ತೆಲುಗು ಚಿತ್ರರಂಗದ ಹಿರಿಯ ನಟ ಗಿರಿ ಬಾಬು ನಿಧನ

ಹಲವಾರು ತೆಲುಗು ಸಿನಿಮಾಗಳಲ್ಲಿ ನಾಯಕ, ಪೋಷಕ ಪಾತ್ರ, ವಿಲನ್​​, ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಗಿರಿ ಬಾಬು ಇಂದು (ನವೆಂಬರ್ 14) ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ಸಮಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಕೊನೆ ಉಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯಿಂದ ತೆಲುಗು ಚಲನಚಿತ್ರರಂಗದಲ್ಲಿ ತೀವ್ರ ವಿಷಾದ ಮೂಡಿದೆ.

ತೆಲುಗು ಚಿತ್ರರಂಗದ ಹಿರಿಯ ನಟ ಗಿರಿ ಬಾಬು ನಿಧನ
Giri Babu

Updated on: Nov 14, 2026 | 5:25 PM

ಮುಖ್ಯಾಂಶಗಳು

  • ತೆಲುಗು ಚಿತ್ರರಂಗದ ಹಿರಿಯ ನಟ ನಿಧನ
  • 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಟ
  • ಗಿರಿ ಬಾಬು ನಿಧನಕ್ಕೆ ಚಿತ್ರಗಣ್ಯರ ಸಂತಾಪ

ಹಲವಾರು ತೆಲುಗು ಸಿನಿಮಾಗಳಲ್ಲಿ ನಾಯಕ, ಪೋಷಕ ಪಾತ್ರ, ವಿಲನ್​​, ಹಾಸ್ಯ ಪಾತ್ರಗಳಲ್ಲಿ ನಟನೆ ಮಾಡಿದ್ದ ಹಿರಿಯ ನಟ ಗಿರಿ ಬಾಬು ಇಂದು (ನವೆಂಬರ್ 14) ನಿಧನ ಹೊಂದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಅವರು ಕಳೆದ ಕೆಲ ಸಮಯದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದರು. ಹೈದರಾಬಾದ್​​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಅವರು ಕೊನೆ ಉಸಿರೆಳೆದಿದ್ದಾರೆ. ಅವರ ನಿಧನದ ಸುದ್ದಿಯಿಂದ ತೆಲುಗು ಚಲನಚಿತ್ರರಂಗದಲ್ಲಿ ತೀವ್ರ ವಿಷಾದ ಮೂಡಿದೆ.

ತೆಲುಗು ಚಿತ್ರರಂಗದಲ್ಲಿ ಅವರು ಅವರು ವಿಭಾಗಗಳಲ್ಲಿ ಕೆಲಸ ಮಾಡಿದ್ದರು. ನಟನೆ ಮಾತ್ರವೇ ಅಲ್ಲದೆ, ಸಿನಿಮಾ ನಿರ್ದೇಶನ ಮತ್ತು ನಿರ್ಮಾಣವನ್ನೂ ಸಹ ಅವರು ಮಾಡಿದ್ದರು. 1943 ಜೂನ್ 8 ರಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಕನಿಗಿರಿ ಮಂಡಲದ ರಾವೂರು ಗ್ರಾಮದಲ್ಲಿ ಮಧ್ಯಮ ವರ್ಗದ ರೈತ ಕುಟುಂಬದಲ್ಲಿ ಜನಿಸಿದ ಇವರ ಮೂಲ ಹೆಸರು ಶೇಷಗಿರಿ ರಾವ್. ಚಿಕ್ಕ ವಯಸ್ಸಿನಿಂದಲೇ ನಟನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಗಿರಿಬಾಬು, ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಹಲವಾರು ನಾಟಕ ಸಂಘಗಳಲ್ಲಿ ತಮ್ಮ ಅಭಿನಯದಿಂದ ಪ್ರಶಂಸೆಯನ್ನು ಪಡೆದರು.

Loading...

ಚಲನಚಿತ್ರಗಳಲ್ಲಿ ನಟಿಸಬೇಕೆಂಬ ಬಲವಾದಾಸೆಯಿಂದ ಮದ್ರಾಸಿಗೆ ತೆರಳಿದರು. 1973 ರಲ್ಲಿ ಬಿಡುಗಡೆಯಾದ ‘ಜಗಮೇ ಮಾಯ’ ಚಿತ್ರದ ಮೂಲಕ ಅವರು ಬೆಳ್ಳಿತೆರೆಗೆ ಪರಿಚಯವಾದರು. ಗಿರಿಬಾಬು ಅವರಿಗೆ ಉತ್ತಮ ಬ್ರೇಕ್ ನೀಡಿದ ಪಾತ್ರಗಳು ಹೆಚ್ಚಾಗಿ ನೆಗೆಟಿವ್ ಶೇಡ್ಸ್ ಇರುವಂತಹುದೇ. ಆರಂಭದಲ್ಲಿ ಅವರು ಸ್ಟೈಲಿಷ್ ವಿಲನ್ ಆಗಿ ಗಮನ ಸೆಳೆದಿದ್ದರು. ಸೂಟು, ಬೂಟು ಧರಿಸಿ, ಸಿಗರೇಟ್ ಸೇದುತ್ತಾ ನಿಧಾನವಾಗಿ ಮಾತನಾಡುತ್ತಾ ಹೀಗೆ ವಿಭಿನ್ನ ಲುಕ್ ಅನ್ನು ವಿಲನ್ ಪಾತ್ರಗಳಿಗೆ ನೀಡಿದ್ದರು. ಸ್ಟಾರ್ ನಟರುಗಳಾದ ಚಿರಂಜೀವಿ, ಬಾಲಕೃಷ್ಣ, ನಾಗಾರ್ಜುನ ಮುಂತಾದ ಯುವ ನಾಯಕರ ಆರಂಭಿಕ ಚಿತ್ರಗಳಲ್ಲಿ ವಿಲನ್ ಆಗಿ ನಟಿಸಿದ್ದರು.

ಇದನ್ನೂ ಓದಿ:ತೆಲುಗು ಸಿನಿಮಾನಲ್ಲಿ ನಟಿಸುವ ಆಸೆ ನಟಿ ಹುಮಾ ಖುರೇಷಿಗೆ

ಆ ನಂತರ ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಹಾಸ್ಯನಟರಾಗಿ, ಪೋಷಕ ಪಾತ್ರಗಳಲ್ಲಿ ನಟನೆ ಮಾಡಿದರು. ಈ ವರೆಗೂ ಸುಮಾರು 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ನಟಿಸಿದ್ದು, ತೆಲುಗಿನಲ್ಲಿ ಅತಿ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿರುವ ನಟರುಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಸುಮಾರು ಐದು ದಶಕಗಳ ಕಾಲ ಅವರು ಕೆಲಸ ಮಾಡಿದ್ದಾರೆ.

ಗಿರಿಬಾಬು ಕೇವಲ ನಟರಾಗಿ ಮಾತ್ರವಲ್ಲದೆ, ಬೇರೆ ಬೇರೆ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದಾರೆ. ಜಯಭೇರಿ ಆರ್ಟ್ ಪ್ರೊಡಕ್ಷನ್ಸ್ ಹೆಸರಿನಲ್ಲಿ ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ, ಅನೇಕ ಚಿತ್ರಗಳನ್ನು ನಿರ್ಮಿಸಿದರು. ‘ದೇವತಲಾರ ದೀವಿಂದಿಚಿ’, ‘ರಾಣಿಕಾಸುಲ ರಂಗಮ್ಮ’, ‘ಇಂದ್ರಜಿತ್’ ಮುಂತಾದ ಸಿನಿಮಾಗಳನ್ನು ನಿರ್ದೇಶನ ಸಹ ಮಾಡಿದ್ದಾರೆ. ಗಿರಿಬಾಬು ಅವರ ನಿಧನಕ್ಕೆ ಚಿತ್ರರಂಗದ ಹಲವರು ಸಂತಾಪ ವ್ಯಕ್ತಪಡಿಸಿದ್ದಾರೆ. ಗಿರಿಬಾಬು, ಹಿರಿಯ ನಟರುಗಳಿಂದ ಆರಂಭಿಸಿ ಇತ್ತೀಚೆಗಿನ ಹೊಸ ನಾಯಕ ನಟರುಗಳ ಜೊತೆಗೂ ಸಹ ನಟನೆ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us