‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ

|

Updated on: Jan 02, 2024 | 8:00 AM

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕೆ ನಡೆದ ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ ಹೊರಹಾಕಿದರು.

‘ಈ ಪ್ರಕ್ರಿಯೆ ಬುಲ್​ಶಿಟ್​’; ವೋಟಿಂಗ್ ಬಗ್ಗೆ ನಮ್ರತಾ ಅಸಮಾಧಾನ
ನಮ್ರತಾ ಗೌಡ
Follow us on

ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಗೌಡ (Namratha Gowda) ಅವರು ಇತ್ತೀಚೆಗೆ ಹೆಚ್ಚು ಎಫರ್ಟ್ ಹಾಕಲು ಪ್ರಯತ್ನಿಸುತ್ತಿದ್ದಾರೆ. ಅವರು ಒಂದು ವಾರ ಕ್ಯಾಪ್ಟನ್ ಕೂಡ ಆದರು. ಈಗಾಗಲೇ ಉತ್ತಮ ಹಾಗೂ ಕಿಚ್ಚನ ಚಪ್ಪಾಳೆ ಅವರಿಗೆ ಸಿಕ್ಕಿದೆ. ಈಗ ಅವರು ಮನೆಯಲ್ಲಿ ನಡೆದ ವೋಟಿಂಗ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಅದನ್ನು ಬುಲ್​ಶಿಟ್ ಎಂದು ಕರೆದಿದ್ದಾರೆ. ಇದನ್ನು ಕೇಳಿ ತುಕಾಲಿ ಸಂತೋಷ್ ಅವರು ಸಿಟ್ಟಾಗಿದ್ದಾರೆ. ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 1ರಂದು ಈ ಎಪಿಸೋಡ್ ಪ್ರಸಾರ ಕಂಡಿದೆ.

ಮನೆಯಲ್ಲಿ ದಿನಸಿ ಪಡೆಯಲು ಬಿಗ್ ಬಾಸ್ ಒಂದು ಟಾಸ್ಕ್ ನೀಡಿದ್ದರು. 25 ಸಾವಿರ ಪಾಯಿಂಟ್ಸ್​ನಿಂದ 20 ಲಕ್ಷ ಪಾಯಿಂಟ್ಸ್​ ಮಧ್ಯೆ ಹಲವು ಬೋರ್ಡ್​ಗಳಿದ್ದವು. ಈ ಬೋರ್ಡ್​ಗಳನ್ನು ಒಬ್ಬೊಬ್ಬರು ಪಡೆದುಕೊಳ್ಳಬೇಕು. ಇದಕ್ಕಾಗಿ ವೋಟಿಂಗ್ ನಡೆಸಲಾಯಿತು. ವರ್ತೂರು ಸಂತೋಷ್ ಅವರು ವೋಟಿಂಗ್ ಆಧಾರದಲ್ಲಿ ಕನಿಷ್ಠ ಸಂಖ್ಯೆ ಅಂದರೆ 25 ಸಾವಿರ ಪಾಯಿಂಟ್ಸ್​ನ ಬೋರ್ಡ್ ಪಡೆದರು. ಅತಿ ಹೆಚ್ಚು ಪಾಯಿಂಟ್ಸ್ ಬೋರ್ಡ್ ಅಂದರೆ 20 ಲಕ್ಷ ಪಾಯಿಂಟ್ಸ್​ನ ಬೋರ್ಡ್ ಸಿಕ್ಕಿದ್ದು ತುಕಾಲಿ ಸಂತೋಷ್​ಗೆ.

ಈ ವೋಟಿಂಗ್ ಪ್ರಕ್ರಿಯೆಯನ್ನು ನಮ್ರತಾ ಖಂಡಿಸಿದ್ದಾರೆ. ‘ನಾನು ತುಕಾಲಿ ಸಂತೋಷ್​ಗಿಂತ ಉತ್ತಮವಾಗಿದ್ದೇನೆ. ಅವರಿಗಿಂತ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದ್ದೇನೆ. ಅವರಿಗೆ 20 ಲಕ್ಷ ಪಾಯಿಂಟ್ಸ್​​ನ ಬೋರ್ಡ್​ ಸಿಕ್ಕಿದ್ದನ್ನು ನಾನು ಒಪ್ಪುವುದಿಲ್ಲ. ಇದನ್ನು ಖಂಡಿಸುತ್ತೇನೆ. ಈ ವೋಟಿಂಗ್ ಬುಲ್​ಶಿಟ್’ ಎಂದರು ನಮ್ರತಾ.

ಇದನ್ನೂ ಓದಿ: ಕಾರ್ತಿಕ್​-ತುಕಾಲಿ ಸಂತೋಷ್​ ಕಿಸ್​; ಕೂದಲು ಕಿತ್ತ ನಮ್ರತಾ, ಸಿರಿ: ವಿಡಿಯೋ ನೋಡಿ..

ಇದಕ್ಕೆ ತುಕಾಲಿ ಸಂತೋಷ್ ಅವರು ಸಿಟ್ಟಾದರು. ‘ಈ ವೋಟಿಂಗ್​ನ ಬುಲ್​ಶಿಟ್ ಎಂದು ಕರೆಯಬೇಡ. ಎಲ್ಲರೂ ವೋಟ್ ಮಾಡಿದ್ದಾರೆ. ಎಲ್ಲರನ್ನೂ ಗೌರವಿಸಿ’ ಎಂದರು ಸಂತೋಷ್. ಆ ಬಳಿಕ ಎಲ್ಲರೂ ವೋಟಿಂಗ್ ಪ್ರಕ್ರಿಯೆಯನ್ನು ಒಪ್ಪಿದರು. ಈ ರೀತಿ ವೋಟಿಂಗ್ ಮಾಡಿದ್ದಕ್ಕೆ ಬಿಗ್ ಬಾಸ್ ಅಸಮಾಧಾನ ಹೊರಹಾಕಿದರು. ‘ನಿಮ್ಮ ಸ್ಥಾನವನ್ನು ನೀವೇ ನಿರ್ಧಾರ ಮಾಡಬೇಕಿತ್ತು’ ಎಂದು ಬಿಗ್ ಬಾಸ್ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ