ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಹೆಚ್ಚು ಜನಪ್ರಿಯತೆ ಪಡೆದಿದೆ. ಕಿರುತೆರೆ ಲೋಕದಲ್ಲಿ ಈ ರಿಯಾಲಿಟಿ ಶೋಗೆ ದೊಡ್ಡ ವೀಕ್ಷಕ ಬಳಗ ಇದೆ. ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ನೋಡುಗರಿಗೆ ಮಜ ನೀಡುತ್ತದೆ. ಅದರಲ್ಲೂ ಮಾಸ್ಟರ್ ಆನಂದ್ ಮಗಳು ಆಡುವ ಚೂಟಿ ಮಾತುಗಳು ಸಖತ್ ಮನರಂಜನೆ ನೀಡುತ್ತದೆ. ಇನ್ನು, ತಾರಾ ಅನುರಾಧ ಹಾಗೂ ಅನು ಪ್ರಭಾಕರ್ ಹಾಗೂ ಸೃಜನ್ ಲೋಕೇಶ್ ಜಡ್ಜ್ ಸ್ಥಾನದಲ್ಲಿ ಕೂತಿದ್ದಾರೆ. ಅನುಪಮಾ ಗೌಡ ಅವರು ತಮ್ಮ ನಿರೂಪಣೆ ಮೂಲಕ ಗಮನ ಸೆಳೆಯುತ್ತಿದ್ದಾರೆ. ಒಟ್ಟಾರೆ ಈ ಶೋ ಸಖತ್ ಮನರಂಜನೆ ನೀಡುತ್ತಿದೆ. ಈ ವಾರ ಎಪಿಸೋಡ್ ವಿಶೇಷವಾಗಿರಲಿದೆ ಎಂಬುದಕ್ಕೆ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿರುವ ಪ್ರೋಮೋ ಸಾಕ್ಷಿ.
ಸೃಜನ್ ಲೋಕೇಶ್ ಅವರು ತೆರೆಯ ಮೇಲೆ ಹಾಗೂ ತೆರೆಯ ಹಿಂದೆ ಎಲ್ಲರನ್ನೂ ನಗಿಸುತ್ತಲೇ ಇರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಈ ಕಾರಣಕ್ಕೆ ಅವರನ್ನು ಸಾಕಷ್ಟು ಮಂದಿ ಇಷ್ಟಪಡುತ್ತಾರೆ. ಸೃಜನ್ ಲೋಕೇಶ್ ಅವರು ತಾರಾ, ಅನು ಪ್ರಭಾಕರ್ ಹಾಗೂ ಅನುಪಮಾ ಜತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಈ ಬಾರಿ ಇವರಿಗೆ ಸೃಜನ್ ಕಡೆಯಿಂದ ವಿಶೇಷ ಗಿಫ್ಟ್ ಸಿಕ್ಕಿದೆ. ಈ ಪ್ರೋಮೋ ನೋಡಿ ಕೆಲವರು ಭಾವುಕರಾಗಿದ್ದಾರೆ.
ಇತ್ತೀಚೆಗೆ ತಾಯಂದಿರಿಗೆ ಗಿಫ್ಟ್ ನೀಡೋ ಕೆಲಸವನ್ನು ಮಕ್ಕಳಿಗೆ ನೀಡಲಾಗಿತ್ತು. ಮಕ್ಕಳು ತಮ್ಮ ಅಮ್ಮಂದಿರಿಗೆ ಕೆಲವು ಉಡುಗೊರೆಗಳನ್ನು ತೆಗೆದುಕೊಂಡು ಬಂದಿದ್ದರು. ಇದು ಸೃಜನ್ಗೆ ಸ್ಫೂರ್ತಿಯಾಗಿದೆ. ಅವರು ಜಡ್ಜ್ ಸ್ಥಾನದಲ್ಲಿ ಕುಳಿತ ಅನು ಹಾಗೂ ತಾರಾ ಅವರಿಗೆ ಗಿಫ್ಟ್ ನೀಡಿದ್ದಾರೆ.
ಅನು ಪ್ರಭಾಕರ್ ಅವರಿಗೆ ಸೃಜನ್ ಸರ ಒಂದನ್ನು ಗಿಫ್ಟ್ ಮಾಡಿದ್ದಾರೆ. ತಾರಾ ಅನುರಾಧಾಗೆ ಸೀರೆ ನೀಡಿದ್ದಾರೆ. ಸೀರೆಯನ್ನು ನೋಡಿ ತಾರಾ ಖುಷಿಪಟ್ಟಿದ್ದಾರೆ. ‘ನಮ್ಮ ಬಳಿ ಎಷ್ಟೇ ಸೀರೆ ಇದ್ದರೂ ಹೊಸ ಸೀರೆ ಬಂದಾಗ ಆಗುವ ಖುಷಿಯೇ ಬೇರೆ’ ಎಂದು ತಾರಾ ಅವರು ಸೀರೆಯನ್ನು ಮೈಮೇಲೆ ಹೊದ್ದುಕೊಂಡು ವೇದಿಕೆ ಮೇಲೆಯೇ ವಾಕ್ ಮಾಡಿದ್ದಾರೆ.
ಅನು ಅವರಿಗೂ ಸೃಜನ್ ಗಿಫ್ಟ್ ಒಂದನ್ನು ನೀಡಿದ್ದಾರೆ. ಜತೆಗೆ ಅನು ಚಿತ್ರರಂಗಕ್ಕೆ ಬರುವುದಕ್ಕೂ ಮೊದಲು ಮಾಡಿದ ಸ್ಟ್ರಗಲ್ಅನ್ನು ನೆನಪಿಸಿಕೊಂಡಿದ್ದಾರೆ. ‘ಅನುವಿನ ಸ್ಟ್ರಗಲ್ ನೋಡಿದ್ದೇನೆ. ಚಿಕ್ಕ ವಯಸ್ಸಿನಲ್ಲಿ ಅವರ ತಾಯಿಯನ್ನು ನೋಡಿಕೊಂಡಿದ್ದಿರಬಹುದು, ತಂಗಿಯನ್ನು ನೋಡಿಕೊಂಡಿದ್ದಿರಬಹುದು. ಎಲ್ಲವನ್ನೂ ನಾನು ಹತ್ತಿರದಿಂದ ನೋಡಿದ್ದೇನೆ’ ಎಂದರು ಸೃಜನ್. ಇದನ್ನು ಹೇಳುತ್ತಿದ್ದಂತೆ ಅನುಪಮಾ ಅವರು ಗಳಗಳನೆ ಅತ್ತರು. ಸೃಜನ್ ನೀಡಿದ ಗಿಫ್ಟ್ ನೋಡಿ ಅವರು ಖುಷಿಪಟ್ಟರು.
ಇದನ್ನೂ ಓದಿ: ‘ಇವನು ನನ್ನ ತಂದೆ ರೂಪ ಎಂದು ನಾನು ನಂಬಿದ್ದೇನೆ’; ಮಗ ಸುಕೃತ್ ಬಗ್ಗೆ ಸೃಜನ್ ಲೋಕೇಶ್ ಮಾತು
‘ನನ್ನಮ್ಮ ಸೂಪರ್ ಸ್ಟಾರ್’ ಸ್ಪರ್ಧಿ, 6 ವರ್ಷದ ಬಾಲಕಿ ಸಮನ್ವಿ ಅಪಘಾತದಲ್ಲಿ ನಿಧನ