‘ಶೋಗೆ, ಹೆಣ್ಣುಮಕ್ಕಳಿಗೆ ಗೌರವ ಕೊಡು’; ಅಶ್ಲೀಲವಾಗಿ ವರ್ತಿಸಿದ ಮೈಕೆಲ್ ವಿರುದ್ಧ ನಮ್ರತಾ ಸಿಟ್ಟು
ನಾಮಿನೇಷನ್ ಆದವರ ಹಣೆಗೆ ಒಂದು ಪಟ್ಟಿ ಹಚ್ಚಬೇಕಿತ್ತು. ತನಿಷಾ ಅಂಟಿಸಿದ ಪಟ್ಟಿಯನ್ನು ಮೈಕೆಲ್ ಬ್ಯಾಕ್ಗೆ ಅಂಟಿಸಿಕೊಂಡಿದ್ದರು. ನಮ್ರತಾ ಬಂದ ತಕ್ಷಣ ಅವರು ಬ್ಯಾಕ್ ತೋರಿಸಿದರು. ಇದು ನಮ್ರತಾಗೆ ಇಷ್ಟ ಆಗಲಿಲ್ಲ.
ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸ್ಪರ್ಧಿಗಳ ಮಧ್ಯೆ ಜಗಳ ಆಗೋದು ಕಾಮನ್. ಅದರಲ್ಲೂ ಸಣ್ಣ ಪುಟ್ಟ ವಿಚಾರಗಳೇ ದೊಡ್ಡ ಸಮಸ್ಯೆ ತಂದೊಡ್ಡುತ್ತವೆ. ‘ಕನ್ನಡ ಬಿಗ್ ಬಾಸ್ ಸೀಸನ್ 10’ರಲ್ಲೂ ಇದು ಮುಂದುವರಿದಿದೆ. ಇತ್ತೀಚೆಗೆ ನಮ್ರತಾ ಗೌಡ (Namrata Gowda) ಹಾಗೂ ತನಿಷಾ ಕುಪ್ಪಂಡ ಸಾಕಷ್ಟು ಕಿತ್ತಾಡಿಕೊಂಡಿದ್ದರು. ಈಗ ನಮ್ರತಾ ಹಾಗೂ ಮೈಕೆಲ್ ವಿರುದ್ಧ ದೊಡ್ಡ ಕಲಹ ನಡೆದಿದೆ. ಮೈಕೆಲ್ ಅಗೌರವ ತೋರಿಸಿದರು ಎಂದು ನಮ್ರತಾ ಆರೋಪಿಸಿದ್ದಾರೆ. ಅಷ್ಟಕ್ಕೂ ಅಲ್ಲಾಗಿದ್ದೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಮಂಗಳವಾರದ (ಅಕ್ಟೋಬರ್ 31) ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ತೋರಿಸಲಾಯಿತು. ಈ ಬಾರಿ ನಾಮಿನೇಷನ್ ಅಧಿಕಾರ ಪಡೆಯಲು ಬಿಗ್ ಬಾಸ್ ಹೊಸ ರೀತಿಯ ಆಯ್ಕೆ ನೀಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯ ಕೆಲವೇ ಕೆಲವು ಮಂದಿಗೆ ನಾಮಿನೇಷನ್ ಮಾಡುವ ಅಧಿಕಾರ ಸಿಕ್ಕಿತು. ಡ್ರೋನ್ ಪ್ರತಾಪ್ ಕೃಪೆಯಿಂದ ಬಹುತೇಕ ಮಹಿಳಾ ಸ್ಪರ್ಧಿಗಳು ಈ ಅಧಿಕಾರ ಪಡೆದರು. ತನಿಷಾ ಅವರು ಮೈಕೆಲ್ನ ನಾಮಿನೇಟ್ ಮಾಡಿದರು.
ನಾಮಿನೇಷನ್ ಆದವರ ಹಣೆಗೆ ಒಂದು ಪಟ್ಟಿ ಹಚ್ಚಬೇಕಿತ್ತು. ತನಿಷಾ ಅಂಟಿಸಿದ ಪಟ್ಟಿಯನ್ನು ಮೈಕೆಲ್ ಬ್ಯಾಕ್ಗೆ ಅಂಟಿಸಿಕೊಂಡಿದ್ದರು. ನಮ್ರತಾ ಬಂದ ತಕ್ಷಣ ಅವರು ಬ್ಯಾಕ್ ತೋರಿಸಿದರು. ಇದು ನಮ್ರತಾಗೆ ಇಷ್ಟ ಆಗಲಿಲ್ಲ. ‘ನಾನು ನಿಮ್ಮನ್ನು ಗೌರವಿಸಲ್ಲ’ ಎಂದರು ಮೈಕೆಲ್. ‘ನಾನು ಕೂಡ ನಿನ್ನ ರೆಸ್ಪೆಕ್ಟ್ ಮಾಡಲ್ಲ. ನಾನು ಶೋಗೆ ಗೌರವ ಕೊಡ್ತೀನಿ. ನೀನು ಕೂಡ ಶೋಗೆ ಗೌರವ ಕೊಡು. ಮಹಿಳೆಯರಿಗೆ ಗೌರವ ಕೊಡು. ಅಲ್ಲಂಟಿಸಿಕೊಂಡು ಇದನ್ನು ತೋರಿಸೋಕೆ ನೀನ್ಯಾರು’ ಎಂದು ಜೋರಾಗಿಯೇ ಮಾತನಾಡಿದರು ನಮ್ರತಾ.
ಇದನ್ನೂ ಓದಿ: ನಾಮಿನೇಷನ್ ನಿಂದ ಜಗಳ, ವಿನಯ್ ಅಬ್ಬರ, ತುಕಾಲಿ, ಭಾಗ್ಯಶ್ರೀ ಕಣ್ಣೀರು, ನಮ್ರತಾ ಜಗಳ
ಈ ಬೆಳವಣಿಗೆ ನೋಡುತ್ತಿದ್ದ ವಿನಯ್ ಅವರು, ‘ಇದು ಹಾಸ್ಯಕ್ಕಾಗಿತ್ತು ಅಷ್ಟೇ. ಅವನ ಪರವಾಗಿ ನಾನು ಕ್ಷಮೆ ಕೇಳುತ್ತೇನೆ’ ಎಂದರು. ನಂತರ ಮೈಕೆಲ್ ಹಾಗೂ ನಮ್ರತಾ ನಡುವಿನ ಕಿತ್ತಾಟ ಮುಂದುವರಿಯಿತು. ಈಶಾನಿ ಕೂಡ ಬಂದು ಮೈಕೆಲ್ಗೆ ಬುದ್ಧಿವಾದ ಹೇಳಿದರು. ಮೈಕೆಲ್ ತಮ್ಮ ತಪ್ಪಿಲ್ಲ ಎಂದು ವಾದಿಸಿದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 9:30ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:11 am, Wed, 1 November 23