ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟ ‘ಜಗ್ಗ ಮಮ್ಮಿ’; ವೇದಿಕೆ ಮೇಲೆ ಹಾಸ್ಯದ ಹೊಳೆ
ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್‌ನಲ್ಲಿ 'ಲವ್ ಮಾಕ್ಟೇಲ್ 3' ಖ್ಯಾತಿಯ ಜಗ್ಗ ಮಮ್ಮಿ (ಜಗದೀಶ್) ಮೊದಲ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದಾರೆ. ತಮ್ಮ ಸಹಜ ಹಾಸ್ಯ, ವಿಶಿಷ್ಟ ಮ್ಯಾನರಿಸಂ ಹಾಗೂ ಕೀಟಲೆ ಸ್ವಭಾವದಿಂದ ವೀಕ್ಷಕರನ್ನು ನಗಿಸುತ್ತಾ, ವೇದಿಕೆ ಮೇಲೆಯೇ ಕಿಚ್ಚ ಸುದೀಪ್ ಅವರ ಗಮನ ಸೆಳೆದು ಸಖತ್ ಸದ್ದು ಮಾಡುತ್ತಿದ್ದಾರೆ.

ಮುಖ್ಯಾಂಶಗಳು
- ಬಿಗ್ ಬಾಸ್ ಮನೆಗೆ ಜಗ್ಗ ಮಮ್ಮಿ ಗ್ರ್ಯಾಂಡ್ ಎಂಟ್ರಿ
- ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ 'ಲವ್ ಮಾಕ್ಟೇಲ್ 3' ನಟ
- ವೇದಿಕೆ ಮೇಲೆ ನಗೆಯ ಹೊಳೆ ಹರಿಸಿದ ಮೈಸೂರಿನ ಮಹದೇವಪುರದ ಜಗದೀಶ್
ಬಿಗ್ ಬಾಸ್ ಕನ್ನಡ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಆಗಿದೆ. ಮೊದಲ ಸ್ಪರ್ಧಿಯಾಗಿ ‘ಲವ್ ಮಾಕ್ಟೇಲ್ 3’ ಸಿನಿಮಾ ಮೂಲಕ ‘ಜಗ್ಗ ಮಮ್ಮಿ’ ಪಾತ್ರದಿಂದಲೇ ಸಖತ್ ವೈರಲ್ ಹಾಗೂ ಜನಪ್ರಿಯರಾದ ನಟ ಜಗದೀಶ್ (ಜಗ್ಗ ಮಮ್ಮಿ) ಅವರು ಈ ಬಾರಿಯ ದೊಡ್ಮನೆ ಪ್ರವೇಶಿಸಿದ್ದಾರೆ. ಪ್ರಮುಖ ಸೆಲೆಬ್ರಿಟಿ ಸ್ಪರ್ಧಿಗಳಲ್ಲಿ ಒಬ್ಬರಾಗಿ ಭಾರಿ ಸದ್ದು ಮಾಡುತ್ತಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್ 3 ಚಿತ್ರದಲ್ಲಿ ‘ಜಗ್ಗ ಮಮ್ಮಿ’ ಪಾತ್ರದ ಮೂಲಕ ತಮ್ಮ ವಿಶಿಷ್ಟ ಮ್ಯಾನರಿಸಂ ಮತ್ತು ನೈಜ ಹಾಸ್ಯದಿಂದ ಗಮನ ಸೆಳೆದವರು. ಯಾವುದೇ ಆಡಂಬರವಿಲ್ಲದ ಸರಳ ಹಾಗೂ ನ್ಯಾಚುರಲ್ ಟೈಮಿಂಗ್ ಮೂಲಕ ಪ್ರೇಕ್ಷಕರನ್ನು ನಗಿಸುವ ಕಲೆ ಇವರಿಗಿದೆ
ಕಲರ್ಸ್ ಕನ್ನಡದಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಜಗ್ಗ ಮಮ್ಮಿ ಮೊದಲ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಜಗ್ಗ ಮಮ್ಮಿ ತಮ್ಮ ಕಾಮಿಡಿ ಹಾಗೂ ಹ್ಯೂಮರ್ ಮೂಲಕ ಮನರಂಜನೆಯ ಹೊಳೆಯನ್ನೇ ಹರಿಸಲಿದ್ದಾರೆ ಎಂಬ ಭರವಸೆ ವೀಕ್ಷಕರಲ್ಲಿದೆ. ವೇದಿಕೆ ಮೇಲೆ ಅವರು ಎಲ್ಲರನ್ನೂ ನಗಿಸಿದರು. ಸುದೀಪ್ ಅವರು ಕೂಡ ಜಗದೀಶ್ ಅವರ ಕಾಲೆಳೆದರು.
View this post on Instagram
ಸಿನಿಮಾ ಪರದೆಯ ಮೇಲಿನ ತಮ್ಮ ಹಾಸ್ಯ ಚಟಾಕಿಯಿಂದಲೇ ಮನೆಮಾತಾಗಿರುವ ಜಗ್ಗ ಮಮ್ಮಿ, ರಿಯಾಲಿಟಿ ಶೋ ಅಂಗಳದಲ್ಲಿ ತಮ್ಮ ರಿಯಲ್ ವ್ಯಕ್ತಿತ್ವದ ಮೂಲಕ ಪ್ರೇಕ್ಷಕರನ್ನು ಹೇಗೆ ಗೆಲ್ಲಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ‘ಬಿಗ್ ಬಾಸ್ 20’ ಪ್ರೋಮೋ ವೈರಲ್: ಪ್ರೀತಿ, ಮೋಸದ ಬಗ್ಗೆ ಮಾತನಾಡಿ ಅಚ್ಚರಿ ನೀಡಿದ ನಟಿ
ಜಗದೀಶ್ ಅವರು ಮೈಸೂರಿನ ಮಹದೇವಪುರದವರು. ಸದಾ ಕೀಟಲೆ ಮಾಡುತ್ತಾ ಇರುವುದು ಜಗದೀಶ್ ಅವರ ಸ್ಪೆಷಾಲಿಟಿ. ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಹುಡುಗಿ ರೀತಿ ಆಡುತ್ತಿರುವ ಕಾರಣಕ್ಕೆ ಎಲ್ಲರೂ ಟೀಕಿಸಿದ್ದರಂತೆ. ಈಗ ಅವರನ್ನು ಎಲ್ಲರೂ ಪ್ರೀತಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:44 pm, Sun, 6 September 26




