರ್ಯಾ ಅವರ ಸ್ಪಷ್ಟ ನಡೆ-ನುಡಿ ಮತ್ತು ಬೋಲ್ಡ್ ವ್ಯಕ್ತಿತ್ವ ಬಿಗ್ ಬಾಸ್ ಮನೆಯಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಮಸ್ಕತ್​​ನಲ್ಲಿ ಹುಟ್ಟಿದ ಸೌಂದರ್ಯಾ ಶೆಟ್ಟಿ ಬಿಗ್ ಬಾಸ್​ಗೆ ಎಂಟ್ರಿ
ಸೌಂದರ್ಯಾ
Edited By:

Updated on: Sep 06, 2026 | 8:04 PM

ಮುಖ್ಯಾಂಶಗಳು

  • ಸೌಂದರ್ಯಾ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಗ್ರ್ಯಾಂಡ್ ಎಂಟ್ರಿ 
  • ಮಂಗಳೂರಿನಿಂದ ಮುಂಬೈವರೆಗೆ
  • ಮಾಡೆಲಿಂಗ್ ಜಗತ್ತಿನಲ್ಲಿ ಸೌಂದರ್ಯಾ ಮಿಸ್ ವರ್ಲ್ಡ್ ಟೀನ್ ಸಾಧನೆ

ಖ್ಯಾತ ರಿಯಾಲಿಟಿ ಶೋ ‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16’ ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಸೌಂದರ್ಯಾ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಸೌಂದರ್ಯಾ ಶೆಟ್ಟಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಸುದ್ದಿ ತಿಳಿದ ಬೆನ್ನಲ್ಲೇ ಅವರ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿದೆ. ಈ ಬಾರಿಯ ಬಿಗ್ ಬಾಸ್ ಮನೆಗೆ ಸೌಂದರ್ಯಾ ಅವರ ಆಗಮನ ಹೊಸ ಮೆರುಗು ತರಲಿದೆ.

ಕರಾವಳಿ ಮೂಲದ ಈ ಚೆಲುವೆ ಕರ್ನಾಟಕದ ಮಂಗಳೂರಿನವರು. ಮಸ್ಕತ್​ನಲ್ಲಿ ಹುಟ್ಟಿ, ಮಂಗಳೂರಿನಲ್ಲಿ ಬೆಳೆದರು. ಸದಾ ಪಾರ್ಟಿ ಮಾಡುವವರು ಅವರು.ಸೌಂದರ್ಯದಿಂದ ಅವರು ಗಮನ ಸೆಳೆದಿದ್ದಾರೆ. ಪ್ರಸ್ತುತ ವೃತ್ತಿಪರ ಮಾಡೆಲಿಂಗ್​ನಲ್ಲಿರೋ ಅವರು, ಮುಂಬೈನಲ್ಲಿ ನೆಲೆಸಿದ್ದಾರೆ. ತಮ್ಮ ಗ್ಲಾಮರಸ್ ಲುಕ್ ಅಲ್ಲಿ ಗಮನ ಸೆಳೆದಿದ್ದಾರೆ.

ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸೌಂದರ್ಯಾ ಶೆಟ್ಟಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ತದನಂತರ ಜನಪ್ರಿಯ ರಿಯಾಲಿಟಿ ಶೋ ನಲ್ಲಿ ಭಾಗವಹಿಸಿ ಗಮನ ಸೆಳೆದರು. ‘ಮಿಸ್ ವರ್ಲ್ಡ್ ಟೀನ್ ಸೂಪರ್ ಮಾಡೆಲ್ 2019’ ಕಿರೀಟ ಪಡೆದರು.

‘ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ 16’ ರಿಯಾಲಿಟಿ ಶೋನಲ್ಲಿ ಪ್ರಮುಖ ಸ್ಪರ್ಧಿಯಾಗಿ ಭಾಗವಹಿಸಿ ಅಂತಿಮ ಹಂತ ತಲುಪಿದ್ದರು. ಶೋನಲ್ಲಿ ತಮ್ಮ ನೇರ ನಡೆ-ನುಡಿ ಮತ್ತು ಬೋಲ್ಡ್ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದಿದ್ದರು. ಸಹ-ಸ್ಪರ್ಧಿಗಳೊಂದಿಗಿನ ವಾದ-ವಿವಾದಗಳು ಹಾಗೂ ಫೈನಲ್ ವರೆಗಿನ ಜರ್ನಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು.

ಇದನ್ನೂ ಓದಿ: ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ‘ಜಗ್ಗ ಮಮ್ಮಿ’; ವೇದಿಕೆ ಮೇಲೆ ಹಾಸ್ಯದ ಹೊಳೆ

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 13 ರಂಗಪ್ರವೇಶ ಮಾಡಿರುವ ಸೌಂದರ್ಯಾ ಶೆಟ್ಟಿ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇವರ ಬೋಲ್ಡ್ ಆಟ ಹಾಗೂ ಸ್ಪಷ್ಟ ಮಾತುಗಳು ಬಿಗ್ ಬಾಸ್ ಮನೆಯ ವಾತಾವರಣಕ್ಕೆ ಕಳೆ ಕಟ್ಟಲಿವೆ. ಕನ್ನಡಿಗರ ನೆಚ್ಚಿನ ಶೋನಲ್ಲಿ ಮಂಗಳೂರಿನ ಈ ಚೆಲುವೆ ಎಷ್ಟು ದಿನ ಪೈಪೋಟಿ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Loading...
Unable to load recommendations.
Follow Us