ತುಕಾಲಿ ಸಂತೋಷ್ ಕೌಂಟರ್​ಗೆ ಗಪ್​ಚುಪ್ ಆದ ಕಾರ್ತಿಕ್ ಮಹೇಶ್

|

Updated on: Jan 27, 2024 | 7:34 AM

ತುಕಾಲಿ ಸಂತೋಷ್ (Tukali Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಕಾರಣದಿಂದಲೇ ಅವರು ಫಿನಾಲೆ ತಲುಪಿದ್ದಾರೆ. ಟಾಪ್ 6 ಸ್ಪರ್ಧಿಗಳ ಪೈಕಿ ಅವರು ಕೂಡ ಒಬ್ಬರು. ತುಕಾಲಿ ಸಂತೋಷ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ರಾಜನಂತೆ ಮೆರೆದಿದ್ದಾರೆ. ಸೂಟು-ಬೂಟು ಹಾಕಿ ಆರಾಮಾಗಿ ಓಡಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕೊನೆಯ ಆಸೆಯನ್ನು ಅವರು ಈಡೇರಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ […]

ತುಕಾಲಿ ಸಂತೋಷ್ ಕೌಂಟರ್​ಗೆ ಗಪ್​ಚುಪ್ ಆದ ಕಾರ್ತಿಕ್ ಮಹೇಶ್
ಸಂತೋಷ್-ಕಾರ್ತಿಕ್
Follow us on

ತುಕಾಲಿ ಸಂತೋಷ್ (Tukali Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಕಾರಣದಿಂದಲೇ ಅವರು ಫಿನಾಲೆ ತಲುಪಿದ್ದಾರೆ. ಟಾಪ್ 6 ಸ್ಪರ್ಧಿಗಳ ಪೈಕಿ ಅವರು ಕೂಡ ಒಬ್ಬರು. ತುಕಾಲಿ ಸಂತೋಷ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ರಾಜನಂತೆ ಮೆರೆದಿದ್ದಾರೆ. ಸೂಟು-ಬೂಟು ಹಾಕಿ ಆರಾಮಾಗಿ ಓಡಾಡಿದ್ದಾರೆ. ಈ ಮೂಲಕ ಬಿಗ್ ಬಾಸ್ ಮನೆಯಲ್ಲಿ ತಮ್ಮ ಕೊನೆಯ ಆಸೆಯನ್ನು ಅವರು ಈಡೇರಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಪ್ರಸಾರ ಕಂಡಿದೆ.

ಬಿಗ್ ಬಾಸ್ ಫಿನಾಲೆ ವೀಕ್​​ನಲ್ಲಿ ಐದು ಆಸೆಗಳನ್ನು ಹೇಳಿಕೊಳ್ಳಲು ಸ್ಪರ್ಧಿಗಳಿಗೆ ಅವಕಾಶ ನೀಡಲಾಯಿತು. ಈ ಪೈಕಿ ಒಂದು ಆಸೆಯನ್ನು ಈಡೇರಿಸುವುದಾಗಿ ಬಿಗ್ ಬಾಸ್ ಹೇಳಿದರು. ಪ್ರತಾಪ್ ಅವರು ಡ್ರೋನ್ ನೋಡಬೇಕು ಎಂದರು. ಎಲ್ಲರೂ ಒಟ್ಟಾಗಿ ಕುಳಿತು ಡಿನ್ನರ್ ಮಾಡಬೇಕು ಎಂದು ವಿನಯ್ ಅವರು ಕೋರಿದ್ದರು. ಕಾರ್ತಿಕ್ ಅವರು ಸಹೋದರಿ ಜೊತೆ ಮಾತನಾಡಬೇಕು ಎಂದು ಬಯಸಿದ್ದರು. ತುಕಾಲಿ ಸಂತೋಷ್​ ಅವರು ರಾಜನಂತೆ ವಾಸಿಸಬೇಕು ಎಂದು ಬಯಸಿದ್ದರು.

ಈ ಆಸೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ಎಲ್ಲರೂ ಕುಳಿತಾಗ ತುಕಾಲಿ ಸಂತೋಷ್ ಅವರಿಗೆ ಸ್ಟೋರ್​ರೂಂಗೆ ಹೋಗಿ ಬರುವಂತೆ ಸೂಚಿಸಿದರು ಬಿಗ್ ಬಾಸ್. ಈ ರೀತಿ ಹೋಗಿ ಬಂದ ಅವರಿಗೆ ಸ್ಯೂಟ್ ಸಿಕ್ಕಿದೆ. ಇದನ್ನು ಹಾಕಿಕೊಂಡು ಅವರು ಮನೆಯ ಎಲ್ಲ ಕಡೆಗಳಲ್ಲೂ ಓಡಾಡಿದ್ದಾರೆ. ಈ ವೇಳೆ ಅವರು ಎಲ್ಲರಿಂದ ಸೇವೆ ಮಾಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೆಂಡತಿ ಜೊತೆಗಿನ ಫೋಟೋ ನೋಡಿ ತುಕಾಲಿ ಸಂತೋಷ್​ ಕಂಗಾಲು; ಅಂಥದ್ದೇನಾಯ್ತು?

‘ಆಪ್ತಮಿತ್ರ’ ಸಿನಿಮಾದ ‘ರಾ..ರಾ..’ ಹಾಡಿಗೆ ಸಂತೋಷ್ ಹಾಗೂ ಸಂಗೀತಾ ಜೊತೆ ಸೇರಿ ಡ್ಯಾನ್ಸ್ ಮಾಡಿದರು. ಆ ಬಳಿಕ ಅವರು ಕುಳಿತಿದ್ದಾಗ ಕಾರ್ತಿಕ್​ಗೆ ಗಾಳಿ ಬೀಸುವಂತೆ ಹೇಳಿದರು. ‘ಮಹಾರಾಜರೇ ಈ ಮನೆಯಲ್ಲಿ ಎಸಿ ಇದೆ. ಹೀಗಿರುವಾಗ ಮತ್ತೇಕೆ ಗಾಳಿ ಬೀಸುವುದು’ ಎಂದು ಪ್ರಶ್ನೆ ಮಾಡಿದ್ದಾರೆ ಕಾರ್ತಿಕ್. ಇದಕ್ಕೆ ಉತ್ತರಿಸಿದ ತುಕಾಲಿ ಸಂತೋಷ್ ಅವರು, ‘ಈ ಮನೆಯಲ್ಲಿ ಐದು ಜನ ಇದ್ದಾರೆ. ಆರನೆಯವನು ನೀನು ಯಾಕೆ? ನೀನು ಇರಬಹುದು ಎಂದಾದರೆ ಎಸಿ ಇದ್ದ ಕಡೆ ಗಾಳಿ ಬೀಸಬಹುದಲ್ಲವೇ’ ಎಂದು ಪ್ರಶ್ನೆ ಮಾಡಿದರು. ಸಂತೋಷ್ ಕೌಂಟರ್​ಗೆ ಕಾರ್ತಿಕ್ ಸೈಲೆಂಟ್ ಆದರು. ಎಲ್ಲರೂ ನಕ್ಕು ಸುಮ್ಮನಾದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ