
ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಸೂರಜ್ ಅವರು ಶನಿವಾರ ಎಲಿಮಿನೇಟ್ ಆಗಿದ್ದಾರೆ. ಅವರು ಯಾವುದೇ ಸೆಲೆಬ್ರಿಟಿ ಅಲ್ಲ. ಆದಾಗ್ಯೂ ದೊಡ್ಮನೆ ಒಳಗೆ ಹೋಗುವ ಅವಕಾಶ ಸಿಕ್ಕಿತು. ಅವರು ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆ ಒಳಗೆ ತೆರಳಿದ್ದರು. 90 ದಿನ ಬಿಗ್ ಬಾಸ್ ಮನೆಯಲ್ಲಿ ಇದ್ದು ಅವರು ಎಲಿಮಿನೇಟ್ ಆಗಿದ್ದಾರೆ. ಗಿಲ್ಲಿ ನಟನ ಕ್ರೇಜ್ ಬಗ್ಗೆ ಅವರಿಗೆ ಮನೆಯ ಒಳಗೆ ಐಡಿಯಾ ಸಿಕ್ಕಿದೆ. ಗಿಲ್ಲಿ (Gilli) ಬಗ್ಗೆ ಅವರು ಮಾತನಾಡಿದ್ದಾರೆ. ಜೊತೆಗೆ ಕಾವ್ಯಾ ಬಗ್ಗೆಯೂ ಮಾತನಾಡಿದ್ದಾರೆ.
‘ಗಿಲ್ಲಿ ಇಡೀ ದಿನ ಎನರ್ಜಿಯಲ್ಲೇ ಇರುತ್ತಾನೆ. ಅವನ ಕೌಂಟರ್ ನೋಡಿ ಶಾಕ್ ಆಗ್ತಾ ಇತ್ತು. ರಕ್ಷಿತಾ ಶೆಟ್ಟಿ ಚೆನ್ನಾಗಿ ಆಡ್ತಾ ಇದಾಳೆ. ಅವಳ ಮಾತು ಇಷ್ಟ ಆಗ್ತಿದೆ. ಅವಳು ಯಾರಿಗೂ ಬೇಸರ ಮಾಡಿಲ್ಲ’ ಎಂದಿದ್ದಾರೆ ಸೂರಜ್.
‘ಗಿಲ್ಲಿ ಆಟ ಕಾವ್ಯಾಗೆ ಪ್ಲಸ್ ಆಗುತ್ತಿದೆ. ಗಿಲ್ಲಿ ಯಾವಾಗಲೂ ಕಾವ್ಯಾ ಜೊತೆ ಇರ್ತಾನೆ. ಇದು ತಪ್ಪು ಎಂದು ಹೇಳುವುದಿಲ್ಲ. ಗಿಲ್ಲಿಯಿಂದ ಕಾವ್ಯಾಗೆ ಸಹಾಯ ಆಗುತ್ತಿದ್ದೆ.
ಕಾವ್ಯಾ ಸಹೋದರ ಬಿಗ್ ಬಾಸ್ ಮನೆಗೆ ಬಂದಿದ್ದರು. ಈ ವೇಳೆ ಹೊರಗಿನ ವಿಷಯ ಹೇಳಿದ್ದರು. ಇದರಿಂದ ಕಾವ್ಯಾ ಸಹೋದರನ ಅರ್ಧಕ್ಕೆ ಹೊರಕ್ಕೆ ಕಳುಹಿಸಬೇಕಾಯಿತು. ಈ ಬಗ್ಗೆ ಸೂರಜ್ ಮಾತನಾಡಿದ್ದಾರೆ. ‘ಕಾವ್ಯಾಗೆ ಹೊರಗಿರೋ ಒಪೀನಿಯನ್ ಸಿಕ್ಕಿದೆ. ಅದೇ ರೀತಿ ಆಡಿದರೆ ಅವರಿಗೆ ನೆಗೆಟಿವ್ ಆಗುತ್ತದೆ. ಕಾವ್ಯಾರ ತಮ್ಮಆ ರೀತಿ ಮಾಡಿದ್ದು ಸರಿಯಲ್ಲ’ ಎಂದಿದ್ದಾರೆ ಸೂರಜ್.
‘ಬಿಗ್ ಬಾಸ್ ಮನೆಯ ಅನುಭವ ಚೆನ್ನಾಗಿತ್ತು. ಸಾಮಾನ್ಯ ವ್ಯಕ್ತಿಯಾಗಿ ಹೋಗಿ ಇಷ್ಟು ದಿನ ಆಡಿದ್ದೇನೆ. ಆರಂಭದಲ್ಲಿ 4-5 ವಾರ ಇರುತ್ತೇನೆ ಎಂದುಕೊಂಡಿದ್ದೆ. ಆದರೆ, ನನ್ನ ಸಾಮರ್ಥ್ಯ ಏನು ಎಂಬುದು ನಂತರ ಗೊತ್ತಾಗಿದೆ. ಫಿನಾಲೆವರೆಗೆ ಇರ್ತೀನಿ ಎಂದುಕೊಂಡಿದ್ದೆ, ಆದರೆ, ಆಗಿಲ್ಲ. ಆ ಬಗ್ಗೆ ಬೇಸರ ಇದೆ. ಎಲ್ಲರ ಜೊತೆ ಒಳ್ಳೆಯ ರೀತಿಯಲ್ಲಿ ಒಡನಾಡಬೇಕಿತ್ತು ಎಂದು ಈಗ ಅನಿಸುತ್ತದೆ. ಹಾಗಿದ್ದರೆ ನಾನು ಮತ್ತೊಂದಷ್ಟು ದಿನ ಮನೆಯಲ್ಲಿ ಇರೋ ಅವಕಾಶ ಸಿಗುತ್ತಿತ್ತು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಗಿಲ್ಲಿ ರೀತಿಯ ಹುಡುಗ ಬೇಕು’; ಮನಸ್ಸಿನ ಭಾವನೆ ಹೊರಹಾಕಿದ ರಕ್ಷಿತಾ ಶೆಟ್ಟಿ
‘ನಾನು ಸ್ಟ್ರಾಂಗ್ ಸ್ಪರ್ಧಿ. ಸ್ಪಂದನಾ ಅವರಿಗಿಂತ ಟಫ್ ಕಾಂಪಿಟೇಟರ್ ಆಗಿದ್ದೆ. ಜನರು ಅವರಿಗೆ ವೋಟ್ ಹಾಕಿ ಉಳಿಸಿಕೊಂಡಿದ್ದಾರೆ ಎಂದರೆ ನನಗೇನು ತೊಂದರೆ ಇಲ್ಲ. ಎಲ್ಲರೂ ರಾಶಿಕಾ ಜೊತೆ ಸ್ಟ್ರಕ್ ಆಗಿದ್ದೀನಿ ಎನ್ನುತ್ತಿದ್ದರು. ಆದರೆ, ನಾನು ಹಾಗೆ ಸ್ಟ್ರಕ್ ಆಗಿಲ್ಲ’ ಎಂದಿದ್ದಾರೆ ಸೂರಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:15 pm, Mon, 29 December 25