ಬಿಗ್ ಬಾಸ್ (Bigg Boss) ಅಂದರೆ ಯಾರು ಅನ್ನೋದು ಅನೇಕರ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ. ಕೆಲವರು ಸುದೀಪ್ನ ಬಿಗ್ ಬಾಸ್ ಎಂದು ಕರೆದರೆ ಇನ್ನೂ ಕೆಲವರು ಆದೇಶ ನೀಡುವವರನ್ನು ಬಿಗ್ ಬಾಸ್ ಎಂದು ಕರೆಯುತ್ತಾರೆ. ಈಗ ಫಿನಾಲೆ ವೀಕ್ನಲ್ಲಿ ಸ್ಪರ್ಧಿಗಳಿಗೆ ಒಂದು ಅವಕಾಶ ನೀಡಲಾಯಿತು. ಮನಸ್ಸಿನ ಆಸೆಯನ್ನು ಹೇಳಿಕೊಳ್ಳುವಂತೆ ಕೇಳಲಾಯಿತು. ಆಗ ವರ್ತೂರು ಸಂತೋಷ್ ಆಡಿದ ಮಾತು ಕೇಳಿ ಎಲ್ಲರೂ ನಕ್ಕಿದ್ದಾರೆ. ಸ್ವತಃ ಬಿಗ್ ಬಾಸ್ ಶಾಕ್ ಆಗಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಜನವರಿ 22ರಂದು ಬಿಗ್ ಬಾಸ್ ಪ್ರಸಾರ ಕಂಡಿದೆ.
ಒಂದು ಬಾವಿಯನ್ನು ನಿರ್ಮಿಸಲಾಗಿತ್ತು. ಈ ಬಾವಿಯ ಒಳಗೆ ತಮ್ಮಿಷ್ಟದ ಐದು ಆಸೆಗಳನ್ನು ಹೇಳಿಕೊಂಡು ಕಾಯಿನ್ ಹಾಕಬೇಕು. ಇಷ್ಟು ದಿನ ಅದುಮಿಟ್ಟುಕೊಂಡಿದ್ದ ಆಸೆಯನ್ನು ಎಲ್ಲರೂ ಹೇಳುತ್ತಾ ಬಂದರು. ವರ್ತೂರು ಸಂತೋಷ್ ಹೇಳಿದ ಒಂದು ಆಸೆ ಕೇಳಿ ಸ್ವತಃ ಬಿಗ್ ಬಾಸ್ ಶಾಕ್ಗೆ ಒಳಗಾದರು.
ವರ್ತೂರು ಸಂತೋಷ್ ಹಳ್ಳಿಕಾರ್ ಹೋರಿಗಳ ತಳಿಯನ್ನು ಬೆಳೆಸಿ ಫೇಮಸ್ ಆದವರು. ಹೀಗಾಗಿ, ಅವುಗಳನ್ನು ಮನೆ ಒಳಗೆ ಕಳುಹಿಸಬೇಕು ಎಂದರು. ಈ ಆಸೆಯನ್ನು ಈಡೇರಿಸೋದು ದೊಡ್ಡ ವಿಚಾರ ಅಲ್ಲವೇ ಅಲ್ಲ. ಇನ್ನು, ಮತ್ತೊಂದು ಬೇಡಿಕೆ ಇಟ್ಟರು. ಹಳ್ಳಿಕಾರ್ ಟಿ-ಶರ್ಟ್ ಹಾಗೂ ಚೈನ್ ಅನ್ನು ಕೊಡಿ ಎಂದು ಅವರು ಕೇಳಿಕೊಂಡರು. ಅವರ ಮತ್ತೊಂದು ಆಸೆ ಕೇಳಿ ಬಿಗ್ ಬಾಸ್ಗೆ ಶಾಕ್ ಆಯಿತು. ‘ನಾನು ಬಿಗ್ ಬಾಸ್ನ ನೋಡಬೇಕು’ ಎಂದು ಆಸೆ ವ್ಯಕ್ತಪಡಿಸಿದರು.
ವರ್ತೂರು ಸಂತೋಷ್ ಅವರ ಬೇಡಿಕೆಯನ್ನು ಬಿಗ್ ಬಾಸ್ ಅಲ್ಲಗಳೆದರು. ಇದು ಸಾಧ್ಯವೇ ಇಲ್ಲ ಎಂದು ನೇರವಾಗಿ ಹೇಳಿದರು. ಆ ಬಳಿಕ ಅವರು ಬೇರೆ ಆಸೆ ಹೇಳಿದರು. ಈ ಪೈಕಿ ಯಾವುದನ್ನು ಬಿಗ್ ಬಾಸ್ ಈಡೇರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಆಸೆಗಳ ಬಿಚ್ಚಿಟ್ಟ ಮನೆ ಮಂದಿ, ಈಡೇರಿಸುತ್ತಾರಾ ಬಿಗ್ಬಾಸ್? ಯಾರ ಆಸೆ ಏನು?
ಇನ್ನು ಸಂಗೀತಾ ಶೃಂಗೇರಿ ಅವರ ಆಸೆ ದೊಡ್ಡದಾಗಿತ್ತು. ಯಶ್ ಹಾಗೂ ರಾಧಿಕಾ ಪಂಡಿತ್ ಅವರಿಂದ ಸಂದೇಶ ಬರಬೇಕು. ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಅವರು ಭಾಗವಹಿಸಬೇಕು ಎಂದು ಕೋರಿದರು. ಇದನ್ನು ತಳ್ಳಿ ಹಾಕಿದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 am, Tue, 23 January 24