AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಟ್ಟೆ ಬದಲಿಸುವಾಗ..’; ನಿರ್ಮಾಪಕನ ಹೆಸರೂ ಹೇಳಿ ತಮಗಾದ ಕಿರುಕುಳ ವಿವರಿಸಿದ ಕಿರುತೆರೆ ನಟಿ

‘ನನಗೆ ಇನ್ನಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಕುಟುಂಬದವರು ಈ ಬಗ್ಗೆ ಪೋಸ್ಟ್ ಮಾಡೋದು ಬೇಡ ಎಂದರು. ನಾನೇಕೆ ಹೆದರಬೇಕು? ನ್ಯಾಯ ಪಡೆಯೋದು ನನ್ನ ಹಕ್ಕು’ ಎಂದು ಕುಂದನ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

‘ಬಟ್ಟೆ ಬದಲಿಸುವಾಗ..’; ನಿರ್ಮಾಪಕನ ಹೆಸರೂ ಹೇಳಿ ತಮಗಾದ ಕಿರುಕುಳ ವಿವರಿಸಿದ ಕಿರುತೆರೆ ನಟಿ
ರಾಜೇಶ್ ದುಗ್ಗುಮನೆ
|

Updated on: Apr 27, 2024 | 1:12 PM

Share

ನಿರ್ಮಾಪಕರಿಂದ ತಮಗಾದ ಕೆಟ್ಟ ಅನುಭವಗಳ ಬಗ್ಗೆ ನಟಿಯರು ಆಗಾಗ ಹೇಳಿಕೊಳ್ಳುತ್ತಲೇ ಇರುತ್ತಾರೆ. ಈಗ ಹಿಂದಿ ಕಿರುತೆರೆ ನಟಿ ಕೃಷ್ಣಾ ಮುಖರ್ಜಿ ಅವರು ನಿರ್ಮಾಪಕರಿಂದ ಆದ ಕೆಟ್ಟ ಅನುಭವ ವಿವರಿಸಿದ್ದಾರೆ. ‘ಯೇ ಹೇ ಮೊಹಾಬತೇ’ (Yeh Hai Mohabbatein) ಧಾರಾವಾಹಿ ಮೂಲಕ ಫೇಮಸ್ ಆದ ಅವರಿಗೆ ಈಗ ದೊಡ್ಡ ಮಟ್ಟದ ಕಿರುಕುಳ ಆಗಿದೆ. ಜೊತೆಗೆ ಧಾರಾವಾಹಿಯಲ್ಲಿ ನಟಿಸಿದ್ದಕ್ಕೆ ಅವರಿಗೆ ಹಣ ಕೂಡ ಸಿಕ್ಕಿಲ್ಲ. ಇದರಿಂದ ಅವರು ಬೇಸರ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ.

‘ಶುಭ ಶಗುನ್’ ಹೆಸರಿನ ಧಾರಾವಾಹಿಯಲ್ಲಿ ಕೃಷ್ಣಾ ನಟಿಸುತ್ತಿದ್ದರು. ಇದರಿಂದ ಅವರು ಹೊರ ಬಂದಿದ್ದಾರೆ. ಇದಕ್ಕೆ ಕಾರಣ ಧಾರಾವಾಹಿ ನಿರ್ಮಾಪಕ ಕುಂದನ್ ಸಿಂಗ್ ಅವರು ನೀಡಿದ ಕಿರುಕುಳ. ‘ಇದನ್ನು ಬರೆಯುವಾಗ ನನ್ನ ಕೈಗಳು ನಡುಗುತ್ತಿವೆ. ಆದರೂ ನಾನು ಬರೆಯಲೇಬೇಕು. ನಾನು ಇವರಿಂದ ಖಿನ್ನತೆಗೆ ಒಳಗಾಗಿದ್ದೇನೆ. ನಾವು ನಮ್ಮ ಭಾವನೆಗಳನ್ನು ಹಿಡಿದಿಟ್ಟು, ನಮ್ಮ ಒಳ್ಳೆಯ ಜೀವನವನ್ನು ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ತೋರಿಸುತ್ತೇವೆ. ಆದರೆ, ಇದು ರಿಯಾಲಿಟಿ’ ಎಂದು ಅವರು ಬರೆದುಕೊಂಡಿದ್ದಾರೆ.

‘ನನಗೆ ಇನ್ನಷ್ಟು ಹಾನಿ ಆಗಬಹುದು ಎನ್ನುವ ಕಾರಣಕ್ಕೆ ಕುಟುಂಬದವರು ಈ ಬಗ್ಗೆ ಪೋಸ್ಟ್ ಮಾಡೋದು ಬೇಡ ಎಂದರು. ನಾನೇಕೆ ಹೆದರಬೇಕು? ನ್ಯಾಯ ಪಡೆಯೋದು ನನ್ನ ಹಕ್ಕು’ ಎಂದು ಕುಂದನ್ ಸಿಂಗ್ ಅವರನ್ನು ಟ್ಯಾಗ್ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

ಕಳೆದ ಒಂದೂವರೆ ವರ್ಷ ನನಗೆ ಸುಲಭದ್ದಾಗಿರಲಿಲ್ಲ. ನಾನು ಖಿನ್ನತೆಗೆ ಒಳಗಾಗಿದ್ದೇನೆ. ನಾನು ಒಂಟಿಯಾಗಿದ್ದಾಗ ಅಳುತ್ತಿದ್ದೇನೆ. ದಂಗಲ್ ಟಿವಿಗಾಗಿ ಶುಭ್ ಶಗುನ್ ಧಾರಾವಾಹಿ ಒಪ್ಪಿಕೊಂಡಾಗಿನಿಂದ ಈ ಸಮಸ್ಯೆ ಆಗುತ್ತಿದೆ. ನನ್ನ ಜೀವನದಲ್ಲಿ ಮಾಡಿದ ಅತಿ ಕೆಟ್ಟ ನಿರ್ಧಾರ. ನನಗೆ ಅದನ್ನು ಮಾಡಬೇಕು ಎಂದಿರಲಿಲ್ಲ. ಬೇರೆಯವರ ಮಾತನ್ನು ಕೇಳಿ ಕಾಂಟ್ರ್ಯಾಕ್ಟ್ ಸಹಿ ಮಾಡಿದೆ’ ಎಂದು ಹೇಳಿಕೊಂಡಿದ್ದಾರೆ ಅವರು.

ಇದನ್ನೂ ಓದಿ: ಟಿಆರ್​ಪಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದ ‘ಪುಟ್ಟಕ್ಕನ ಮಕ್ಕಳು’; ಟಾಪ್ ಐದು ಧಾರಾವಾಹಿಗಳಿವು 

‘ಪ್ರೊಡಕ್ಷನ್ ಹೌಸ್ ಹಾಗೂ ನಿರ್ಮಾಪಕ ಕುಂದನ್ ಸಿಂಗ್ ಅವರು ನನಗೆ ಕಿರುಕುಳ ನೀಡಿದ್ದಾರೆ. ನನಗೆ ಅಂದು ಅನಾರೋಗ್ಯ ಆಗಿತ್ತು. ಜೊತೆಗೆ ಅವರು ಸಂಭಾವನೆಯನ್ನೂ ಕೊಡುತ್ತಿರಲಿಲ್ಲ. ಹೀಗಾಗಿ ನಾನು ಶೂಟ್ ಮಾಡಲ್ಲ ಎಂದೆ. ಇದಕ್ಕಾಗಿ ಅವರು ಮೇಕಪ್​ ರೂಂನಲ್ಲಿ ನನ್ನನ್ನು ಲಾಕ್ ಮಾಡಿದ್ದರು. ನಾನು ಬಟ್ಟೆ ಬದಲಿಸುವಾಗ ಬಾಗಿಲು ಮುರಿಯುವ ರೀತಿಯಲ್ಲಿ ಬಾಗಿಲು ಬಡಿಯುತ್ತಿದ್ದರು’ ಎಂದು ದುಃಖ ತೋಡಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ