ಈ ಬಾರಿ ‘ಸರಿಗಮಪ’ ಶೋ ಸಖತ್ ವಿಶೇಷ ಎನಿಸಿಕೊಂಡಿತ್ತು. ಇದಕ್ಕೆ ಕಾರಣ ಆಗಿದ್ದು ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬ ಅತಿಥಿಯಾಗಿ ಬಂದಿದ್ದು. ಕಿಚ್ಚ ಸುದೀಪ್ ಹಾಗೂ ಜೀ ಕನ್ನಡ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಧ್ಯೆ ಒಳ್ಳೆಯ ಗೆಳೆತನ ಇದೆ. ರಾಘವೇಂದ್ರ ಅವರು ಸುದೀಪ್ಗೆ ಆಹ್ವಾನ ನೀಡಿದ್ದರು. ಈ ಆಹ್ವಾನವನ್ನು ಸುದೀಪ್ ಅವರಿಗೆ ಕಡೆಗಣಿಸಲು ಸಾಧ್ಯವಾಗಲೇ ಇಲ್ಲ. ಈ ಕಾರಣಕ್ಕೆ ಸುದೀಪ್ ಅವರು ಕುಟುಂಬ ಸಮೇತ ‘ಜೀ ಕನ್ನಡ’ ವೇದಿಕೆ ಏರಿದ್ದಾರೆ.
ಸುದೀಪ್ ಮಗಳು ಸಾನ್ವಿ ಉತ್ತಮ ಹಾಡುಗಾರ್ತಿ. ಇದನ್ನು ಸುದೀಪ್ ಅವರು ಕೂಡ ಸಾಕಷ್ಟು ಬಾರಿ ಹೇಳಿದ್ದಾರೆ. ಅನೇಕ ಬಾರಿ ಸಾನ್ವಿ ಕೂಡ ಹಾಡನ್ನು ಹಾಡಿದ್ದು ಇದೆ. ಈಗ ಸರಿಗಮಪ ವೇದಿಕೆ ಮೇಲೆ ಅಪ್ಪನಿಗಾಗಿ ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಸಾನ್ವಿ ಹಾಡಿದ್ದಾರೆ. ಇದನ್ನು ಕೇಳಿ ಸುದೀಪ್ ಅವರು ಭಾವುಕರಾದರು. ಸುದೀಪ್ ಅವರಿಗೆ ಇದು ಸರ್ಪ್ರೈಸಿಂಗ್ ಆಗಿತ್ತು.
ಸಾನ್ವಿ ಅವರು ಈ ಹಾಡನ್ನು ಪ್ರ್ಯಾಕ್ಟಿಸ್ ಕೂಡ ಮಾಡಿಕೊಂಡಿದ್ದರು. ಆದರೆ, ಈ ವಿಚಾರ ಸುದೀಪ್ ಅವರಿಗೆ ಗೊತ್ತಿರಲಿಲ್ಲ. ಈ ಕಾರಣಕ್ಕೆ ಸುದೀಪ್ ಅವರು ವೇದಿಕೆ ಮೇಲೆ ಅಚ್ಚರಿ ಹೊರಹಾಕಿದರು. ‘ನನಗೆ ಗೊತ್ತಿಲ್ಲದೆ ಮನೆಯಲ್ಲಿ ಏನ್ ಏನೋ ನಡೆಯುತ್ತಿದೆ’ ಎಂದು ಹೇಳಿದರು. ಅಲ್ಲದೆ, ಮಗಳು ಹಾಡಿದ್ದನ್ನು ಕೇಳಿ ಖುಷಿಪಟ್ಟರು. ಸುದೀಪ್ ಹಾಗೂ ಸಾನ್ವಿ ರಾತ್ರಿ ಇಡೀ ಎಚ್ಚರ ಇರುತ್ತಾರಂತೆ. ಆಗ ಇಬ್ಬರೂ ಹಾಡುಗಳನ್ನು ಹೇಳುತ್ತಾ ಇರುತ್ತಾರಂತೆ.
ಇದನ್ನೂ ಓದಿ:ತ್ರಿವಿಕ್ರಮ್ ಕೊಬ್ಬಿನ ಮಾತಿಗೆ ತಕ್ಕ ಪಾಠ ಕಲಿಸಿದ ಸುದೀಪ್
ಇನ್ನು ಸುದೀಪ್ ಅವರಿಗೆ ಮಗಳ ಮೇಲೆ ವಿಶೇಷ ಪ್ರೀತಿ ಇದೆ. ಈ ವಿಶೇಷ ಪ್ರೀತಿಯನ್ನು ಅವರು ಹಲವು ಬಾರಿ ಹೇಳಿಕೊಂಡಿದ್ದಾರೆ. ಸುದೀಪ್ ಅವರಿಗೆ ‘ರಾಜಕುಮಾರಿ..’ ಹಾಡು ಸಖತ್ ಇಷ್ಟ. ಈ ಹಾಡನ್ನು ಹೇಳುವಾಗ ಅವರು ಭಾವುಕರಾದರು. ಸಾನ್ವಿ ಹಾಗೂ ಸುದೀಪ್ ಕಣ್ಣಲ್ಲಿ ನೀರು ಬಂತು.
‘ಬಿಗ್ ಬಾಸ್’ ಬಿಟ್ಟು ಬೇರೆ ವೇದಿಕೆ ಮೇಲೆ ಸುದೀಪ್ ಅವರು ಕಾಣಿಸಿಕೊಂಡಿದ್ದು ಕಡಿಮೆ. ಈಗ ಅವರು ‘ಸರಿಗಮಪ’ ವೇದಿಕೆ ಏರಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸಾನ್ವಿ ಹಾಗೂ ಸುದೀಪ್ ಅವರ ಹಳೆಯ ಫೋಟೋಗನ್ನು ಕೂಡ ಇಲ್ಲಿ ಪ್ಲೇ ಮಾಡಲಾಯಿತು ಅನ್ನೋದು ವಿಶೇಷ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ