‘ಒಂದು ವಾರ ಎಲ್ಲಿದ್ರಿ’; ಬಿಗ್ ಬಾಸ್ ಸ್ಪರ್ಧಿಗಳ ಪ್ರಶ್ನೆಗೆ ವರ್ತೂರು ಸಂತೋಷ್ ಉತ್ತರವೇನು?

|

Updated on: Nov 01, 2023 | 11:12 AM

ವರ್ತೂರು ಸಂತೋಷ್ ಅವರಿಗೆ ವಿನಯ್ ಅವರು ಬಂದು ‘ಬಿಸ್ನೆಸ್ ಮೇಲೆ ಹೊರಗೆ ಹೋಗಿದ್ರಾ ಅಥವಾ ಏನಾದರೂ ಸಮಸ್ಯೆ ಆಗಿತ್ತಾ’ ಎಂದು ಕೇಳಿದರು. ‘ವೈಯಕ್ತಿಕ ಕಾರಣ’ ಎಂದರು ಅವರು.

‘ಒಂದು ವಾರ ಎಲ್ಲಿದ್ರಿ’; ಬಿಗ್ ಬಾಸ್ ಸ್ಪರ್ಧಿಗಳ ಪ್ರಶ್ನೆಗೆ ವರ್ತೂರು ಸಂತೋಷ್ ಉತ್ತರವೇನು?
ವರ್ತೂರು ಸಂತೋಷ್
Follow us on

‘ಬಿಗ್ ಬಾಸ್ ಕನ್ನಡ ಸೀಸನ್ 10’ರಲ್ಲಿ ಸಾಕಷ್ಟು ಡ್ರಾಮಾಗಳು ನಡಿದಿವೆ. ಒಬ್ಬರ ಮೇಲೆ ಒಬ್ಬರು ಆರೋಪ ಹೊರಿಸುತ್ತಿದ್ದಾರೆ. ಮನೆಯಲ್ಲಿ ತಿಳಿಯದೇ ಎರಡು ಗುಂಪಾಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಕೂಡ ಜೋರಾಗಿದೆ. ಈಗ ವರ್ತೂರು ಸಂತೋಷ್ (Varthur Santosh) ಅವರು ದೊಡ್ಮನೆಗೆ ಕಂಬ್ಯಾಕ್ ಮಾಡಿದ್ದಾರೆ. ಇದು ಕೆಲವರ ಅಸಮಾಧಾನಕ್ಕೆ ಕಾರಣ ಆಗಿದೆ. ಅವರ ಆಗಮನ ಅನೇಕರಿಗೆ ಅಚ್ಚರಿ ತಂದಿದೆ. ಇನ್ನೂ ಕೆಲವರಿಗೆ ಅವರು ಒಂದು ವಾರ ಎಲ್ಲಿದ್ದರು ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ವರ್ತೂರು ಸಂತೋಷ್ ಅವರು ಉತ್ತರ ಕೊಡಲೇ ಇಲ್ಲ.

ಅಕ್ಟೋಬರ 31ರ ಎಪಿಸೋಡ್​ನಲ್ಲಿ ವರ್ತೂರು ಸಂತೋಷ್ ಅವರು ದೊಡ್ಮನೆಗೆ ಆಗಮಿಸಿದ್ದಾರೆ. ಅವರು ಬರುತ್ತಿದ್ದಂತೆ ತನಿಷಾ ಸೇರಿ ಅನೇಕರು ಖುಷಿಪಟ್ಟರು. ಆದರೆ, ಕೆಲವರಿಗೆ ಚಿಂತೆ ಆಯಿತು. ಒಂದು ವಾರ ಹೊರಗೆ ಇದ್ದ ಸ್ಪರ್ಧಿ ಮತ್ತೆ ದೊಡ್ಮನೆಗೆ ಬರೋಕೆ ಹೇಗೆ ಸಾಧ್ಯವಾಯಿತು ಎಂದು ಅನೇಕರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಈ ಸಂಬಂಧ ವರ್ತೂರು ಸಂತೋಷ್​ಗೆ ಪ್ರಶ್ನೆ ಕೇಳಲಾಗಿದೆ.

ವರ್ತೂರು ಸಂತೋಷ್ ಅವರಿಗೆ ವಿನಯ್ ಅವರು ಬಂದು ‘ಬಿಸ್ನೆಸ್ ಮೇಲೆ ಹೊರಗೆ ಹೋಗಿದ್ರಾ ಅಥವಾ ಏನಾದರೂ ಸಮಸ್ಯೆ ಆಗಿತ್ತಾ’ ಎಂದು ಕೇಳಿದರು. ‘ವೈಯಕ್ತಿಕ ಕಾರಣ’ ಎಂದರು ಅವರು. ‘ಏನಾಗಿತ್ತು ಎಂದು ಹೇಳಿ’ ಎಂದು ದೊಡ್ಮನೆಯಲ್ಲಿ ಕೆಲವರು ಒತ್ತಾಯ ಮಾಡಿದರು. ‘ನಾನು ಅದನ್ನು ರಿವೀಲ್ ಮಾಡುವಂತಿಲ್ಲ’ ಎಂದರು ಅವರು. ಈ ಮೂಲಕ ಅವರು ಈ ಬಗ್ಗೆ ಮೌನವಾಗೇ ಇದ್ದರು.

ಕಳೆದ ವಾರದ ವೀಕೆಂಡ್ ವೇಳೆ ಈ ವಿಚಾರ ಚರ್ಚೆಗೆ ಬಂತು. ಸುದೀಪ್ ಅವರು ಪರೋಕ್ಷವಾಗಿ ಈ ವಿಚಾರದ ಬಗ್ಗೆ ಮಾತನಾಡಿದ್ದರು. ‘ಇನ್ಮುಂದೆ ಉಗುರು ಕಟ್ ಮಾಡಿಕೊಳ್ಳುವಾಗ ಹುಶಾರು. ಅದು ಯಾರದ್ದೇ ಉಗುರು ಆಗಿರಲಿ’ ಎಂದಿದ್ದರು ಸುದೀಪ್. ಈ ಮೂಲಕ ಅವರು ಗುಟ್ಟನ್ನು ಬಿಟ್ಟುಕೊಟ್ಟಿರಲಿಲ್ಲ.

ಇದನ್ನೂ ಓದಿ: ಬಿಗ್ ಬಾಸ್​ಗೆ ಕಂಬ್ಯಾಕ್ ಮಾಡಿದ ಸಂತೋಷ್​ಗೆ ಶಾಕ್; ಅವರು ಇಲ್ಲಿರಲು ಅರ್ಹರಲ್ಲ ಎಂದ ಸಹ ಸ್ಪರ್ಧಿಗಳು

ಹುಲಿ ಉಗುರು ಹೊಂದಿರುವ ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರು ಬಂಧನಕ್ಕೆಒಳಗಾದರು. ಅವರು ಕೆಲವು ದಿನ ಜೈಲಿನಲ್ಲಿ ಇದ್ದು ಬಂದರು. ಜಾಮೀನು ಸಿಕ್ಕ ಬಳಿಕ ಅವರು ಮರಳಿ ದೊಡ್ಮನೆಗೆ ಬಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ